»   » ವರ್ಮಾ ನಿರ್ದೇಶನದ ಕೊನೆಯ ತೆಲುಗು ಚಿತ್ರದ ಟ್ರೈಲರ್ ನೋಡಿದ್ರಾ.?

ವರ್ಮಾ ನಿರ್ದೇಶನದ ಕೊನೆಯ ತೆಲುಗು ಚಿತ್ರದ ಟ್ರೈಲರ್ ನೋಡಿದ್ರಾ.?

By: ಭರತ್ ಕುಮಾರ್
Subscribe to Filmibeat Kannada

ನೈಜ ಘಟನಾಧಾರಿತ, ರಕ್ತಚರಿತ್ರೆ, ಹಾರರ್ ಸಿನಿಮಾಗಳನ್ನ ಅಷ್ಟೇ ನಾಜೂಕಾಗಿ, ಹಸಿ ಹಸಿಯಾಗಿ ತೆರೆಮೇಲೆ ತರುವಲ್ಲಿ ಡೈರೆಕ್ಟರ್ ರಾಮ್‌ ಗೋಪಾಲ್‌ ವರ್ಮಾ ಎತ್ತದ ಕೈ. ಇದೇ ಕಾರಣಕ್ಕೆ 'ವರ್ಮಾ' ಚಿತ್ರಗಳು ಅಂದ್ರೆ ಸೌತ್‌ ಇಂಡಸ್ಟ್ರಿಯಿಂದ ಹಿಡಿದು ಬಾಲಿವುಡ್‌ ವರೆಗೂ ಎಲ್ಲಾ ಸಿನಿ ಪ್ರೇಕ್ಷಕರೂ ಕೂಡ ಮೊದಲ ಶೋ ನೋಡ್ಬೇಕು ಅಂತಾ ತುದಿಗಾಲಲ್ಲಿ ನಿಲ್ಲುವುದು.!

ಇತ್ತೀಚೆಗಷ್ಟೇ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಮಾಡಿ ದೇಶದ ಗಮನ ಸೆಳೆದಿದ್ದ ಆರ್‌ಜಿವಿ ಈಗ ಮತ್ತೊಂದು ರಕ್ತಚರಿತ್ರೆಯನ್ನ ಹೊತ್ತು ತಂದಿದ್ದಾರೆ. ['ಅಂಡರ್ ವರ್ಲ್ಡ್ ಡಾನ್' ಗಳ ಬೆನ್ನತ್ತಿದ ನಿರ್ದೇಶಕ ಆರ್.ಜಿ.ವಿ]

''ತೆಲುಗಿನಲ್ಲಿ ನನ್ನ ಕೊನೆ ಚಿತ್ರವನ್ನ ನಿರ್ದೇಶನ ಮಾಡ್ತಿದ್ದೀನಿ'' ಅಂತ್ಹೇಳಿ ಸಿಕ್ಕಾಪಟ್ಟೆ ಸುದ್ದಿ ಮಾಡಿದ್ದ ವರ್ಮಾ, ಇದೀಗ 'ಆ' ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದಾರೆ. ಮುಂದೆ ಓದಿ....

ಆರ್‌ಜಿವಿಯ ಕೊನೆ ಚಿತ್ರ ಯಾವುದು.?

ವಿವಾದಾತ್ಮಕ ನಿರ್ದೇಶಕ ಅಂತಾನೇ ಗುರುತಿಸಿಕೊಂಡಿರುವ ಆರ್‌ಜಿವಿ, ತೆಲುಗಿನಲ್ಲಿ ನಿರ್ದೇಶನ ಮಾಡಿರುವ ಹೊಸ ಸಿನಿಮಾ 'ವಂಗವೀಟಿ'. ''ವಂಗವೀಟಿ' ಒಂದೊಳ್ಳೆ ಕಥೆ. ನಾನು ನಿವೃತ್ತಿಯಾಗುವುದಕ್ಕೆ ಇದಕ್ಕಿಂತ ಬೇರೆ ಸಿನಿಮಾ ಬೇಕಾಗಿಲ್ಲ. ಹೀಗಾಗಿ ಇದು ತೆಲುಗಿನಲ್ಲಿ ನನ್ನ ಕೊನೆ ಸಿನಿಮಾ'' ಅಂತ ಚಿತ್ರ ಸೆಟ್ಟೇರುವಾಗ ರಾಮ್ ಗೋಪಾಲ್ ವರ್ಮಾ ಹೇಳಿದ್ದರು. [ತೆಲುಗು ಚಿತ್ರರಂಗಕ್ಕೆ ಗುಡ್ ಬೈ ಹೇಳ್ತಾರಂತೆ 'ದಿ ಗ್ರೇಟ್' ವರ್ಮಾ]

ನೈಜ ಕಥೆಯಾಧಾರಿತ ಚಿತ್ರ 'ವಂಗವೀಟಿ'

1970-80ರಲ್ಲಿ ಇಡೀ ವಿಜಯವಾಡವನ್ನ ಬೆಚ್ಚಿಬೀಳಿಸಿದ ಬರೋಬ್ಬರಿ 40 ದಿನಗಳ ಕರ್ಫ್ಯೂಗೆ ಕಾರಣವಾದ ಗ್ಯಾಂಗ್ ವಾರ್, ರಾಜಕೀಯ ಷಡ್ಯಂತ್ರ, ರೌಡಿಗಳ ಕುತಂತ್ರ ಕುರಿತ ರಕ್ತಸಿಕ್ತ ಅಧ್ಯಾಯವೇ ಈ 'ವಂಗವೀಟಿ'. ಮಾಜಿ ಕಾಂಗ್ರೆಸ್ ಶಾಸಕ ವಂಗವೀಟಿ ಮೋಹನ ರಂಗ ಮತ್ತವರ ಸಹೋದರ ವಂಗವೀಟಿ ರಾಧ ರವರ ಜೀವನಚರಿತ್ರೆಯೇ ಈ ಸಿನಿಮಾ. [ವರ್ಮಾರ ತೆಲುಗಿನ 'ಐಸ್ ಕ್ರೀಮ್' ಮಾಡುತ್ತಿದೆ ಕನ್ನಡದ ಕಗ್ಗೊಲೆ]

ರಿಯಲ್ ಕಥೆಯ ರೀಲ್ ನಾಯಕರು ಯಾರು.?

'ವಂಗವೀಟಿ' ಚಿತ್ರದಲ್ಲಿ ಅಭಿನಯಿಸಿರುವ ಬಹುತೇಕ ಎಲ್ಲಾ ಕಲಾವಿದರೂ ಹೊಸಬರೇ. ವಂಗವೀಟಿ ರಾಧ ಹಾಗೂ ವಂಗವೀಟಿ ರಂಗಾ ಎರಡೂ ಪಾತ್ರಗಳಲ್ಲೂ ನವನಟ ಸಂದೀಪ್‌ ಕುಮಾರ್‌ ಕಾಣಿಸಿಕೊಂಡಿದ್ದಾರೆ. ಉಳಿದಂತೆ ವಂಶಿ ನಕ್ಕಂಟಿ, ವಂಶಿ ಚಗಂಟಿ, ನೈನಾ ಗಂಗೂಲಿ ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿದ್ದಾರೆ.

ವರ್ಮಾ ನಿಸ್ಸೀಮ

ನೈಜಕಥೆಗಳನ್ನ ತೆರೆಮೇಲೆ ತರುವುದರಲ್ಲಿ ನಿಸ್ಸೀಮ ಎನಿಸಿಕೊಂಡಿರುವ ವರ್ಮ ಈ ಬಾರಿಯೂ ಅಂತದ್ದೇ ಕಥೆಯನ್ನ ಆರಿಸಿಕೊಂಡು ಬಂದಿದ್ದಾರೆ. 80 ರ ದಶಕದ ಘಟನೆಯನ್ನ 'ವಂಗವೀಟಿ' ಚಿತ್ರದ ಮೂಲಕ ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದಾರೆ ಎನ್ನುವುದಕ್ಕೆ ಈ ಟ್ರೇಲರ್ ಸಾಕ್ಷಿ.

ಯಾವಾಗ ಬಿಡುಗಡೆ.?

ದಾಸರಿ ಕಿರಣ್ ಕುಮಾರ್‌ ಈ ಚಿತ್ರವನ್ನ ನಿರ್ಮಾಣ ಮಾಡಿದ್ದು, ಶೂಟಿಂಗ್ ಬಹುತೇಕ ಮುಗಿದಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ ಈ ತಿಂಗಳ ಅಂತ್ಯಕ್ಕೆ 'ವಂಗವೀಟಿ' ತೆರೆಗೆ ಬರುವ ಸಾಧ್ಯತೆ ಇದೆ.

ಟ್ರೈಲರ್ ನೋಡಿದ್ರಾ?

'ವಂಗವೀಟಿ' ಚಿತ್ರದ ಟ್ರೇಲರ್ ನ ನೀವಿನ್ನೂ ನೋಡಿಲ್ಲ ಅಂದ್ರೆ ಈ ಲಿಂಕ್ ಕ್ಲಿಕ್ ಮಾಡಿ ನೋಡಿ......

English summary
Director Ram Gopal Varma is back with another Political, Gang War, Crime Based story 'Vangaveeti'. The movie is based on Former Congress MLA Vangaveeti Mohana Ranga and his brother Vangaveeti Radha. Watch 'Vangaveeti' trailer here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada