»   » ಸಮಾಜ ಬದಲಾಗಲು ಕೊಬ್ರಿ ಮಂಜು ಸಿನಿಮಾ ಮಾಡಲ್ವಂತೆ.!

ಸಮಾಜ ಬದಲಾಗಲು ಕೊಬ್ರಿ ಮಂಜು ಸಿನಿಮಾ ಮಾಡಲ್ವಂತೆ.!

Posted By:
Subscribe to Filmibeat Kannada

ಕೇಳ್ರಪ್ಪೋ...ಕೇಳಿ....ಸಮಾಜವನ್ನ ಬದಲಾವಣೆ ಮಾಡಲು ನಿರ್ಮಾಪಕ ಕೆ.ಮಂಜು ಸಿನಿಮಾ ಮಾಡಲ್ವಂತೆ. ದುಡ್ಡು ಮಾಡೋಕೆ ರೌಡಿಸಂ ಸಿನಿಮಾ ಮಾತ್ರ ಮಾಡ್ತಾರಂತೆ.!

ತಗೊಳಪ್ಪಾ...ಬ್ರೇಕಿಂಗ್ ನ್ಯೂಸ್ ಅಂತ ಹುಬ್ಬೇರಿಸುವ ಮುನ್ನ ಇದು ರೀಲ್ ಸುದ್ದಿ ಎಂಬುದನ್ನು ಮರೆಯಬೇಡಿ.


'ಜಿಗರ್ ಥಂಡ' ಚಿತ್ರದಲ್ಲಿ 'ತಾವಾಗಿಯೇ' ಅಂದ್ರೆ ಚಿತ್ರ ನಿರ್ಮಾಪಕನಾಗಿಯೇ ಅಭಿನಯಿಸಿರುವ ಕೆ.ಮಂಜು ''ಸಮಾಜ ಬದಲಾಗೋಕೆ ನಾನು ಸಿನಿಮಾ ಮಾಡೋಕೆ ಆಗಲ್ಲ. ನನಗೊಂದು ಆಕ್ಷನ್-ರೌಡಿಸಂ ಸಿನಿಮಾ ಬೇಕು'' ಅಂತ ಡೈಲಾಗ್ ಹೊಡೆಯುತ್ತಾರೆ. [ಫೋಟೋ ಆಲ್ಬಂ; 'ಜಿಗರ್ ಥಂಡ' ಆಡಿಯೋ ರಿಲೀಸ್ ನಲ್ಲಿ ತಾರೆಗಳ ಸಂಗಮ]


ಇದೀಗಷ್ಟೇ ಬಿಡುಗಡೆ ಆಗಿರುವ 'ಜಿಗರ್ ಥಂಡ' ಟ್ರೈಲರ್ ನಲ್ಲಿ ಕೆ.ಮಂಜು ಹೊಡೆಯುವ ಈ ಒಂದೇ ಒಂದು ಡೈಲಾಗ್ ನಿಂದ ಏನೆಲ್ಲಾ ಆಗುತ್ತೆ ಅಂತ ಒಮ್ಮೆ ನೋಡ್ಕೊಂಡ್ ಬನ್ನಿ....ತಮಿಳಿನ 'ಜಿಗರ್ ಥಂಡ' ಚಿತ್ರದ ಕನ್ನಡ ಅವತರಣಿಕೆ ಆಗಿರುವ ಈ ಸಿನಿಮಾದಲ್ಲಿ ನಿರ್ದೇಶಕನಾಗುವ ದೊಡ್ಡ ಕನಸು ಕಾಣುತ್ತಾ, ರೌಡಿಸಂ ಹುತ್ತಕ್ಕೆ ಕೈ ಹಾಕುವ ಸಹಾಯಕ ನಿರ್ದೇಶಕನ ಪಾತ್ರದಲ್ಲಿ ರಾಹುಲ್ ಮಿಂಚಿದ್ದಾರೆ. ಇನ್ನೂ ಖತರ್ನಾಕ್ ರೌಡಿ ಪಾತ್ರದಲ್ಲಿ ರವಿಶಂಕರ್ ಅಬ್ಬರಿಸಿದ್ದಾರೆ. [50ರ ಗಡಿ ತಲುಪಿದ ಸಂಭ್ರಮದಲ್ಲಿ 'ಆರ್ಮುಗಂ' ರವಿಶಂಕರ್]


-
-
-
-
-
-
-
-
-
-
-
-
-
-

ಸಿನಿಮಾದೊಳಗಿನ ಸಿನಿಮಾ ಮೇಕಿಂಗ್ ಕುರಿತ ಕಥೆ ಆಗಿರುವ 'ಜಿಗರ್ ಥಂಡ' ಚಿತ್ರಕ್ಕೆ ಶಿವಗಣೇಶ್ ನಿರ್ದೇಶನ, ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದೆ. ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ 'ಜಿಗರ್ ಥಂಡ' ಚಿತ್ರಕ್ಕೆ ಎಸ್.ಆರ್.ವಿ.ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ. [ಮುಂದಿನ ವಾರ ಚಿತ್ರಮಂದಿರಗಳಲ್ಲಿ 'ಜಿಗರ್ ಥಂಡ' ಹವಾ]


ರಾಹುಲ್, ಸಂಯುಕ್ತ ಬೆಳವಾಡಿ, ದತ್ತಣ್ಣ, ಅವಿನಾಶ್, ಚಿಕ್ಕಣ್ಣ 'ಜಿಗರ್ ಥಂಡ' ಚಿತ್ರದ ಪ್ರಮುಖ ಪಾತ್ರಧಾರಿಗಳು. ಮುಂದಿನ ವಾರ (ಜೂನ್ 24) 'ಜಿಗರ್ ಥಂಡ' ಬಿಡುಗಡೆ ಆಗಲಿದೆ.

English summary
Kannada Actor Rahul starrer Kannada Movie 'Jigarthanda' official trailer is out. 'Jigarthanda' features Rahul, Samyuktha Belawadi, Ravishankar and K.Manju in the lead and is directed by Shiva Ganesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada