»   » ಅಪ್ಪನಿಗೆ ಪ್ರಿನ್ಸ್ ಮಹೇಶ್ ನೀಡಿದ 'ಶ್ರೀಮಂತ' ಉಡುಗೊರೆ

ಅಪ್ಪನಿಗೆ ಪ್ರಿನ್ಸ್ ಮಹೇಶ್ ನೀಡಿದ 'ಶ್ರೀಮಂತ' ಉಡುಗೊರೆ

Posted By:
Subscribe to Filmibeat Kannada

'ಆಗಡು' ಚಿತ್ರದ ಬಳಿಕ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯಿಸುತ್ತಿರುವ ಚಿತ್ರ 'ಶ್ರೀಮಂತುಡು'. ಸದ್ದಿಲ್ಲದೇ ಸೈಲೆಂಟಾಗಿ ಚಿತ್ರೀಕರಣ ನಡೆಸುತ್ತಿರುವ 'ಶ್ರೀಮಂತುಡು' ಚಿತ್ರದ ಫಸ್ಟ್ ಲುಕ್ ಟ್ರೈಲರ್ ಇಂದು ಬಿಡುಗಡೆ ಆಗಿದೆ.

'ಶ್ರೀಮಂತುಡು'...ಹೆಸರಿಗೆ ತಕ್ಕಂತೆ ಈ ಸಿನಿಮಾ ಶ್ರೀಮಂತವಾಗಿ ರೆಡಿಯಾಗಿದೆ. ಚಿನ್ನದ ಚಮಚವನ್ನ ಬಾಯಲ್ಲಿಟ್ಟುಕೊಂಡು ಬೆಳೆದ ಕೋಟ್ಯಾಧಿಪತಿ ಪಾತ್ರದಲ್ಲಿ ಮಹೇಶ್ ಬಾಬು ನಟಿಸಿದ್ದಾರೆ. 'ಶ್ರೀಮಂತುಡು' ಚಿತ್ರದ ಮೊದಲ ನೋಟದ ಝಲಕ್ ಇಲ್ಲಿದೆ ನೋಡಿ....

Watch Mahesh Babu starrer Srimanthudu trailer

'ಶ್ರೀಮಂತುಡು' ಹೇಳಿ ಕೇಳಿ ಮಹೇಶ್ ಬಾಬು ಅಭಿನಯದ ಸಿನಿಮಾ. ಅಂದ್ಮೇಲೆ ಚಿತ್ರದಲ್ಲಿ ಡೈಲಾಗ್ ಪಂಚ್ ಇರಲೇಬೇಕು. ಈ ನಿರೀಕ್ಷೆ 'ಶ್ರೀಮಂತುಡು' ಚಿತ್ರದಲ್ಲಿ ಹುಸಿಯಾಗಿಲ್ಲ. ಮಹೇಶ್ ಬಾಬು ಇಮೇಜ್ ಗೆ ತಕ್ಕಂತೆ 'ಶ್ರೀಮಂತುಡು' ಚಿತ್ರದಲ್ಲಿ ಬೆಂಕಿ ಉಂಡೆಗಳಂತಹ ಡೈಲಾಗ್ಸ್ ಇವೆ. ಭರ್ಜರಿ ಆಕ್ಷನ್ ಕೂಡ ಇದೆ. [ಮಹೇಶ್ ಬಾಬು ಬಗ್ಗೆ ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

mahesh babu

'ಆಗಡು' ಚಿತ್ರದಲ್ಲಿ ಮಹೇಶ್ ಬಾಬು ಜೊತೆ ಐಟಂ ಹಾಡೊಂದ್ರಲ್ಲಿ ಕುಣಿದು ಹೋಗಿದ್ದ ಶೃತಿ ಹಾಸನ್, ಇದೇ ಮೊದಲ ಬಾರಿಗೆ ಪ್ರಿನ್ಸ್ ಗೆ ನಾಯಕಿಯಾಗಿದ್ದಾರೆ. ಸೂಪರ್ ಹಿಟ್ ಸಿನಿಮಾ 'ಮಿರ್ಚಿ'ಗೆ ಆಕ್ಷನ್ ಕಟ್ ಹೇಳಿದ್ದ ಕೊರಟಾಲ ಶಿವ, 'ಶ್ರೀಮಂತುಡು' ಚಿತ್ರದ ಸೂತ್ರಧಾರ.

ಹಲವು ವಿಶೇಷತೆಗಳಿಂದ ಟಾಲಿವುಡ್ ನಲ್ಲಿ ಸದ್ದು ಮಾಡುತ್ತಿರುವ 'ಶ್ರೀಮಂತುಡು' ಚಿತ್ರದ ಟ್ರೈಲರ್ ಇಂದು ಬಿಡುಗಡೆ ಆಗಿದೆ. ಅದು ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ ಹುಟ್ಟುಹಬ್ಬದ ಪ್ರಯುಕ್ತ. ಆ ಮೂಲಕ ಅಪ್ಪನಿಗೆ ಜನ್ಮದಿನದ ಶುಭಹಾರೈಸುತ್ತಾ, 'ಶ್ರೀಮಂತ' ಉಡುಗೊರೆ ನೀಡಿದ್ದಾರೆ ಪ್ರಿನ್ಸ್ ಮಹೇಶ್.

English summary
Koratala Siva directorial 'Srimanthudu' first look trailer is out. Srimanthudu features Mahesh Babu, Shruthi Haasan in the lead roles. Watch the trailer here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada