»   » ಕಾಲೇಜುಗಳಿಗೆ ವಾಸ್ಕೋಡಿಗಾಮನಾಗಿ ಕಿಶೋರ್ ಎಂಟ್ರಿ

ಕಾಲೇಜುಗಳಿಗೆ ವಾಸ್ಕೋಡಿಗಾಮನಾಗಿ ಕಿಶೋರ್ ಎಂಟ್ರಿ

Posted By:
Subscribe to Filmibeat Kannada

ಬಹುಭಾಷಾ ನಟ ಕಿಶೋರ್ ಕುಮಾರ್ ಬರೀ ಸ್ಯಾಂಡಲ್ ವುಡ್ ಮಾತ್ರವಲ್ಲದೆ ಇತರೇ ಭಾಷೆಗಳಲ್ಲೂ ಸದ್ಯಕ್ಕೆ ಲೀಡ್ ನಲ್ಲಿ ಮಿಂಚುತ್ತಿರುವ ನಟ. ಕೇವಲ ವಿಲನ್ ರೋಲ್ ಹಾಗೂ ಕೆಲವೊಂದು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ಬಿಟ್ಟರೆ ಪೂರ್ಣ ಪ್ರಮಾಣದ ನಟನಾಗಿ ಕಾಣಿಸಿಕೊಂಡಿದ್ದು, ಕನ್ನಡದಲ್ಲಿ 'ಹುಲಿ', ಹಾಗೂ 'ಜಟ್ಟ' ಚಿತ್ರದ ಮೂಲಕ.

ಇದೀಗ ಪ್ರತಿಭಾವಂತ ನಟ ಕಿಶೋರ್ ಮತ್ತೆ 'ವಾಸ್ಕೋಡಿಗಾಮ' ನಾಗಿ ಗಾಂಧಿನಗರಕ್ಕೆ ಭರ್ಜರಿ ಎಂಟ್ರಿ ಕೊಡುತ್ತಿದ್ದಾರೆ. ಚಿತ್ರದ ಟೈಟಲೇ ಹೇಳುವಂತೆ 'ವಾಸ್ಕೋಡಿಗಾಮ' ಅನ್ನುವ ವಿಚಿತ್ರ ಟೈಟಲ್ ಇಟ್ಟುಕೊಂಡು ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ.

ಇದೀಗ ಅಶ್ವಿನಿ ಕ್ರಿಯೇಷನ್ಸ್ ಅರ್ಪಿಸುವ 'ವಾಸ್ಕೋಡಿಗಾಮ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ವಿದ್ಯಾರ್ಥಿಗಳ ಪ್ರೀತಿಯ ವಾಸು ಸರ್ (ಗುರುಗಳ) ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಿಶೋರ್ ಹಾಗೂ ಪಾರ್ವತಿ ನಾಯರ್ ಅಭಿನಯದ 'ವಾಸ್ಕೋಡಿಗಾಮ' ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ...[ಒನ್ಇಂಡಿಯಾ ಜೊತೆ ನಟ ಕಿಶೋರ್ ಮಾತುಕತೆ]

Watch Kannada movie 'Vascodigama' official trailer

ಇದೇ ಮೊದಲ ಬಾರಿಗೆ ಕರ್ನಾಟಕದಾದ್ಯಂತ ಸುಮಾರು 200 ಕಾಲೇಜುಗಳಲ್ಲಿ 'ವಾಸ್ಕೋಡಿಗಾಮ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, 'ಉಗ್ರಂ' ಖ್ಯಾತಿಯ ಶ್ರೀಮುರಳಿ ಚಿತ್ರದ ಟ್ರೈಲರ್ ಬಿಡುಗಡೆಗೊಳಿಸಿದ್ದಾರೆ.

'ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಾಃ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ' ಎನ್ನುವಂತೆ ನಮ್ಮ ಭಾರತ ದೇಶದಲ್ಲಿ ಗುರುವಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ.

ಅಂದಹಾಗೆ ನಾವೀಗ ಇಷ್ಟು ಪೀಠಿಕೆ ಹಾಕಲು ಮುಖ್ಯ ಉದ್ದೇಶ ಏನಪ್ಪಾ ಅಂದ್ರೆ 'ವಾಸ್ಕೋಡಿಗಾಮ' ಚಿತ್ರದಲ್ಲಿ ನಟ ಕಿಶೋರ್ ಮೇಷ್ಟ್ರ ಪಾತ್ರದಲ್ಲಿ ಮಿಂಚಿರುವುದು. ಮಾತ್ರವಲ್ಲದೇ ಒಂದು ಕಾಲದಲ್ಲಿ ರಿಯಲ್ ಲೈಫ್ ನಲ್ಲೂ ಕಿಶೋರ್ ಮೇಷ್ಟ್ರರಾಗಿ ಇದ್ದಿದ್ದು, ವಿಶೇಷ.[200 ಕಾಲೇಜುಗಳಲ್ಲಿ 'ವಾಸ್ಕೋಡಗಾಮ'ನ ಟ್ರೈಲರ್]

Watch Kannada movie 'Vascodigama' official trailer

ಎಂದಿನಂತೆ ಖಡಕ್ ವಿಲನ್ ರೋಲ್ ನಲ್ಲಿ ಮಿಂಚದೆ ಸ್ವಲ್ಪ ಡಿಫರೆಂಟಾಗಿ ಕಾಣಿಸಿಕೊಂಡಿರುವ ಕಿಶೋರ್ ಸಖತ್ ಪಂಚ್ ಡೈಲಾಗ್ ಜೊತೆಗೆ ಡಬಲ್ ಮೀನಿಂಗ್ ಗಳ ಮೂಲಕ ಪ್ರೇಕ್ಷಕರಿಗೆ ಭಾರಿ ಮನೋರಂಜನೆ ನೀಡಲಿದ್ದಾರೆ.

ಪ್ರೀಮಿಯರ್ ಶಿಕ್ಷಣ ಸಂಸ್ಥೆಯ ಬಗ್ಗೆ ಹೇಳ ಹೊರಟಿರುವ ನಿರ್ದೇಶಕ ಮಧುಚಂದ್ರ ಈ ಮಾನ್ಸೂನ್ ಗೆ ಸಖತ್ತಾಗಿರೋ ಒಂದು ಎಂಟರ್ಟಟೈನ್ಮೆಂಟ್ ಪ್ಯಾಕೇಜ್ ಜೊತೆಗೆ ಒಬ್ಬ ಹೊಸ ಮಾಡರ್ನ್ ಗುರುವನ್ನ ಪ್ರೇಕ್ಷಕರಿಗೆ ಪರಿಚಯಿಸುತ್ತಿದ್ದಾರೆ.

'ಅಟೆಂಡೆನ್ಸ್ ಅನ್ನೋದು ಕಾಲೇಜಿನವರು ಸ್ಟೂಡೆಂಟ್ಸ್ ಗಳಿಗೆ ಹಾಕುವ ಕಬ್ಬಿಣದ ಕವಚ, ನೀವು ಅದನ್ನ ಕಿತ್ತು ಹಾಕಿಕೊಂಡು ಕಾಡು ಕುದುರೆ ಥರಾ ಲಂಗು-ಲಗಾಮಿಲ್ಲದೇ ಓಡ್ತಾ ಇರ್ಬೇಕು ಕಣ್ರೋ', ಜೀವನದಲ್ಲಿ ಏನೇ ಮಾಡಿದ್ರೂ ಇಷ್ಟಪಟ್ಟು ಮಾಡ್ಬೇಕು ಕಷ್ಟ ಪಟ್ಟು ಮಾಡಬಾರದು' ಹೀಗೆ ಸಖತ್ ಪಂಚ್ ಡೈಲಾಗ್ಸ್ ನೋಡ್ತಾ ಇದ್ರೆ, ತಿಳಿಯುವ ಒಂದು ವಿಚಾರ ಏನೆಂದರೆ ಇದು ಪಕ್ಕಾ ಮಾಡರ್ನ್ ಗುರು-ಶಿಷ್ಯರ ಹವಾ ಅಂತ.

ಒಟ್ನಲ್ಲಿ ನ್ಯೂ ಸ್ಕೂಲ್ ಗುರು v/s ಹಳೇ ಸ್ಕೂಲ್ ಗುರುಗಳ ನಡುವೆ ನಡೆಯುವ 'ವಾಸ್ಕೋಡಿಗಾಮ' ಚಿತ್ರದಲ್ಲಿ ನಮ್ ಗುರುಗೊಂದು, ಗುರುಣಿಯಾಗಿ ಪಾರ್ವತಿ ನಾಯರ್ ಕಾಣಿಸಿಕೊಂಡಿದ್ದು, ಟೀಚರ್ ಪಾತ್ರದಲ್ಲಿ ಕಿಶೋರ್ ಜೊತೆ 'ನೀನು ನಾನೀಬ್ಬರೇ ಕುಂತು ಮಾತಾಡೋಣ ಕ್ಯಾಂಪಸ್ ಮೂಲೇಲಿ ಸಿಗಬಹುದಾ'? ಅಂತ ರೋಮ್ಯಾಂಟಿಕ್ ಆಗಿ ಡ್ಯುಯೆಟ್ ಹಾಡಿದ್ದಾರೆ. ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರ ಮ್ಯೂಸಿಕ್ ಕಂಪೋಸಿಷನ್ ಈ ಚಿತ್ರಕ್ಕಿದೆ.

ಒಟ್ಟಾರೆ ಪಕ್ಕಾ ಮನೋರಂಜನೆ ಜೊತೆಗೆ ಸ್ವಲ್ಪ ಮಾಸ್ ಕಥೆಯಾಧರಿತ ಕಾಲೇಜು ಡ್ರಾಮಾ, ಇವಿಷ್ಟು ಇರುವ ಚಿತ್ರದ ಟ್ರೈಲರ್ ಸಖತ್ ರೆಸ್ಪಾನ್ಸ್ ಗಿಟ್ಟಿಸುತ್ತಿದೆ. ಇನ್ನೂ 'ವಾಸ್ಕೋಡಿಗಾಮನ' ಪಂಚ್ ಡೈಲಾಗ್ಸ್ ಹಾಗೂ ಕಾಮಿಡಿ ಕಿಕ್ ಗೆ ನೀವು ಸ್ವಲ್ಪ ದಿನ ಕಾಯಲೇಬೇಕು.

English summary
Kannada movie 'Vascodigama' official trailer is released in 200 Colleges across Karnataka at a time. 'Vascodigama' features Kannada actor Kishor, Actress Parvathy Nair in the lead role. The movie is directed by Madhuchandra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada