»   » ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ 'ಹೊಂಬಣ್ಣ' ಟ್ರೈಲರ್ ನೋಡಿದ್ರಾ..

ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ 'ಹೊಂಬಣ್ಣ' ಟ್ರೈಲರ್ ನೋಡಿದ್ರಾ..

Posted By:
Subscribe to Filmibeat Kannada

ಸಂಪೂರ್ಣ ಮಲೆನಾಡು ಪ್ರದೇಶದ ದಟ್ಟ ಕಾಡಿನಲ್ಲಿ ಚಿತ್ರೀಕರಣ ಮಾಡಿರುವ 'ಹೊಂಬಣ್ಣ' ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

ಕಾಡನ್ನು ಉಳಿಸುವ ಕುರಿತು ಸಿನಿಮಾ ಪೂರ್ಣ ಕಥೆ ಆವರಿಸಿಕೊಂಡಿದ್ದು, ಚಿತ್ರದಲ್ಲಿ ಕಾಡಿನ ಜನರು ಮತ್ತು ಅರಣ್ಯ ಅಧಿಕಾರಿಗಳ ನಡುವಿನ ಕಿತ್ತಾಟಗಳು, ಕಾಡಿನ ಜನರ ಮೇಲಿನ ಶೋ‍ಷಣೆ 'ಹೊಂಬಣ್ಣ' ಚಿತ್ರದಲ್ಲಿದೆ. ತೆರೆ ಮೇಲೆ ಬರಲು ರೆಡಿಯಾಗಿರುವ ಈ ಚಿತ್ರದ ಟ್ರೈಲರ್ ನಿನ್ನೆ ಬಿಡುಗಡೆ ಆಗಿದ್ದು ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ.

watch Rakshith Thirthahalli directorial 'Hombanna' movie trailer

ಚಿತ್ರದಲ್ಲಿ ಪ್ರಮುಖವಾಗಿ ಚಂದನವನದ ಹಿರಿಯ ನಟರಾದ ಸುಚೇಂದ್ರ ಪ್ರಸಾದ್, ದತ್ತಣ್ಣ ಮತ್ತು ನೀನಾಸಂ ಅಶ್ವಥ್ ಅಭಿನಯಿಸಿದ್ದಾರೆ. ಇವರನ್ನು ಹೊರತುಪಡಿಸಿ ಮಿಮಿಕ್ರಿ ಗೋಪಿ, ಕುಮಾರ್ ಅರಸೇಗೌಡ, ಚೇತನ್ ಚಂದ್ರ, ಧನು ಗೌಡ, ಸುಬ್ಬು ತಳಬಿ ವರ್ಷ ಆಚಾರ್ಯ ಮತ್ತು ಇತರರು ಕಾಣಿಸಿಕೊಂಡಿದ್ದಾರೆ.

'ಹೊಂಬಣ್ಣ' ಚಿತ್ರವನ್ನು ಕಥೆ-ಚಿತ್ರಕಥೆ-ಸಾಹಿತ್ಯ-ಸಂಭಾಷಣೆ ಬರೆದು ರಕ್ಷಿತ್ ತೀರ್ಥಹಳ್ಳಿ ನಿರ್ದೇಶನ ಮಾಡಿದ್ದಾರೆ. ವಿನು ಮನಸು ಸಂಗೀತ ಸಂಯೋಜನೆ ನೀಡಿದ್ದು, ಚಂದನ್ ಶೆಟ್ಟಿ, ಜೋಗಿ ಸುನೀತ, ವಾಣಿ ಹರಿಕೃಷ್ಣ ಮುಂತಾದವರು ಚಿತ್ರಕ್ಕೆ ಹಾಡಿದ್ದಾರೆ. ಸಂಚಲನ ಮೂವೀಸ್ ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡಿದ್ದು, ಪ್ರವೀಣ್ ಎಸ್ ಎಂಬುವರು ಛಾಯಾಗ್ರಹಣ ನಿರ್ವಹಣೆ ಮಾಡಿದ್ದಾರೆ. ಈ ಚಿತ್ರ ಜುಲೈ 7 ರಂದು ತೆರೆಕಾಣುತ್ತಿದೆ. ಚಿತ್ರದ ಟ್ರೈಲರ್ ಈ ಕೆಳಗಿನಂತಿದೆ.

English summary
Rakshith Thirthahalli directorial 'Hombanna' movie trailer released yesterday(June 28). This movie is releasing on July 7.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada