»   » ಕುಟುಂಬ ಸಮೇತ 'ಕೃಷ್ಣಲೀಲಾ' ನೋಡಿದ ಪವರ್ ಸ್ಟಾರ್

ಕುಟುಂಬ ಸಮೇತ 'ಕೃಷ್ಣಲೀಲಾ' ನೋಡಿದ ಪವರ್ ಸ್ಟಾರ್

Posted By:
Subscribe to Filmibeat Kannada

'ಕೃಷ್ಣಲೀಲಾ' ಚಿತ್ರಕ್ಕೆ ಪ್ರೇಕ್ಷಕರು ಜೈಕಾರ ಹಾಕಿದ್ದಾರೆ. ರಾಜ್ಯದಾದ್ಯಂತ 'ಸ್ಮೈಲಿಂಗ್ ಕೃಷ್ಣ'ನ ಕಾರು ಬಾರು ಜೋರಾಗೇ ನಡೆಯುತ್ತಿದೆ. ವಾರದಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿ ಗಾಂಧಿನಗರದಲ್ಲಿ ಹೊಸ ದಾಖಲೆ ಮಾಡಿರುವ 'ಕೃಷ್ಣಲೀಲಾ' ಚಿತ್ರವನ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೋಡಿ ಮೆಚ್ಚಿಕೊಂಡಿದ್ದಾರೆ.

'ಕೃಷ್ಣಲೀಲಾ' ಚಿತ್ರದ ಸೂಪರ್ ಹಿಟ್ ಸಾಂಗ್ 'ಪೆಸಲು ಮ್ಯಾನ್'ಗೆ ದನಿಯಾಗಿದ್ದ ಅಪ್ಪು, ಎಲ್ಲೆಲ್ಲೂ ಅದರ ಹವಾ ನೋಡಿ, ಕುಟುಂಬ ಸಮೇತ ಚಿತ್ರವನ್ನ ವೀಕ್ಷಿಸಿದರು. ಅಜೇಯ್ ರಾವ್ ಆಕ್ಟಿಂಗ್ ಗೆ ಕ್ಲೀನ್ ಬೌಲ್ಡ್ ಆಗಿರುವ ಪುನೀತ್ ರಾಜ್ ಕುಮಾರ್ 'ಕೃಷ್ಣಲೀಲಾ' ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


Watch Puneeth Rajkumar praises Kannada movie Krisha Leela

''ನಾನು ಫ್ಯಾಮಿಲಿ ಸಮೇತ ನೋಡಿರುವ ಅದ್ಭುತವಾದ ಸಿನಿಮಾ 'ಕೃಷ್ಣಲೀಲಾ'. ಅಜೇಯ್ ನನ್ನ ಕೊಲೀಗ್ ಮತ್ತು ನನ್ನ ತಮ್ಮನ ಹಾಗೆ. ಮೊದಲು ಅವರು ನಿರ್ಮಾಣ ಮಾಡ್ತಿದ್ದಾರೆ ಅನ್ನುವಾಗ ಬೇಕಾ ಇದೆಲ್ಲಾ ಅಜೇಯ್ ಗೆ. ಸುಮ್ನೆ ರಿಸ್ಕ್ ಯಾಕೆ ಅಂತ ಅಂದುಕೊಂಡಿದ್ವಿ. ಆದ್ರೆ, ಸಿನಿಮಾ ನೋಡಿದ್ಮೇಲೆ, ಒಂದು ಅದ್ಭುತವಾದ ಸಿನಿಮಾ ಜೊತೆಗೆ ಅವರ ಪ್ರೊಡಕ್ಷನ್ ಕಂಪನಿ ಆಚೆ ಬಂದಿದೆ.'' ['ಕೃಷ್ಣಲೀಲಾ' ವಿಮರ್ಶೆ: ಗಿಮಿಕ್ ಇಲ್ಲ...ಎಲ್ಲೂ ಕೆಮ್ಮಂಗಿಲ್ಲ!]


''ಶಶಾಂಕ್ ನಿರ್ದೇಶನ ಜೊತೆಗೆ ಬ್ಯೂಟಿಫುಲ್ ಸ್ಕ್ರಿಪ್ಟ್. ನನಗೆ ಮೊದಲು ಇಷ್ಟ ಆಗಿದ್ದು ಕಥೆ. ಅಜೇಯ್ ಪರ್ಫಾಮೆನ್ಸ್ ನೋಡಿ ತುಂಬಾ ಖುಷಿ ಆಯ್ತು. ರಂಗಾಯಣ ರಘು, ಅಚ್ಯುತ್ ರಾವ್, ಹೀರೋಯಿನ್ ಎಲ್ಲರ ಪರ್ಫಾಮೆನ್ಸ್ ಚೆನ್ನಾಗಿದೆ. ಸಾಧು ಕೋಕಿಲ ಒಂದು ಹಾಡಲ್ಲಿ ಬರುತ್ತಾರೆ. ಆ ಹಾಡು ನನಗೆ ತುಂಬಾ ಇಷ್ಟ.''


Watch Puneeth Rajkumar praises Kannada movie Krisha Leela

''ಎಮೋಷನಲ್ ಸೀನ್ಸ್, ಹೊಸ ತರಹದ ಕಾಮಿಡಿ, ಅದ್ಭುತ ಕಥೆ. ನನಗೆ ತುಂಬಾ ತುಂಬಾ ಇಷ್ಟ ಆಯ್ತು. ನಾನು ತುಂಬಾ ಸಿನಿಮಾ ನೋಡಿದ್ದೀನಿ. ಆದ್ರೆ, ಇಲ್ಲಿ ಮುಂದೆ ಏನಾಗಬಹುದು ಅಂತ ಯಾರಿಗೂ ಗೊತ್ತಾಗಲ್ಲ. ಅದು ತುಂಬಾ ಇಂಪ್ರೆಸ್ ಆಯ್ತು.'' [ಅಜೇಯ್ ರಾವ್ 'ಕೃಷ್ಣಲೀಲಾ'ಗೆ ಬಾಕ್ಸಾಫೀಸ್ ಉಡೀಸ್]


''ಅಜೇಯ್ ಅಂಡರ್ ಪ್ಲೇ ಆಕ್ಟಿಂಗ್ ಎದ್ದು ಕಾಣುತ್ತೆ. ಇಂಟವರ್ಲ್, ಪ್ರೀ ಕ್ಲೈಮ್ಯಾಕ್ಸ್ ನಲ್ಲಿ ಅಜೇಯ್ ತುಂಬಾ ಚೆನ್ನಾಗಿ ಅಭಿನಯಸಿದ್ದಾರೆ. ಸಾಂಗ್ಸ್ ಚೆನ್ನಾಗಿದೆ. ನಾನೂ ಒಂದು ಹಾಡು ಹಾಡಿದ್ದೀನಿ. ತುಂಬಾ ಖುಷಿಯಾಗೋದು ಏನು ಅಂದ್ರೆ, ಒಳ್ಳೆ ಸಿನಿಮಾಗೆ ಒಳ್ಳೆ ಹಾಡು ಹಾಡಿಬಿಟ್ನಲ್ಲ ಅಂತ. ಇನ್ನೂ ಸಾಧು ಕೋಕಿಲ ಹಾಡಂತೂ ಸಿಕ್ಕಾಪಟ್ಟೆ ಚೆನ್ನಾಗಿದೆ.'' ಅಂತ ಪುನೀತ್ ರಾಜ್ ಕುಮಾರ್ ಹೇಳಿದರು. [ರಿಯಲ್ ಸ್ಟೋರಿ 'ಕೃಷ್ಣಲೀಲಾ'ದ ಅಸಲಿ ಜೋಡಿ]


Watch Puneeth Rajkumar praises Kannada movie Krisha Leela

ಜೊತೆಗೆ 'ಕೃಷ್ಣಲೀಲಾ' ಸಿನಿಮಾ ಸಕ್ಸಸ್ ಆಗಲಿ, ಅಜೇಯ್ ರಾವ್ ಪ್ರೊಡಕ್ಷನ್ ಹೌಸ್ ನಿಂದ ಹೆಚ್ಚೆಚ್ಚು ಸಿನಿಮಾಗಳು ತೆರೆಗೆ ಬರಲಿ ಅಂತ ಅಪ್ಪು ಹಾರೈಸಿದರು. ಒಟ್ನಲ್ಲಿ 'ಕೃಷ್ಣಲೀಲೆ'ಯನ್ನ ಮೆಚ್ಚುವವರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. (ಫಿಲ್ಮಿಬೀಟ್ ಕನ್ನಡ)

English summary
Shashank directorial Ajay Rao starrer 'Krishna Leela' is receiving good response all over. Meanwhile, Power Star Puneeth Rajkumar has watched the movie and praised it. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada