»   » ಎಲ್ಲಾ ತಂದೆ-ತಾಯಂದಿರು ತಪ್ಪದೇ ನೋಡಬೇಕಾದ ಕಿರುಚಿತ್ರ ಇದು.!

ಎಲ್ಲಾ ತಂದೆ-ತಾಯಂದಿರು ತಪ್ಪದೇ ನೋಡಬೇಕಾದ ಕಿರುಚಿತ್ರ ಇದು.!

Posted By:
Subscribe to Filmibeat Kannada

'ಮನೆಯೇ ಮೊದಲ ಪಾಠ ಶಾಲೆ. ತಾಯಿಯೇ ಮೊದಲ ಗುರು' ಎನ್ನುವ ಕಾಲವೊಂದಿತ್ತು. ಆಗೇನಿದ್ದರೂ, ಮಕ್ಕಳಿಗೆ ತಂದೆ-ತಾಯಿಯೇ ರೋಲ್ ಮಾಡೆಲ್ಸ್.!

ಆದ್ರೀಗ ಕಾಲ ಬದಲಾಗಿದೆ. ದುಬಾರಿ ದುನಿಯಾದಲ್ಲಿ ಮಕ್ಕಳಿಗೆ ಮಾದರಿ ಆಗಿರಬೇಕಾದ ತಂದೆ-ತಾಯಂದಿರು ಸದಾ ಕೆಲಸ, ಆಫೀಸ್, ಪ್ರೆಶರ್, ಟೆನ್ಷನ್ ಎನ್ನುವದರಲ್ಲೇ ಬಿಜಿ.

ಅಮ್ಮನ ಮಡಿಲಿನಲ್ಲಿ ಹಾಯಾಗಿ ನಿದ್ರೆ ಮಾಡಬೇಕಾದ ಕೂಸು ಪ್ಲೇ ಹೋಮ್ ನಲ್ಲಿ ಆಟ ಆಡುವಂತಾಗಿದೆ. ಬೆಲೆ ಕಟ್ಟಲು ಆಗದ ಅಪ್ಪನ ಪ್ರೀತಿ ಬದಲು ದುಬಾರಿ ಆಟ ಸಾಮಾನು ಮಕ್ಕಳ ಕೈ ಸೇರುತ್ತಿವೆ. ಭಾವನೆಗಳು ಪರಿಪಕ್ವಗೊಳ್ಳುವ ಎಳೆ ವಯಸ್ಸಿನಲ್ಲಿ ಅಪ್ಪ-ಅಮ್ಮ, ಮಕ್ಕಳ ಕಡೆ ಗಮನ ಕೊಡದೆ ಇದ್ದರೆ.....?

ಈ ಪ್ರಶ್ನೆಯನ್ನೇ ಇಟ್ಕೊಂಡು ಐಟಿ ವಲಯದ ಟೆಕ್ಕಿಗಳು 'ಪಂಚಿ' (ಹಕ್ಕಿ) ಅಂತ ಒಂದು ಕಿರುಚಿತ್ರ ತಯಾರಿಸಿದ್ದಾರೆ. ಅಪ್ಪ-ಅಮ್ಮನ ಬಿಜಿ ಶೆಡ್ಯೂಲ್ ನಿಂದ ಪುಟಾಣಿ ಮಕ್ಕಳ ಮನಸ್ಸಿನ ಮೇಲೆ ಆಗುವ ದುಷ್ಪರಿಣಾಮವೇ 'ಪಂಚಿ' ಶಾರ್ಟ್ ಮೂವಿಯ ಕಥಾಹಂದರ.

watch-panchi-a-glimpse-short-movie-teaser

ಹಾಗ್ನೋಡಿದ್ರೆ, 'ಪಂಚಿ' ಕಿರುಚಿತ್ರ ಐಟಿ ಟೆಕ್ಕಿಗಳ ಸ್ವಂತ ಅನುಭವ. ಮಕ್ಕಳ ಜೊತೆ ಕೆಲ ಕಾಲ ಆಟ ಆಡುವುದಕ್ಕೂ ಪುರುಸೊತ್ತು ಇಲ್ಲದ ಐಟಿ ಉದ್ಯಮದಲ್ಲಿ ತಾವು ಅನುಭವಿಸುವ ಒತ್ತಡ ಹಾಗೂ ತಮ್ಮ ಮಕ್ಕಳು ಪಡುವ ಯಾತನೆಯನ್ನೇ ಕಥೆ ರೂಪದಲ್ಲಿ ರಚಿಸಿ 'ಪಂಚಿ' ಶಾರ್ಟ್ ಮೂವಿಗೆ ನಿರ್ದೇಶನ ಮಾಡಿದ್ದಾರೆ ಟೆಕ್ಕಿ ನಾಗರಾಜ್ ಶಂಕರ್.

ಉಮೇಶ್.ಕೆ, ದೇಶಪಾಂಡೆ.ಜಿ, ನವೀನ್.ಆರ್.ಓ, ಪ್ರದೀಪ್.ಎಸ್, ಮಹೇಶ್.ಎಂ.ಬಿ ನಿರ್ಮಿಸಿರುವ 'ಪಂಚಿ' ಕಿರುಚಿತ್ರದಲ್ಲಿ ಪುಟಾಣಿ ಋತ್ವ, ಹರ್ಷ, ರಾಜೇಶ್ವರಿ, ಗುರುಪ್ರಸಾದ್, ನವೀನ್.ಆರ್.ಓ, ಪದ್ಮಜಾ, ಪ್ರಗತಿ ಪ್ರಧಾನ ಭೂಮಿಕೆಯಲ್ಲಿದ್ದಾರೆ. [ಸದಭಿರುಚಿಯ, ಕಿರುಚಿತ್ರಗಳನ್ನು ನಿರ್ಮಿಸಿ: ಹಂಸಲೇಖ]

ಸಂದೀಪ್.ಪಿ.ಆರ್ ಸಂಗೀತ ನೀಡಿದ್ದು, ಕಿರುಚಿತ್ರದಲ್ಲಿ ಆರು ಹಾಡುಗಳಿವೆ. ಸಮಾಜಕ್ಕೆ ಉತ್ತಮ ಸಂದೇಶ ಸಾರುವ 'ಪಂಚಿ' ಕಿರುಚಿತ್ರವನ್ನ ಮಕ್ಕಳ ಹಿತಾಸಕ್ತಿಗಾಗಿ ಎಲ್ಲಾ ತಂದೆ-ತಾಯಿಯರು ತಪ್ಪದೇ ನೋಡಲೇಬೇಕು ಎಂಬುದು 'ಪಂಚಿ' ತಂಡದ ಆಶಯ.

English summary
Nagaraj Shankar directorial Ruthwa, Harsha, Rajeshwari, Guruprasad, Naveen R O starrer 'Panchi' short movie teaser is out. Watch the teaser here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada