»   » ದರ್ಶನ್ 'Mr ಐರಾವತ' ಮೇನಿಯಾ ಅಭಿಮಾನಿಗಳ ಸಂಭ್ರಮಾಚರಣೆ

ದರ್ಶನ್ 'Mr ಐರಾವತ' ಮೇನಿಯಾ ಅಭಿಮಾನಿಗಳ ಸಂಭ್ರಮಾಚರಣೆ

Posted By:
Subscribe to Filmibeat Kannada

ದರ್ಶನ್ ಅವರ ಬಹುನಿರೀಕ್ಷಿತ ಚಿತ್ರ 'Mr ಐರಾವತ' ನಾಳೆ(ಅಕ್ಟೋಬರ್ 1) ತೆರೆ ಮೇಲೆ ಅಪ್ಪಳಿಸಲಿದ್ದು, ಅಭಿಮಾನಿಗಳು ಸಂತೋಷ್ ಚಿತ್ರಮಂದಿರದ ಮುಂಭಾಗ ಈಗಿನಿಂದಲೇ ಸಂಭ್ರಮಾಚರಣೆ ಶುರು ಹಚ್ಚಿಕೊಂಡಿದ್ದಾರೆ.

ಈಗಾಗಲೇ ಗಾಂಧಿನಗರದ ದರ್ಶನ್ ಅಭಿಮಾನಿಗಳು ಮುಖ್ಯ ಚಿತ್ರಮಂದಿರ ಸಂತೋಷ್ ಥಿಯೇಟರ್ ಮುಂಭಾಗ 72 ಅಡಿ ಎತ್ತರದ ದರ್ಶನ್ ಅವರ ಬೃಹತ್ ಕಟೌಟ್ ಗಳನ್ನು ನಿಲ್ಲಿಸಿ ಅದಕ್ಕೆ ಹಾಲಿನ ಅಭಿಷೇಕ ಮಾಡುತ್ತಿದ್ದಾರೆ. [ಚಾಲೆಂಜಿಂಗ್ ಸ್ಟಾರ್ 'Mr ಐರಾವತ' ನ, ಸ್ಪೆಷಾಲಿಟಿ ಏನು?]


ಸದ್ಯಕ್ಕೆ ಎಲ್ಲೆಡೆ ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರ 'Mr ಐರಾವತ' ಮೇನಿಯಾ ಆರಂಭವಾಗಿದ್ದು, ಅಭಿಮಾನಿಗಳು ಬೆಳಗಾಗುವುದನ್ನೇ ಕಾಯುತ್ತಿದ್ದಾರೆ. ಕರ್ನಾಟಕ ಸೇರಿದಂತೆ ವಿದೇಶದಲ್ಲೂ 'Mr ಐರಾವತ' ತೆರೆ ಕಾಣಲಿದ್ದು, ದರ್ಶನ್ ಅವರ 'ಐರಾವತ' ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಗೆ ಮೊದಲೇ ದಾಖಲೆ ಸೃಷ್ಟಿಸುತ್ತಿದೆ.


WATCH: 'Mr Airavata' Mania At Santhosh Theatre; Darshan's Fans Go Crazy For Tickets

ಉತ್ತರ ಅಮೇರಿಕಾದಲ್ಲಿ ಸುಮಾರು 45 ಚಿತ್ರಮಂದಿರಗಳಲ್ಲಿ ದರ್ಶನ್ ಅವರ 'Mr ಐರಾವತ' ತೆರೆ ಕಾಣುತ್ತಿದ್ದು, ಕನ್ನಡ ಚಿತ್ರವೊಂದು ಒಂದೇ ಬಾರಿ ಏಕಕಾಲದಲ್ಲಿ ಎಲ್ಲೆಡೆ ತೆರೆ ಕಾಣುತ್ತಿರುವುದು ಇದೇ ಮೊದಲ ಬಾರಿಯಾಗಿದೆ.[ಮಿ. ಐರಾವತ ದರ್ಶನ್‌ಗೆ ಗೆಲುವಿನ ಸವಿ ನೀಡುವುದಾ?]


ಹಿಟ್ ನಿರ್ದೇಶಕ ಎ ಪಿ ಅರ್ಜುನ್ 'Mr ಐರಾವತ'ನಿಗೆ ಆಕ್ಷನ್-ಕಟ್ ಹೇಳಿದ್ದು, ಬಾಲಿವುಡ್ ಬೆಡಗಿ ಕಮ್ ರೂಪದರ್ಶಿ ಊರ್ವಶಿ ರೌಟೇಲ ಅವರು ದರ್ಶನ್ ಜೊತೆ ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಸಿಲ್ವರ್ ಸ್ಕ್ರೀನ್ ನಲ್ಲಿ ರೋಮ್ಯಾನ್ಸ್ ಮಾಡಿದ್ದಾರೆ.


ಪ್ರತಿಭಾವಂತ ನಟ ಪ್ರಕಾಶ್ ರೈ ಅವರು ಇದೇ ಮೊದಲ ಬಾರಿಗೆ ದರ್ಶನ್ ಗೆ ಎದುರಾಗಿ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದು, ದರ್ಶನ್ V/S ಪ್ರಕಾಶ್ ರೈ ಜುಗಲ್ ಬಂದಿಗೆ ಪ್ರೇಕ್ಷಕರು ಬಹಳ ಕಾತರರಾಗಿದ್ದು, ಅಭಿಮಾನಿಗಳ ಕುತೂಹಲಕ್ಕೆ ನಾಳೆ(ಅಕ್ಟೋಬರ್ 1) ತೆರೆ ಬೀಳಲಿದೆ.


ಈಗಿನಿಂದಲೇ ಸಂಭ್ರಮಾಚರಣೆ ಶುರು ಹಚ್ಚಿಕೊಂಡಿರುವ ಅಭಿಮಾನಿಯೊಬ್ಬರು ಫಿಲ್ಮಿಬೀಟ್ ಜೊತೆ ಮಾತನಾಡುತ್ತಾ, 'Mr ಐರಾವತ' ನಾಳೆ ತೆರೆಕಂಡು ಬಾಕ್ಸಾಫೀಸ್ ರೆಕಾರ್ಡ್ ಬ್ರೇಕ್ ಮಾಡುವುದಲ್ಲದೇ ಇದು ಅಕ್ಟೋಬರ್ 1 ತಿಂಗಳು ಪೂರ್ತಿ ಮುಂದುವರಿಯಲಿದೆ ಎಂದಿದ್ದಾರೆ.[ಮಿಸ್ಟರ್ ಐರಾವತನ ಬಗ್ಗೆ ಚಾಲೆಂಜಿಂಗ್ ಸ್ಟಾರ್ಗೇ ಡೌಟು!]


ಈಗಾಗಲೇ ಸಂತೋಷ್ ಚಿತ್ರಮಂದಿರದ ಮುಂಭಾಗ ದೊಡ್ಡ ದೊಡ್ಡ ಬ್ಯಾನರ್, ಕಟೌಟ್ ಗಳು ತುಂಬಿದ್ದು, ಇಡೀ ಚಿತ್ರಮಂದಿರವನ್ನು ದರ್ಶನ್ ಅಭಿಮಾನಿಗಳು ಮದುವೆ ಮನೆಯಂತೆ ಶೃಂಗರಿಸಿದ್ದಾರೆ. ನೋಡೋಣ ಚಿತ್ರ ನಾಳೆ ತೆರೆ ಕಾಣಲಿದ್ದು, ಚಿತ್ರದ ಸಂಪೂರ್ಣ ವಿಮರ್ಶೆಯನ್ನು ಕನ್ನಡ ಫಿಲ್ಮಿಬೀಟ್ ನಾಳೆ ನಿಮಗೆ ಒದಗಿಸುತ್ತದೆ.


ಚಿತ್ರದ ಬಗ್ಗೆ ಅಭಿಮಾನಿಗಳು ಭಾರಿ ಕುತೂಹಲವನ್ನು ವ್ಯಕ್ತಪಡಿಸಿದ್ದು, ಚಿತ್ರದ ಬಗ್ಗೆ ಅಭಿಮಾನಿಗಳ ಅಭಿಪ್ರಾಯವನ್ನು ಈ ವಿಡಿಯೋದಲ್ಲಿ ನೋಡಿ..


WATCH: 'Mr Airavata' Mania At Santhosh Theatre; Darshan's Fans Go Crazy For Tickets

English summary
Darshan's Mr Airavata is grand releasing tomorrow, Oct 1. The pre-booking has already kick-started at the main theatre Santhosh in Gandhinagara. Mr Airavata features Kannada actor Darshan, Actress Urvashi Rautela in the lead role. The movie is directed by AP Arjun.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada