»   » ವಿಡಿಯೋ: 'ವರ್ತಮಾನ'ದಲ್ಲಿ ಸಿಲುಕಿದ ಸಂಚಾರಿ ವಿಜಯ್

ವಿಡಿಯೋ: 'ವರ್ತಮಾನ'ದಲ್ಲಿ ಸಿಲುಕಿದ ಸಂಚಾರಿ ವಿಜಯ್

Posted By:
Subscribe to Filmibeat Kannada

'ನಾನು ಅವನಲ್ಲ ಅವಳು' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡ ನಟ ಸಂಚಾರಿ ವಿಜಯ್ ಅವರು ಇದೀಗ ಹಲವಾರು ವಿಭಿನ್ನ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮೊನ್ನೆ ಮೊನ್ನೆ ಕಾಮಿಡಿ ಹಾರರ್ 'ರಿಕ್ತ' ['ರಿಕ್ತ' ಇದು ಸಂಚಾರಿ ವಿಜಯ್ ಬತ್ತಳಿಕೆಯಿಂದ ಹೊರಟ ಹೊಸ ಬಾಣ] ಎಂಬ ಚಿತ್ರದ ನಂತರ ಇದೀಗ 'ವರ್ತಮಾನ' ಎಂಬ ಮತ್ತೊಂದು ವಿಭಿನ್ನ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ.

http://videos.filmibeat.com/kannada/trailers/varthamana-official-teaser-223168.html

ಈಗಾಗಲೇ 'ವರ್ತಮಾನ' ಚಿತ್ರದ ಟೀಸರ್ ಬಿಡುಗಡೆ ಆಗಿದ್ದು, ಸಾಕಷ್ಟು ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ. ಜೊತೆಗೆ 'ವರ್ತಮಾನ' ಚಿತ್ರದ ಟೀಸರ್ ಫ್ರಾನ್ಸ್ ನಲ್ಲಿ ಬಿಡುಗಡೆ ಆಗಿದ್ದು ವಿಶೇಷ. ಅಲ್ಲದೇ ಟೀಸರ್ ಬಿಡುಗಡೆ ಆದ ಒಂದೇ ದಿನದಲ್ಲಿ 1 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ.

ನಟಿ ಸಂಜನಾ ಪ್ರಕಾಶ್ ಅವರು ಸಂಚಾರಿ ವಿಜಯ್ ಅವರ ಜೊತೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ 'ವರ್ತಮಾನ' ಟೀಸರ್ ನೋಡುತ್ತಿದ್ದರೆ, ಇದು ಮಾನಸಿಕ ಖಾಯಿಲೆ ಇರುವ ವ್ಯಕ್ತಿ ಮತ್ತು ಕ್ರೈಂ ಸುತ್ತ-ಮುತ್ತ ನಡೆಯುವ ಕಥೆ ಇರಬಹುದು ಎಂದೆನಿಸುತ್ತದೆ.[ಸಂದರ್ಶನ : ಸಂಚಾರಿ ವಿಜಯ್ 'ಅವನು...ಅವಳಾದ' ಪರಿ]

http://videos.filmibeat.com/kannada/trailers/varthamana-official-teaser-223168.html

ಒಟ್ನಲ್ಲಿ ಹೊಸ ಪ್ರಯೋಗ ಮಾಡಿರುವ 'ವರ್ತಮಾನ' ಸಿನಿಮಾ ಸದ್ಯಕ್ಕೆ ಟೀಸರ್ ಮೂಲಕ ಬಹಳ ಕುತೂಹಲ ಸೃಷ್ಟಿ ಮಾಡಿದೆ. 'ಲಿಪ್ ಸ್ಟಿಕ್' ಚಿತ್ರದ ಖ್ಯಾತಿಯ ನಿರ್ದೇಶಕ ಉಮೇಶ್ ಅಂಶಿ ಅವರು 'ವರ್ತಮಾನ'ಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ.

ಸಂಚಾರಿ ವಿಜಯ್ ಮತ್ತು ಸಂಜನಾ ಪ್ರಕಾಶ್ ಅವರ ವಿಶಿಷ್ಟ 'ವರ್ತಮಾನ' ಚಿತ್ರದ ಟೀಸರ್ ಇಲ್ಲಿದೆ ನೋಡಿ....

Watch Kannada Movie 'Varthamana' Official Teaser
English summary
Watch Kannada Movie 'Varthamana' Official Teaser, Kannada Actor Sanchari Vijay, Actress Sanjana Prakash, Kailash TV, Ramasamy and others in the lead role. Music & background score - Sarvana. Written & directed by Umesh Amshi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada