»   » ವಂಶೋದ್ಧಾರಕನಾಗಿ ವಿಜಯ್ ರಾಘವೇಂದ್ರ ಟ್ರೈಲರ್ ನೋಡಿ

ವಂಶೋದ್ಧಾರಕನಾಗಿ ವಿಜಯ್ ರಾಘವೇಂದ್ರ ಟ್ರೈಲರ್ ನೋಡಿ

Posted By:
Subscribe to Filmibeat Kannada

ತುಂಬಾ ದಿನಗಳ ನಂತರ ಲಾಂಗ್ ಬ್ಯಾಕ್ ಆಗಿರುವ ಸ್ಯಾಂಡಲ್ ವುಡ್ ಸ್ಟಾರ್ ವಿಜಯ ರಾಘವೇಂದ್ರ 'ವಂಶೋದ್ಧಾರಕ' ಚಿತ್ರದ ಮೂಲಕ ಗಾಂಧಿನಗರದತ್ತ ಮುಖ ಮಾಡಿದ್ದಾರೆ. ಸ್ಯಾಂಡಲ್ ವುಡ್ ಬ್ಯುಸಿ ನಟಿ, ಕನ್ನಡತಿ ಮೇಘನಾ ರಾಜ್, ವಿಜಯ ರಾಘವೇಂದ್ರ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ 'ವಂಶೋದ್ಧಾರಕ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ಪಕ್ಕಾ ಫ್ಯಾಮಿಲಿ ಎಂರ್ಟಟ್ರೈನರ್ ಜೊತೆಗೆ ಹಳ್ಳಿಯ ಸೊಗಡನ್ನು ಬಿಂಬಿಸುವ 'ವಂಶೋದ್ಧಾರಕ' ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ....

Watch Kannada movie 'Vamshodharaka' official trailer

ಓಂ ಶ್ರೀ ಕಾಳಿಕಾಮಾತಾ ಪ್ರೊಡಕ್ಷನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ 'ವಂಶೋದ್ಧಾರಕ' ಚಿತ್ರದಲ್ಲಿ ಅಮ್ಮ-ಮಗನ ಪ್ರೀತಿಯನ್ನು ಹೈಲೈಟ್ ಮಾಡಲಾಗಿದೆ. ಹಳ್ಳಿಯ ಸುಂದರ ಪರಿಸರ, ಹಾಗೂ ರೈತನಿಗೂ ಭೂಮಿಗೂ ಇರುವ ಅವಿನಾಭಾವ ಸಂಬಂಧವನ್ನು ಈ ಚಿತ್ರದ ಮೂಲಕ ನಿರ್ದೇಶಕ ಆದಿತ್ಯ ಚಿಕ್ಕಣ್ಣ ಹೇಳಲು ಹೊರಟಿದ್ದಾರೆ.['ವಂಶೋದ್ಧಾರಕ'ನಿಗೆ ನಾಯಕಿ ಮೇಘನಾ ರಾಜ್]

ತಾಯಿ-ಮಗನ ಪರಿಶುದ್ಧ ಪ್ರೀತಿ, ಹಾಗೂ ನಾಯಕನಿಗೆ ಕನ್ನಡದ ಮೇಲಿರುವ ಪ್ರೀತಿ ಗೌರವ ಇವೆಲ್ಲಾ 'ವಂಶೋದ್ದಾರಕ' ಚಿತ್ರದ ಟ್ರೈಲರ್ ನ ಹೈಲೈಟ್. 'ಬುದ್ದಿ ಹೇಳದ ತಂದೆ, ವಿದ್ಯೆ ಕಲಿಸದ ಗುರು, ಬಿದ್ದಿರಲು ಬಂದು ನೋಡದ ತಾಯಿ, ಕಡುವೈರಿಗಳಿದ್ದಂತೆ, ಸರ್ವಜ್ಞ', ಇನ್ನು ಮುಂದೆ ಕನ್ನಡ ಉಳಿಯುವುದಾದರೂ ಹೇಗೆ, ಅಂತ ಬುದ್ದಿ ಮಾತುಗಳನ್ನಾಡುವ ಚಿತ್ರದ ನಾಯಕ ಎಲ್ಲರಿಗೂ ಇಷ್ಟವಾಗುತ್ತಾನೆ.

ಇನ್ನೂ 'ವಂಶೋದ್ದಾರಕ' ನ ನಾಯಕಿ ಮೇಘನಾ ರಾಜ್ 'ರಾಜಾಹುಲಿ'ಯ ಚಿತ್ರದ ನಂತರ ಮತ್ತೊಮ್ಮೆ ಪಕ್ಕಾ ಹಳ್ಳಿ ಹುಡುಗಿಯಾಗಿ ಲಂಗ ಧಾವಣಿಯಲ್ಲಿ ಮಿಂಚಿದ್ದಾರೆ.

ಕಲರ್ ಫುಲ್ ಹಾಡುಗಳು ಹಾಗೂ ರಂಗಾಯಣ ರಘು ಪಂಚಿಂಗ್ ಡೈಲಾಗ್ಸ್, ವಿಜಯ ರಾಘವೇಂದ್ರ ಅವರ ಸ್ವಲ್ಪ ಫೈಟ್, ಸಾಧುಕೋಕಿಲ ಕಾಮಿಡಿ, ಇರುವ 'ವಂಶೋದ್ಧಾರಕ' ಎಲ್ಲರಿಗೆ ಇಷ್ಟವಾಗುವ ಚಿತ್ರ ಎಂದರೂ ತಪ್ಪಾಗ್ಲಿಕ್ಕಿಲ್ಲಾ.[ತೆರೆಗೆ ಸಿದ್ಧವಾಗಿದೆ ವಿಜಯ ರಾಘವೇಂದ್ರ 'ವಂಶೋದ್ಧಾರಕ']

ವಿ.ಮನೋಹರ್ ಮ್ಯೂಸಿಕ್ ಕಂಪೋಸ್ ಮಾಡಿರುವ ಚಿತ್ರದಲ್ಲಿ ರಂಗಾಯಣ ರಘು, ಲಕ್ಷ್ಮಿ, ನವೀನ್ ಕೃಷ್ಣ, ಶ್ರೀನಿವಾಸ್ ಮುಂತಾದವರು ಪ್ರಮುಖ ತಾರಾಗಣದಲ್ಲಿದ್ದಾರೆ.

ಒಟ್ಟಿನಲ್ಲಿ ಲಾಂಗ್ ಬ್ಯಾಕ್ ಆಗಿರುವ ವಿಜಯ ರಾಘವೇಂದ್ರ ಅವರಿಗೆ 'ವಂಶೋದ್ಧಾರಕ' ಬ್ರೇಕ್ ನೀಡಬಹುದೇ, ಅಂತ ನೋಡಲು ಚಿತ್ರದ ಬಿಡುಗಡೆಯವರೆಗೂ ಕಾಯಬೇಕಿದೆ.

English summary
Kannada Movie 'Vamshodharaka' official trailer is released. 'Vamshodharaka' features Actor Vijay Raghavendra, Actress Meghana Raj in the lead role. The movie is directed by Adithya Chikkanna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada