»   » ನಿರ್ಮಾಪಕ 'ಕಿಕ್' ಕೊಟ್ರೆ, ಹೀಗೆ ಕೊಡ್ಬೇಕು ನೋಡಿ..!

ನಿರ್ಮಾಪಕ 'ಕಿಕ್' ಕೊಟ್ರೆ, ಹೀಗೆ ಕೊಡ್ಬೇಕು ನೋಡಿ..!

Posted By:
Subscribe to Filmibeat Kannada

ದುಡ್ಡು ಇದ್ರೆ ಯಾರು ಬೇಕಾದ್ರೂ 'ಹೀರೋ' ಆಗ್ಬಹುದು ಎಂಬುದು ಗಾಂಧಿನಗರದ ಹಳೆಯ ಮಾತು. ಆದ್ರೆ ಜೇಬು ತುಂಬಾ ದುಡ್ಡು ಇಟ್ಟುಕೊಂಡಿರುವ ನಿರ್ಮಾಪಕ ಕಮರ್ ಅಷ್ಟೇ ಪ್ರತಿಭಾವಂತ ಅನ್ನೋದಕ್ಕೆ ಸಾಕ್ಷಿ ಇಲ್ಲಿದೆ.

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗೂ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಜೋಡಿಯಾಗಿ ಅಭಿನಯಿಸಿದ್ದ 'ಆರ್ಯನ್' ಚಿತ್ರಕ್ಕೆ ಬಂಡವಾಳ ಹಾಕಿದ್ದ ನರ್ಗೀಸ್ ಬಾಬು ಪುತ್ರ ಕಮರ್ 'ಹೀರೋ' ಆಗುತ್ತಿರುವ ಸುದ್ದಿ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಪ್ರಕಟವಾಗಿತ್ತು. [ರಮ್ಯಾ-ಶಿವಣ್ಣ ಚಿತ್ರಕ್ಕೆ ಬಂಡವಾಳ ಹಾಕಿದವರು ಈಗ ಹೀರೋ.!]


watch-producer-kamar-starrer-kannada-movie-kick-teaser

ಸದ್ದಿಲ್ಲದೇ ಚಿತ್ರೀಕರಣ ಶುರು ಮಾಡಿರುವ ಕಮರ್ ನಾಯಕನಾಗಿ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ 'ಕಿಕ್' ಟೀಸರ್ ಬಿಡುಗಡೆ ಆಗಿದೆ. ಟೀಸರ್ ನಲ್ಲಿ ಕಮರ್ 'ಕಿಕ್' ಹೇಗಿದೆ ಅಂತ ನೀವೇ ನೋಡಿ.....'ಜಗ್ಗುದಾದಾ' ಚಿತ್ರದೊಂದಿಗೆ ಬಿಡುಗಡೆ ಆದ 'ಕಿಕ್' ಟೀಸರ್ ಮೊದಲ ನೋಟದಲ್ಲೇ ಗಮನ ಸೆಳೆಯುತ್ತದೆ. ಬಾಸ್ಕೆಟ್ ಬಾಲ್ ಆಟದ ಮೂಲಕ ಎಂಟ್ರಿ ಕೊಡುವ ಕಮರ್ ಭರವಸೆ ಮೂಡಿಸುವುದಂತೂ ನಿಜ.


watch-producer-kamar-starrer-kannada-movie-kick-teaser

ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿರುವ 'ಕಿಕ್' ಚಿತ್ರಕ್ಕೆ ಎಚ್.ವಾಸು ಆಕ್ಷನ್ ಕಟ್ ಹೇಳಿದ್ದಾರೆ. ವಿಶೇಷ ಅಂದ್ರೆ, ಮಗನ 'ಕಿಕ್' ಸಿನಿಮಾಗೆ ತಂದೆ ಬಾಬು ಬಂಡವಾಳ ಹಾಕಿದ್ದಾರೆ.


ಸದ್ಯಕ್ಕೆ ಕಮರ್ ಇಂಟ್ರೊಡಕ್ಷನ್ ಟೀಸರ್ ಮಾತ್ರ ಬಿಡುಗಡೆ ಆಗಿರುವ ಕಾರಣ, ಹೀರೋಯಿನ್ ಪರಿಚಯ ಆಗಿಲ್ಲ. 'ಕಿಕ್' ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ....

English summary
Kannada Movie 'Aryan' Producer Kamar is making is debut as hero in the movie 'Kick' directed by H.Vasu. Watch 'Kick' movie teaser here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada