»   » ನಿಜವಾದ 'ಆರಡಿ ಕಟೌಟ್' ಸುದೀಪ್ ಅಲ್ಲ.! ಇವ್ರು.!?

ನಿಜವಾದ 'ಆರಡಿ ಕಟೌಟ್' ಸುದೀಪ್ ಅಲ್ಲ.! ಇವ್ರು.!?

Posted By:
Subscribe to Filmibeat Kannada

''ಹಿಟ್ ಔಟ್ ಆರ್ ಗೆಟ್ ಔಟ್..ಇವ್ನು ಆರಡಿ ಕಟೌಟ್..'' ಕಿಚ್ಚ ಸುದೀಪ್ ಅಭಿನಯದ 'ರನ್ನ' ಚಿತ್ರದ 'ಬಬ್ಬರ್ ಶೇರ್' ಹಾಡಿನ ಜನಪ್ರಿಯ ಸಾಲುಗಳಿವು. ಮೊನ್ನೆಯಷ್ಟೇ ರಿಲೀಸ್ ಆದ ಈ ಹಾಡು ಅದಾಗಲೇ ಚಾರ್ಟ್ ಬಸ್ಟರ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿರುವ 'ಜಂಗಲೇ ಮೇನ್ ಸಿಂಗಲ್ ಶೇರ್...ನಾಮ್ ಹೇ ಉಸ್ಕಾ ಬಬ್ಬರ್ ಶೇರ್' ಹಾಡನ್ನ ಕೇಳಿರುವ ಸುದೀಪ್ ಅಭಿಮಾನಿಗಳು ಕಿಚ್ಚ ಸುದೀಪ್ ಗೆ 'ಆರಡಿ ಕಟೌಟ್' ಅಂತಲೇ ನಾಮಕರಣ ಮಾಡಿದ್ದಾರೆ. ['ರನ್ನ' ಚಿತ್ರದ ಸೂಪರ್ ಸಾಂಗ್ ಟೀಸರ್ ರಿಲೀಸ್]


Watch 'Ranna' making teaser dedicated for Director Nandakishore

ಹೀಗಿರುವಾಗಲೇ 'ರನ್ನ' ಚಿತ್ರತಂಡದಲ್ಲಿನ ಮತ್ತೊಬ್ಬರಿಗೆ 'ಆರಡಿ ಕಟೌಟ್' ಅಂತ ಹೇಳಲಾಗುತ್ತಿದೆ. ಅದ್ಯಾರು ಗೊತ್ತಾ? ಬೇರಾರು ಅಲ್ಲ, 'ರನ್ನ' ಚಿತ್ರದ ನಿರ್ದೇಶಕ ನಂದಕಿಶೋರ್.


ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಂದಕಿಶೋರ್ ಅವರಿಗೆ ಒಂದು ಸ್ಪೆಷಲ್ ಉಡುಗೊರೆ ಕೊಡುವ ಸಲುವಾಗಿ 'ರನ್ನ' ಟೀಮ್ ಮೇಕಿಂಗ್ ಟೀಸರ್ ಸಿದ್ಧಗೊಳಿಸಿದೆ. ಅದ್ರಲ್ಲಿ 'ಆರಡಿ ಕಟೌಟ್' ಆಗಿರುವುದು ಸುದೀಪ್ ಅಲ್ಲ.! ಬದಲಾಗಿ ಡೈರೆಕ್ಟರ್ ನಂದಕಿಶೋರ್. ಅದ್ಹೇಗೆ ಅಂತ ನೀವೇ ನೋಡಿ.....


Watch 'Ranna' making teaser dedicated for Director Nandakishore


ಸುದೀಪ್ ಗಾಗಿ ರೆಡಿಯಾಗಿರುವ 'ಬಬ್ಬರ್ ಶೇರ್' ಹಾಡನ್ನ ನಂದಕಿಶೋರ್ ಹುಟ್ಟುಹಬ್ಬದ ಪ್ರಯುಕ್ತ ಡೆಡಿಕೇಟ್ ಮಾಡಲಾಗಿದೆ. ಪ್ರತಿ ಫ್ರೇಮ್ ನಲ್ಲೂ ರಿಚ್ ಆಗಿ ರೆಡಿಯಾಗಿರುವ 'ರನ್ನ' ಸಿನಿಮಾ ರಿಲೀಸ್ ಗೆ ಸಿದ್ದವಾಗುತ್ತಿದೆ. [ಸುದೀಪ್ ರೀಮೇಕ್ ಚಿತ್ರಗಳ ಚಿದಂಬರ ರಹಸ್ಯ ಬಯಲು]


Watch 'Ranna' making teaser dedicated for Director Nandakishore

ಏಪ್ರಿಲ್ ಮೊದಲ ವಾರದಲ್ಲಿ 'ರನ್ನ' ರಿಲೀಸ್ ಆಗಲಿದೆ ಅಂತ ಮೊದಲು ಹೇಳಲಾಗಿತ್ತು. ಆದ್ರೆ, ಇದೇ ವಾರ 'ರನ್ನ'ನ ಚಿನ್ನದಂಥ ಹಾಡುಗಳು ಮಾರುಕಟ್ಟೆಗೆ ಲಗ್ಗೆ ಇಡುವ ಚಾನ್ಸಸ್ ಇದೆ. ಅಲ್ಲಿವರೆಗೂ, 'ಬಬ್ಬರ್ ಶೇರ್' ಗುಣಗಾನ ಮಾಡುತ್ತಿರಿ. (ಫಿಲ್ಮಿಬೀಟ್ ಕನ್ನಡ)

English summary
Kiccha Sudeep starrer 'Ranna' movie special making video dedicated to Director Nandakishore on his birthday is out. Watch the video here
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada