»   » ಭಾರಿ ಬಜೆಟ್ 'ರುದ್ರಮದೇವಿ' ಮೇಕಿಂಗ್ ವಿಡಿಯೋ ಔಟ್

ಭಾರಿ ಬಜೆಟ್ 'ರುದ್ರಮದೇವಿ' ಮೇಕಿಂಗ್ ವಿಡಿಯೋ ಔಟ್

Posted By:
Subscribe to Filmibeat Kannada

ತೆರೆಮೇಲೆ 'ಸ್ಟೈಲಿಶ್ ಸ್ಟಾರ್' ಅಲ್ಲು ಅರ್ಜುನ್ ಸಖತ್ ಸ್ಟೈಲಿಶ್. ಮಸ್ತ್ ಮಸ್ತ್ ಡ್ಯಾನ್ಸ್...ಸೂಪರ್ ಸ್ಟೈಲ್ ನಿಂದ ಹರೆಯದ ಹುಡುಗಿಯರ ಮನ ಗೆದ್ದಿರುವ ಅಲ್ಲು ಅರ್ಜುನ್ ತಮ್ಮ ಹೀರೋಯಿಸಂಗೆ ಟಾಲಿವುಡ್ ನಲ್ಲಿ ಸಖತ್ ಫೇಮಸ್.

ಇಂತಹ ಅಲ್ಲು ಅರ್ಜುನ್ ಇದೀಗ ವಿಲನ್! ಹಾಟ್ ಬ್ಯೂಟಿ ಅನುಷ್ಕಾ ಶೆಟ್ಟಿಗೆ ಎದುರಾಳಿಯಾಗಿ ತೊಡೆ ತಟ್ಟಿ ನಿಂತಿದ್ದಾರೆ ಅಲ್ಲು ಅರ್ಜುನ್. ಹೌದು, ಟಾಲಿವುಡ್ ನಲ್ಲಿ ಕುತೂಹಲ ಕೆರಳಿಸಿರುವ ಅನುಷ್ಕಾ ಶೆಟ್ಟಿ ಅಭಿನಯದ 'ರುದ್ರಮದೇವಿ' ಚಿತ್ರದಲ್ಲಿ ಅಲ್ಲು ಅರ್ಜುನ್, 'ರುದ್ರಮದೇವಿ'ಗೆ ಸವಾಲು ಹಾಕುವ 'ಗೋನ ಗಾನ್ನ ರೆಡ್ಡಿ' ಪಾತ್ರದಲ್ಲಿ ಮಿಂಚಿದ್ದಾರೆ. [ಕನ್ನಡದ ಕುವರನೊಂದಿಗೆ ನಟಿ ಅನುಷ್ಕಾ ಶೆಟ್ಟಿ ಮದುವೆ?]

Watch Rudramadevi Making: Allu arjun as Gona Ganna Reddy

'ರುದ್ರಮದೇವಿ' ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸುತ್ತಿರುವ ಅಲ್ಲು ಅರ್ಜುನ್, ಚಿಕ್ಕ ಪಾತ್ರವಾದರೂ, ಇಡೀ ಚಿತ್ರಕ್ಕೆ ಟ್ವಿಸ್ಟ್ ಕೊಡುವ, 'ರುದ್ರಮದೇವಿ'ಗೆ ಟಾಂಗ್ ಕೊಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದುವರೆಗೂ ಗುಟ್ಟಾಗಿದ್ದ ಅಲ್ಲು ಅರ್ಜುನ್ ಲುಕ್ ಇದೀಗ ಸಂಕ್ರಾಂತಿ ಹಬ್ಬದ ಪ್ರಯುಕ್ತ ಹೊರಬಂದಿದೆ.

'ಗೋನ ಗಾನ್ನ ರೆಡ್ಡಿ' ಪಾತ್ರದಲ್ಲಿ ಅಲ್ಲು ಅರ್ಜುನ್ ಮಾಡಿರುವ ಕಸರತ್ತಿನ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದೆ. ಕುದುರೆ ಸವಾರಿ, ಕತ್ತಿ ವರಸೆಯಲ್ಲಿ ಪರಿಣಿತಿ ಪಡೆದಿರುವ ಅಲ್ಲು ಅರ್ಜುನ್, ಗೋನ ಗಾನ್ನ ರೆಡ್ಡಿಯಾಗಿ ಹೇಗೆ ಕಾಣ್ತಾರೆ ಅಂತ ನೀವೇ ನೋಡಿ..

Watch Rudramadevi Making: Allu arjun as Gona Ganna Reddy-vd

ಐತಿಹಾಸಿಕ ಚಿತ್ರವಾಗಿರುವ 'ರುದ್ರಮದೇವಿ' 3ಡಿಯಲ್ಲಿ ತಯಾರಾಗುತ್ತಿರುವ ಚಿತ್ರ. ಗ್ರಾಫಿಕ್ಸ್ ಕೆಲಸ ಸಿಕ್ಕಾಪಟ್ಟೆ ಇರುವುದರಿಂದ ಮೇಕಿಂಗ್ ನಲ್ಲಿ ಗ್ರೀನ್ ಮ್ಯಾಟ್ ಬಳಸಿರುವುದನ್ನ ನೀವು ಕಾಣಬಹುದು. [ಗಾಂಧಿನಗರದ 'ಲೇಡಿ ಸಿಂಗಂ' ಆಗ್ತಾರಾ ಅನುಷ್ಕಾ ಶೆಟ್ಟಿ?]

'ಒಕ್ಕಡು', 'ಸೈನಿಕುಡು' ಸೇರಿದಂತೆ ತೆಲುಗು ಸಿನಿ ಅಂಗಳದಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನ ನೀಡಿರುವ ಗುಣಶೇಖರ್, 'ರುದ್ರಮದೇವಿ'ಗೆ ಆಕ್ಷನ್ ಕಟ್ ಹೇಳಿದ್ದಾರೆ. ಬರೋಬ್ಬರಿ 85 ಕೋಟಿ ರೂಪಾಯಿಯಲ್ಲಿ ತಯಾರಾಗುತ್ತಿರುವ 'ರುದ್ರಮದೇವಿ' ಚಿತ್ರದಲ್ಲಿ ಅನುಷ್ಕಾ ಗ್ಲಾಮರ್-ಪವರ್ ಜೊತೆಗೆ ಅಲ್ಲು ಅರ್ಜುನ್ ಖದರ್ ನೋಡುವ ಭಾಗ್ಯ ನಿಮ್ಮದು.

ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ಕೃಷ್ಣಂ ರಾಜು, ಸುಮನ್, ಬ್ರಹ್ಮಾನಂದಂ ಸೇರಿದಂತೆ ದೊಡ್ಡ ತಾರಾಬಳಗವಿರುವ 'ರುದ್ರಮದೇವಿ' ಮೇ ತಿಂಗಳ ಹೊತ್ತಿಗೆ ತೆರೆಗೆ ಬರುವ ಸಾಧ್ಯತೆ ಇದೆ.

English summary
The Filmmaker Gunashekar has released Gona Ganna Reddy's Making Video for Sankranthi. Allu Arjun looks dashing as Main Antagonist 'Gona Ganna Reddy' in the movie 'Rudramadevi'. Watch the making video here.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada