For Quick Alerts
  ALLOW NOTIFICATIONS  
  For Daily Alerts

  ಸೂಪರ್ ಸ್ಟಾರ್ ರಜನಿ 'ಕಬಾಲಿ' ಟೀಸರ್ ಟ್ರೆಂಡಿಂಗ್!

  By ಜೇಮ್ಸ್ ಮಾರ್ಟಿನ್
  |

  ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹುನಿರೀಕ್ಷಿತ ಚಿತ್ರ 'ಕಬಾಲಿ' ಟೀಸರ್ ಮೇ 1ರಂದು ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಸಕತ್ ಚರ್ಚೆಯಲ್ಲಿದೆ. ಟೀಸರ್ ಬಿಡುಗಡೆಯಾದ ಅರ್ಧಗಂಟೆಯೊಳಗೆ 50 ಸಾವಿರ ವೀಕ್ಷಣೆ ಜೊತೆಗೆ 60 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ. ಟ್ವಿಟ್ಟರ್ ನಲ್ಲಿ ಈ ಸಮಯಕ್ಕೆ 35 ಸಾವಿರಕ್ಕೂ ಅಧಿಕ ಟ್ವೀಟ್ಸ್ ಮೂಲಕ ಭಾರತದಲ್ಲಿ ಟಾಪ್ ಟ್ರೆಂಡಿಂಗ್ ಎನಿಸಿಕೊಂಡಿದೆ.

  'ನಾನು ಬೆಂಕಿ' ಎನ್ನುತ್ತಾ ತ್ರೀಪೀಸ್ ಸೂಟ್ ಧಾರಿಯಾಗಿ ಸ್ಟೈಲ್ ಕಿಂಗ್ ರಜನಿ ನಡೆದುಕೊಂಡು ಬರುವ ದೃಶ್ಯದಿಂದ ಟೀಸರ್ ಆರಂಭಗೊಳ್ಳುತ್ತದೆ. ಜತೆಗೆ ನಾಯಕಿ ರಾಧಿಕಾ ಆಪ್ಟೆ ಲುಕ್,ರಜನಿ ಕಿಕ್ ಫೈಟ್ ಇದೆ.[ರಜನಿಕಾಂತ್ 'ಕಬಾಲಿ' ಚಿತ್ರಕಥೆ ಹೇಳ್ತೀವಿ ಕೇಳಿ!]

  ಕನ್ನಡಿಗ ಕಿಶೋರ್ ತನ್ನ ಗ್ಯಾಂಗ್ ನೊಂದಿಗೆ ಕುಳಿತು 'ಯಾರದು ಕಬಾಲಿ(ಕಪಾಲಿ)?' ಎಂದು ಕೂಗಿ ಕೇಳುವ ದೃಶ್ಯ ಚೆನ್ನಾಗಿ ಮೂಡಿ ಬಂದಿದೆ. ಇದಕ್ಕೆ ಉತ್ತರವಾಗಿ ನಂಬಿಯಾರ್ (ಎಂಜಿಆರ್ ಕಾಲದ ವಿಲನ್) ಕಾಲದ ವಿಲನ್ ಕಬಾಲಿ ಎಂದುಕೊಳ್ಳಬೇಡಿ. 'ನಾನು ಕಬಾಲಿ' ಎಂದು ರಜನಿ ಪಂಚ್ ಡೈಲಾಗ್ ಹೊಡೆಯುತ್ತಾರೆ.

  ಸೂಪರ್ ಸ್ಟಾರ್ ರಜನಿ 'ಕಬಾಲಿ' ಟೀಸರ್ ಸಕತ್ ಹಿಟ್!

  70ರ ದಶಕದಲ್ಲಿ ರಜನಿ ಇದ್ದ ರೆಟ್ರೋ ಲುಕ್ ಹೇಗಿತ್ತು ಎಂಬ ಝಲಕ್ ಕೂಡಾ ಸಿಗುತ್ತದೆ. ರಜನಿಕಾಂತ್ ಡೈಲಾಗ್, ಸ್ಟೈಲ್, ನಗು ಎಲ್ಲವೂ ಮೊದಲ ನೋಟಕ್ಕೆ ಅಭಿಮಾನಿಗಳು ಫಿದಾ ಆಗುವಂತೆ ಮಾಡುತ್ತದೆ.

  ಸಾಮಾನ್ಯವಾಗಿ ಮೈಸೂರಿನ ಅಸುಪಾಸಿನಲ್ಲಿ ಶೂಟಿಂಗ್ ಮಾಡುವ ರಜನಿ ಕಾಂತ್ ಅವರು ಕಥೆಗೆ ತಕ್ಕಂತೆ ಮಲೇಷಿಯಾ, ಸಿಂಗಪುರಕ್ಕೆ ಹಾರಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಕಾರ್ಮಿಕರ ಸಮಸ್ಯೆ ಚಿತ್ರ ಇದಾಗಿರುವುದರಿಂದ ಕಾರ್ಮಿಕರ ದಿನಾಚರಣೆ ಮೇ 1ರಂದೇ ಟೀಸರ್ ಬಿಡುಗಡೆ ಮಾಡಲಾಗಿದೆ. ಚಿತ್ರ ಬಿಡುಗಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.

  ಯುವ ನಿರ್ದೇಶಕ ಪಿ ರಂಜಿತ್ ಅವರ ಜತೆಗೆ ಸೌಂಡ್ ಡಿಸೈನರ್ ಅಂಥೋನಿ ರೂಬೆನ್ಸ್, ಸಂಗೀತಗಾರ ಸಂತೋಷ್ ನಾರಾಯಣ್ ಈ ಚಿತ್ರದಲ್ಲಿ ಮಿಂಚುವ ಸಾಧ್ಯತೆ ಕಾಣಿಸುತ್ತಿದೆ. ತಾರಾಗಣದಲ್ಲಿ ರಾಧಿಕಾ ಆಪ್ಟೆ, ನಾಸರ್, ವಿನ್ಸ್ ಟನ್ ಚೌ, ರೋಶನ್, ದಿನೇಶ್ ರವಿ, ಧನ್ಸಿಕಾ, ಜಾನ್ ವಿಜಯ್, ಕಿಶೋರ್ ಮುಂತಾದವರಿದ್ದಾರೆ. ಸದ್ಯಕ್ಕೆ ಟೀಸರ್ ಹಾಗೂ ಗ್ಯಾಲರಿಯಲ್ಲಿ ಸ್ಕ್ರೀನ್ ಶಾಟ್ಸ್ ನೋಡಿ.

  English summary
  The much-awaited teaser trailer for superstar Rajinikanth's Kabali was released on Labours day (May 01).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X