»   » ಕನ್ನಡ ಚಿತ್ರರಂಗದ ಮಿನಿ 'ವಜ್ರಮುನಿ' ಯಾರು ಹೇಳಿ..?

ಕನ್ನಡ ಚಿತ್ರರಂಗದ ಮಿನಿ 'ವಜ್ರಮುನಿ' ಯಾರು ಹೇಳಿ..?

Posted By:
Subscribe to Filmibeat Kannada

ವಜ್ರ ಕಂಠ, ಭೀಭತ್ಸ ಮುಖ, ಮನೆ ಮುರುಕ ಪಾತ್ರಗಳಿಂದಾಗಿ ಜೀವಿತಾವಧಿಯ ಕೊನೆಯ ಕ್ಷಣದವರೆಗೂ ಚಾಲ್ತಿಯಲ್ಲಿದ್ದ ವಿಲನ್ ಅಂದ್ರೆ, ನಟ ಭಯಂಕರ ವಜ್ರಮುನಿ. ನಟನೆಯಲ್ಲಿ ಖಳನಾಯಕ ವಜ್ರಮುನಿಗೆ ವಜ್ರಮುನಿಯೇ ಸರಿಸಾಟಿ. ಹೀಗಿರುವಾಗಲೇ, ಕನ್ನಡ ಚಿತ್ರರಂಗದಲ್ಲಿ 'ಮಿನಿ ವಜ್ರಮುನಿ' ಹುಟ್ಟಿಕೊಂಡಿದ್ದಾನೆ.

ಅದು ಯಾರು ಅಂದ್ರಾ.....ನಮ್ಮ ಕಾಮಿಡಿ ಖಿಲಾಡಿ ಶರಣ್. ಇದೇನಪ್ಪಾ, ನಕ್ಕು ನಲಿಸುವುದರಲ್ಲಿ ಹೆಸರುವಾಸಿಯಾಗಿರುವ ಶರಣ್, ಎಲ್ಲಾದರೂ ವಜ್ರಮುನಿಯಂತೆ ಕ್ರೌರ್ಯದ ಪಾತ್ರವನ್ನ ಮಾಡುವುದುಂಟಾ ಅಂತ ಕಣ್ಣು ಬಾಯಿ ಬಿಡುವ ಮುನ್ನ ಮೊದಲು ಈ ಹಾಡನ್ನೊಮ್ಮೆ ಕೇಳಿ.....


Raja Rajendra teaser and songs

ಹೌದು, ತಮ್ಮ ಹೊಚ್ಚ ಹೊಸ 'ರಾಜ ರಾಜೇಂದ್ರ' ಚಿತ್ರದಲ್ಲಿ 'ಮಿನಿ ವಜ್ರಮುನಿ'ಯಾಗಿ ಶರಣ್ ಘರ್ಜಿಸಿದ್ದಾರೆ. ಹಾಗಂತ ಶರಣ್ ಗೊಂದು ಐಡೆಂಟಿಟಿ ಬೇಡ್ವಾ, ಅದಕ್ಕೆ 'ಬಾಟಲ್ ಮಣಿ' ಅಂತ ನಾಮಕರಣ ಬೇರೆ ಮಾಡಿಕೊಂಡಿದ್ದಾರೆ ಶರಣ್. [ಟ್ವಿಟ್ಟರ್ ನಲ್ಲಿ 'ರಾಜ ರಾಜೇಂದ್ರ'ನ ದರ್ಬಾರ್]


ಮಿನಿ ವಜ್ರಮುನಿ, 'ಬಾಟಲ್ ಮಣಿ'ಯಾಗಿರುವ ಶರಣ್, ಬಾಟಲ್ ಗಳಿಂದಲೇ ರೆಡಿಯಾಗಿರುವ ಸೆಟ್ ನಲ್ಲಿ ಮಸ್ತ್ ಮಸ್ತ್ ಸ್ಟೆಪ್ ಹಾಕಿದ್ದಾರೆ. ದೊಡ್ಡ ವಿಲನ್ ಗೆಟಪ್ ನಲ್ಲಿ ವೀರಪ್ಪನ್ ನಂತಹ ನರಹಂತಕರಿಗೆ ಬುರುಡೆ ಬಿಸಿ ಮಾಡ್ತೀನಿ ಅಂತ ಹೇಳುವ ಶರಣ್, ಚಿತ್ರದಲ್ಲಿ ರೌಡಿನಾ...? ಈ ಪ್ರಶ್ನೆಗೆ ಉತ್ತರ ಬೇಕು ಅಂದ್ರೆ, ಸ್ವಲ್ಪ ಈ ಟೀಸರ್ ನ ನೋಡಿ.....


Raja Rajendra teaser and songs2

ಟೀಸರ್ ನಲ್ಲಿ ಎರಡು ಭಿನ್ನ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳುವ ಶರಣ್, ಒಮ್ಮೆ ರೌಡಿ ಥರ 'ಬಾಟಲ್ ಮಣಿ'ಯಾಗಿ ಬಿಲ್ಡಪ್ ತೆಗೆದುಕೊಂಡರೆ, ಇನ್ನೊಮ್ಮೆ 'ರಾಜ ರಾಜೇಂದ್ರ'ನಾಗಿ ಮಿಂಚುತ್ತಾರೆ. [ಗಾಂಧಿನಗರಕ್ಕೆ ಮತ್ತೆ ಅಡಿಯಿಟ್ಟ ನಾಗವಲ್ಲಿ ವಿಮಲಾ]


'ರಾಜ ರಾಜೇಂದ್ರ'ನ ಜೊತೆಯಾಗಿ ಬಹು ಭಾಷಾ ನಟಿ ವಿಮಲಾ ರಾಮನ್ ನಟಿಸಿದ್ದರೆ, 'ಬಾಟಲ್ ಮಣಿ' ಹೃದಯಕ್ಕೆ ಬಾಣ ಬಿಡುವ ಹುಡುಗಿ ಇಶಿತಾ ದತ್ತ. ಇಬ್ಬರ ಕೆಮಿಸ್ಟ್ರಿ ಹೇಗಿದೆ ಅಂತ ಶರಣ್ ಹರಿಸಿರುವ ಗಾನಸುಧೆಯಲ್ಲಿ ಗೊತ್ತಾಗುತ್ತೆ....ಕಣ್ತುಂಬಿಕೊಳ್ಳಿ.


Raja Rajendra teaser and songs3

ನಟಿಸುವುದರೊಂದಿಗೆ ಮೊದಲ ಬಾರಿಗೆ 'ರಾಜ ರಾಜೇಂದ್ರ' ಚಿತ್ರಕ್ಕೋಸ್ಕರ ಹಾಡು ಹಾಡಿದ್ದಾರೆ ಶರಣ್. ಎರಡು ವಿಭಿನ್ನ ಗೆಟಪ್ ನಲ್ಲಿ ಶರಣ್ ಕಾಮಿಡಿ ಕಿಕ್ ನೀಡುವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು ಪಿ.ಕುಮಾರ್. [ಮೈಕ್ ಹಿಡಿದ 'ರಾಜ ರಾಜೇಂದ್ರ'ನ ಕಾಲುಗಳು ಗಡಗಡ]


ಪಿ.ಕುಮಾರ್ ಮತ್ತು ಶರಣ್ ಕಾಂಬಿನೇಷನ್ 'ಜೈಲಲಿತಾ' ಚಿತ್ರದಲ್ಲಿ ಕ್ಲಿಕ್ ಆಗಿತ್ತು. ಇದೀಗ ಇದೇ ಜೋಡಿ 'ರಾಜ ರಾಜೇಂದ್ರ' ಚಿತ್ರವನ್ನ ತೆರೆಮೇಲೆ ತರುತ್ತಿದೆ. ಮೊದಲ ನೋಟಕ್ಕೆ ಸಖತ್ ರಿಚ್ಚಾಗಿ ರೆಡಿಯಾಗಿರುವ 'ರಾಜ ರಾಜೇಂದ್ರ' ಚಿತ್ರಕ್ಕೆ ಸೂಪರ್ ಹಾಡುಗಳನ್ನ ನೀಡಿದ್ದಾರೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ.


Raja Rajendra teaser and songs

ಈಗಷ್ಟೆ ರಿಲೀಸ್ ಆಗಿರುವ 'ರಾಜ ರಾಜೇಂದ್ರ' ಹಾಡುಗಳು ಎಲ್ಲಾ ಕಡೆ ತಮಟೆ ಬಾರಿಸುತ್ತಿವೆ. ತೆರೆಮೇಲೆ 'ರಾಜ ರಾಜೇಂದ್ರ'ನ ದರ್ಬಾರ್ ಶುರುವಾಗುವುದು ಮಾರ್ಚ್ ತಿಂಗಳ ಹೊತ್ತಿಗೆ. (ಫಿಲ್ಮಿಬೀಟ್ ಕನ್ನಡ)

English summary
Actor Sharan starrer Raja Rajendra teaser and songs are out. Watch the videos here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada