»   » 'ಸಾಹಸಸಿಂಹ'ನ ಸ್ಟೈಲ್ ನಲ್ಲಿ 'ಲೊಡ್ಡೆ' ಕೋಮಲ್

'ಸಾಹಸಸಿಂಹ'ನ ಸ್ಟೈಲ್ ನಲ್ಲಿ 'ಲೊಡ್ಡೆ' ಕೋಮಲ್

Posted By:
Subscribe to Filmibeat Kannada

'ಕರೋಡ್ ಪತಿ', 'ಪುಂಗಿದಾಸ', 'ನಮೋ ಭೂತಾತ್ಮ', 'ಗೋವಾ'...ಹೀಗೆ ಸಾಲು ಸಾಲು ಸಿನಿಮಾಗಳನ್ನ ನೀಡಿದರೂ, ಸೋಲಿನ ಸುಳಿಯಲ್ಲೇ ಸಿಲುಕಿರುವ ಸೆನ್ಸೇಷನಲ್ ಸ್ಟಾರ್ ಕೋಮಲ್ ಕುಮಾರ್ ಈಗ ಡಾ.ವಿಷ್ಣುವರ್ಧನ್ ಜಪ ಮಾಡುತ್ತಿದ್ದಾರೆ.

ಥೇಟ್ ಸಾಹಸಸಿಂಹ ಡಾ.ವಿಷ್ಣುವರ್ಧನ್ ರಂತೆ ಎಡಗೈಗೆ ಕಡಗ ತೊಟ್ಟಿರುವ ಕೋಮಲ್, ಅಭಿನಯ ಭಾರ್ಗವನ ಅಪ್ಪಟ ಭಕ್ತನಾಗಿ ಅಭಿನಯಿಸಿರುವ ಸಿನಿಮಾ 'ಲೊಡ್ಡೆ'. ಟೈಟಲ್ ಕೇಳಿದ ಮಾತ್ರಕ್ಕೆ ಇದು ವಿಷ್ಣುವರ್ಧನ್ ಅವರಿಗೆ ಮಾಡಿರುವ ಅವಹೇಳನ ಅಂತ ಭಾವಿಸಬೇಕಿಲ್ಲ.

'ಲೊಡ್ಡೆ' ಅನ್ನುವ ಪದಕ್ಕೆ ಸಿನಿಮಾದಲ್ಲಿ ಬೇರೆ ಅರ್ಥ ಇದೆ. 'Leader Of Daring and Dashing Empire' ಶಾರ್ಟ್ ಫಾರ್ಮ್ ರೂಪವೇ LODDE. ಹೀಗಿದ್ದರೂ, ಚಿತ್ರದಲ್ಲಿ ಸಿಂಹ ಘರ್ಜನೆ ಸಿಕ್ಕಾಪಟ್ಟೆ ಇದೆ. ಬೇಕಾದ್ರೆ, ಈಗಷ್ಟೇ ರಿಲೀಸ್ ಆಗಿರುವ 'ಲೊಡ್ಡೆ' ಚಿತ್ರದ ಟ್ರೇಲರ್ ನೊಮ್ಮೆ ನೋಡಿ.....

Watch Komal Kumar starrer Lodde trailer

ಸಿಂಹದ ಉಂಗುರ ತೊಟ್ಟು, ಎಡಗೈಲಿ ಪಂಚು ಕೊಡುವ ಕೋಮಲ್ ನಡೆದಾಡಿದಾಗಲೆಲ್ಲಾ ಸಿಂಹ ಘರ್ಜಿಸುತ್ತೆ. ಅಷ್ಟರಮಟ್ಟಿಗೆ 'ಜೂನಿಯರ್ ಸಾಹಸಸಿಂಹ' ಆಗಿದ್ದಾರೆ ನಟ ಕೋಮಲ್ ಕುಮಾರ್. 'ಲೈಯನ್ ಆಫ್ ಕನ್ನಡ ಸಿನಿಮಾ' ಡಾ.ವಿಷ್ಣುವರ್ಧನ್ ಗೆ ಟ್ರಿಬ್ಯೂಟ್ ಅಂತ್ಹೇಳಿರುವ ಈ ಚಿತ್ರದಲ್ಲಿ 'ಹೃದಯವಂತ'ನಿಗಾಗಿ ಒಂದು ಹಾಡಿದೆ. [ಮಿಸ್ಟರ್ ರಜನಿಕಾಂತ್ ಆಗ್ತಿದ್ದಾರೆ ಕೋಮಲ್ ಕುಮಾರ್]

ಡಾ.ವಿಷ್ಣು ನೆರಳಲ್ಲಿ ರೆಡಿಯಾಗಿರುವ 'ಲೊಡ್ಡೆ' ಚಿತ್ರದಲ್ಲಿ ಲವ್ ಟ್ರ್ಯಾಕ್ ಕೂಡ ಇದೆ. ಕೋಮಲ್ ಗೆ ಪ್ರೀತಿಯ ಬಾಣ ಬಿಡುವ ಬೆಡಗಿ ಆಕಾಂಕ್ಷ ಪುರಿ. ನವೀನ್ ಕೃಷ್ಣ, ಅವಿನಾಶ್ ಸೇರಿದಂತೆ ದೊಡ್ಡ ತಾರಾಬಳಗ 'ಲೊಡ್ಡೆ' ಚಿತ್ರದಲ್ಲಿದೆ. ಎಸ್.ವಿ.ಸುರೇಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Kannada Actor Komal Kumar starrer 'Lodde' movie trailer is out and looks dashing. Watch the trailer here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada