»   » ಚಿಂದಿ ಉಡಾಯಿಸುತ್ತಿದೆ 'ಮಾಸ್ ಲೀಡರ್' ಟ್ರೈಲರ್

ಚಿಂದಿ ಉಡಾಯಿಸುತ್ತಿದೆ 'ಮಾಸ್ ಲೀಡರ್' ಟ್ರೈಲರ್

Posted By:
Subscribe to Filmibeat Kannada

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ 'ಮಾಸ್ ಲೀಡರ್' ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಪೋಸ್ಟರ್, ಟೀಸರ್ ಗಳಿಂದ ಸಾಕಷ್ಟು ಕುತೂಹಲ ಹೆಚ್ಚಿಸಿದ್ದ 'ಮಾಸ್ ಲೀಡರ್', ಈಗ ಟ್ರೈಲರ್ ಮೂಲಕ ಮತ್ತೆ ಅಬ್ಬರಿಸಿದೆ. ಈ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸಿಂಹದ ಮರಿ ಘರ್ಜಿಸುವ ಸೂಚನೆ ಕೊಟ್ಟಿದೆ.

ಕಥೆಯ ವಿಚಾರಕ್ಕೆ ನಿರೀಕ್ಷೆ ಹುಟ್ಟಿಸಿರುವ ಮಾಸ್ ಲೀಡರ್ ನೈಜ ಘಟನೆಗಳಿಂದ ಸ್ಪೂರ್ತಿ ಪಡೆದಿದೆಯಂತೆ. ಚಿತ್ರದಲ್ಲಿ ಶಿವಣ್ಣ ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಒಂದೆಡೆ ಮಾಸ್ ಲೀಡರ್ ಆಗಿ ಮತ್ತೊಂದೆಡೆ ದೇಶಕಾಯೋ ಸಿಪಾಯಿ ಆಗಿ ಸೆಂಚುರಿಸ್ಟಾರ್ ಘರ್ಜಿಸಿದ್ದಾರೆ.

'ಮಾಸ್ ಲೀಡರ್'ನ ಸ್ಟೈಲ್, ಖದರ್, ಅಬ್ಬರಕ್ಕೆ ಸರಿಸಾಟಿಯಿಲ್ಲ

Watch: Shiva Rajkumar Starrer 'Leader' Trailer

ಇನ್ನೂ 'ಮಾಸ್ ಲೀಡರ್' ಚಿತ್ರದಲ್ಲಿ ದೊಡ್ಡ ಕಲಾವಿದರ ಬಳಗವಿದೆ. ಶಿವರಾಜ್ ಕುಮಾರ್ ಜೊತೆಯಲ್ಲಿ ನಟ ವಿಜಯ್ ರಾಘವೇಂದ್ರ, ಗುರು ಜಗ್ಗೇಶ್, ಆರ್ಮಿಗಳಾಗಿ ಬಣ್ಣ ಹಚ್ಚಿದ್ದಾರೆ. ಲೂಸ್ ಮಾದ ಯೋಗೇಶ್ ಸೂಪಾರಿ ಕಿಲ್ಲರ್ ಪಾತ್ರವನ್ನ ನಿರ್ವಹಿಸಿದ್ದಾರೆ. ಬಹುಭಾಷಾ ನಟಿ 'ಪ್ರಣೀತಾ ಸುಭಾಶ್' ನಾಯಕಿಯಾಗಿದ್ದು, ಶ್ರೀನಗರ ಕಿಟ್ಟಿ-ಭಾವನಾ ದಂಪತಿಯ ಪುತ್ರಿ ಪರಿಣಿತಾ, ಶಿವಣ್ಣನ ಮಗಳ ಪಾತ್ರ ನಿರ್ವಹಿಸುತ್ತಿದ್ದಾರೆ.

'ಮಾಸ್ ಲೀಡರ್' ಚಿತ್ರದ ನೈಜಕಥೆ ಬಹಿರಂಗ!

'ಲೀಡರ್' ಚಿತ್ರಕ್ಕೆ 'ರೋಸ್' ಖ್ಯಾತಿಯ ನಿರ್ದೇಶಕ ನರಸಿಂಹ (ಸಹನಾ ಮೂರ್ತಿ) ಆಕ್ಷನ್ ಕಟ್ ಹೇಳಿತ್ತಿದ್ದಾರೆ. ಹಾರ್ದಿಕ್ ತರುಣ್ ಕಂಬೈನ್ಸ್ ಲಾಂಚನದಲ್ಲಿ ತರುಣ್ ಶಿವಪ್ಪ ಹಾಗೂ ಹಾರ್ದಿಕ್ ಗೌಡ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ಮತ್ತು ಗುರು ಪ್ರಶಾಂತ್ ಛಾಯಾಗ್ರಹಣವಿದೆ.

'ಮಾಸ್ ಲೀಡರ್' ಟ್ರೈಲರ್ ನೋಡಿ ಎಂಜಾಯ್ ಮಾಡಿ...

English summary
Kannada Actor Shiva Rajkumar Starrer Kannada Movie 'Leader' Trailer Release. The Movie features Pranitha, Deepika Kamaiah, Vijay Raghavendra, Yogesh, and is Directed by Narasimha of 'Rose' fame. Watch the Trailer here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada