twitter
    For Quick Alerts
    ALLOW NOTIFICATIONS  
    For Daily Alerts

    "ಸ್ಮೈಲ್ ಗುರು" ಅನ್ನುವರ ಮುಖದಲ್ಲಿ ನಿರೀಕ್ಷೆ ಭಾರ

    |

    ಕನ್ನಡ ಚಿತ್ರರಂಗಕ್ಕೆ ಪ್ರತಿದಿನ ಹೊಸ ನೀರು ಬರುತ್ತಲೇ ಇದೆ. ಕೇವಲ ಯೂ ಟ್ಯೂಬ್ ಗೆ ಸೀಮಿತವಾಗಿದ್ದ ಶಾರ್ಟ್ ಫಿಲ್ಮ್ ಗಳು ಇಂದು ಚಿತ್ರ ಮಂದಿರದಲ್ಲಿಯೂ ಬಿಡುಗಡೆಯಾಗುತ್ತವೆ.

    ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಟೆಂಟ್ ಸಿನೆಮಾಸ್‌'ನಲ್ಲಿ ನಟನೆಯನ್ನು ಅರಿತಿರುವ ರಕ್ಷಿತ್ ‘ಸ್ಮೈಲ್ ಗುರು' ಎಂಬ ಕಿರುಚಿತ್ರವೊಂದನ್ನು ತಯಾರಿಸಿದ್ದಾರೆ. ಅಲ್ಲದೇ ಕಿರು ಚಿತ್ರಕ್ಕೆಂದೇ ವಿಶೇಷ ಸ್ಟಾಫ್ ಮೋಷನ್ ಗ್ರಾಫಿಕ್ ಪ್ರೋಮೋ ಕೂಡಾ ಬಿಡುಗಡೆ ಮಾಡಿದ್ದಾರೆ. ಲೂಸ್ ಮಾದ ಯೋಗೀಶ್ ರ ಅಪ್ಪಟ ಅಭಿಮಾನಿಯ ಕಿರುಚಿತ್ರದ ಪ್ರೋಮೊಕ್ಕೆ 1200 ಫೋಟೋ ಗಳನ್ನು ಬಳಸಿಕೊಳ್ಳಲಾಗಿದೆ.[ಇತಿಹಾಸ ನಿರ್ಮಿಸಲು ಮುಂದಾಗಿರುವ ಸ್ಮೈಲ್ ಗುರು ಚಿತ್ರ]

    ಅರ್ಧ ಗಂಟೆಯ ಕಿರು ಚಿತ್ರಕ್ಕೆ ರಕ್ಷಿತ್ ನಾಯಕ, ಮೇಘ ಶಣೈ ನಾಯಕಿ. ಕಿರುಚಿತ್ರ ಮಾರ್ಚ್ ಕೊನೆಯಲ್ಲಿ ಪ್ರೇಕ್ಷಕರ ಎದುರು ಬರಲಿದೆ. ಅಭಿ ಶ್ರೀಧರ್, ಸಂತು, ಸಾಗರ್, ಮೋಹನ್ ಎಂಬ ಹೊಸಮುಖಗಳು ಕಿರುಚಿತ್ರದಲ್ಲಿವೆ. ಧಾರಾವಾಹಿಗಳಿಗೆ ಛಾಯಾಗ್ರಾಹಕರಾಗಿದ್ದ ಸೀನು ಕಿರುಚಿತ್ರದ ದೃಶ್ಯಗಳನ್ನು ಸೆರಿಹಿಡಿದಿದ್ದರೆ, ‘ಮುದ್ದು ಮನಸೇ' ಚಿತ್ರಕ್ಕೆ ಸಂಗೀತ ನೀಡಿದ ವಿನೀತ್ ರಾಜ್ ಸ್ವರ ಸಂಯೋಜನೆ ಮಾಡಿದ್ದಾರೆ. ಹೊಸಬಬರ ಈ ಹೊಸತದ ಪ್ರಯತ್ನ ಯಶಸ್ವಿಯಾಗಲಿ ಎಂಬುದು ನಮ್ಮ ಹಾರೈಕೆ ಕೂಡಾ...

    ಪ್ರೋಮೋ ವಿಶೇಷ

    ಪ್ರೋಮೋ ವಿಶೇಷ

    ಸ್ಟಾಪ್ ಮೋಷನ್ ತಂತ್ರಜ್ಞಾನದಲ್ಲಿ ಪ್ರೋಮೊ ತಯಾರಿಸಲಾಗಿದೆ. 1200 ಛಾಯಾಚಿತ್ರಗಳನ್ನು ಬಳಸಿ ಈ ಪ್ರೋಮೊ ತಯಾರಿಸಲಾಗಿದೆ. ವಿಡಿಯೊ ತುಣುಕು ಬಳಸಿಕೊಳ್ಳದೆ ಕೇವಲ ಛಾಯಾಚಿತ್ರಗಳನ್ನೇ ಬಳಸಿಕೊಂಡು ಅನಿಮೇಶನ್ ದೃಶ್ಯಗಳನ್ನು ಸಿದ್ಧಪಡಿಸುವ ತಂತ್ರಜ್ಞಾನದ ಮುಂದಾಳು ‘ಸೆವೆಂಟಿ ಎಂಎಂ' ಸ್ಟುಡಿಯೊದ ಮಹೇಶ್.

    ಬಂಡವಾಳ ಯಾರದ್ದು?

    ಬಂಡವಾಳ ಯಾರದ್ದು?

    ವಿಜಯಪುರದಲ್ಲಿರುವ ಶ್ರೀ ಸಾಯಿಬಾಬಾ ಪಿಕ್ಚರ್ಸ್‌ನ ವಿನೋದ್ ಅಂಬಿಗರ್ ಬಂಡವಾಳ ಹೂಡಿದ್ದಾರೆ. ರಕ್ಷಿತ್ ಅವರು ಚಿತ್ರಕ್ಕೆ ಮಾಡಿದ್ದ ಅದ್ದೂರಿ ಮುಹೂರ್ತ ಮತ್ತು ಅದಕ್ಕೆ ಸಿಕ್ಕ ಸ್ಪಂದನೆ ನಂತರ ಬಂಡವಾಳ ಹೂಡಿಕೆ ಮಾಡಿದ್ದೇನೆ ಎಂದು ತಿಳಿಸಿದರು.

    ಶುಭ ಹಾರೈಕೆ

    ಶುಭ ಹಾರೈಕೆ

    ಪ್ರೋಮೋ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟರಾದ ಅರುಣ್ ಗೌಡ, ಸೂರಜ್ ಗೌಡ ಮತ್ತು ಗಾಯಕ ಚಂದನ್ ಶೆಟ್ಟಿ ತಂಡಕ್ಕೆ ಹಾರೈಸಿದರು. ಇಂಥ ಪ್ರಯತ್ನ ಕನ್ನಡದಲ್ಲಿ ನಡೆಯುತ್ತಲೆ ಇರಬೇಕು ಎಂದು ಹೇಳಿದರು.

    ಸ್ಮೈಲ್ ಗುರು ಯಾಕೆ?

    ಸ್ಮೈಲ್ ಗುರು ಯಾಕೆ?

    "ನನ್ನ ಮುಖದಲ್ಲಿ ನಗು ಚೆನ್ನಾಗಿ ಕಾಣಿಸುತ್ತದೆ ಎಂದು ಸ್ನೇಹಿತರೆಲ್ಲ ಹೇಳುತ್ತಿದ್ದರು. ಅದಕ್ಕಾಗೇ ಕಿರುಚಿತ್ರಕ್ಕೆ ಸ್ಮೈಲ್ ಗುರು ಎಂದು ಹೆಸರಿಟ್ಟೆ' ಎಂದು ನಾಯಕ ರಕ್ಷಿತ್. ಮನದಾಳ ತೆರದಿಟ್ಟರೆ ನಾಯಕಿ ನಾನು ಬಬ್ಲಿ ಗರ್ಲ್ ಎನ್ನುತ್ತಾ ಎಲ್ಲರ ಸಹಕಾರ ನೆನೆದರು.

    ಸಂಗೀತ ಯಾರದ್ದು?

    ಸಂಗೀತ ಯಾರದ್ದು?

    ‘ಮುದ್ದು ಮನಸೇ' ಚಿತ್ರಕ್ಕೆ ಸಂಗೀತ ನೀಡಿದ ವಿನೀತ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ. ನಾಯಕ ರಕ್ಷಿತ್ ಉಳಿದ ಎಲ್ಲ ಜವಾಬ್ದಾರಿಗಳನ್ನು ಹೊತ್ತಿಕೊಂಡಿದ್ದಾರೆ. ಕಿರು ಚಿತ್ರದ ಕತೆ ಏನು? ಎಂಬ ಸುಳಿವು ಬಿಟ್ಟುಕೊಡಲಿಲ್ಲ.

    ಅತೀವ ನಿರೀಕ್ಷೆ

    ಅತೀವ ನಿರೀಕ್ಷೆ

    ಕಿರು ಚಿತ್ರವಾದರೂ ಇದರಲ್ಲೊಂದು ಸಂದೇಶವಿದೆ. ಮನರಂಜನೆಯ ಜತೆಗೆ ನಿಮಗೆ ಹೊಸ ಚಿಂತನೆಯನ್ನು ಹುಟ್ಟುಹಾಕುವಂತೆ ಮಾಡುತ್ತದೆ. ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದ್ದು ಸಿನಿಮಾ ಮಂದಿರಗಳಲ್ಲೂ ಬಿಡುಗಡೆ ಯೋಚನೆಯಿದೆ ಎಂದವರು ನಾಯಕ ರಕ್ಷಿತ್.

    "ಸ್ಮೈಲ್ ಗುರು"ಪ್ರೋಮೋ ನೋಡಿ

    1200 ಫೋಟೋ ಗಳನ್ನು ಬಳಸಿಕೊಂಡು ತಯಾರು ಮಾಡಿರುವ "ಸ್ಮೈಲ್ ಗುರು"ಪ್ರೋಮೋ ನೋಡಿಕೊಂಡು ಬನ್ನಿ..

    English summary
    Kannada short Film Smile Guru set to create new record in Kannada Film Industry by releasing a promo created using Stop Motion Graphics technology.
    Friday, February 5, 2016, 18:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X