»   » ತಮಿಳು ಕಂದನಿಗೆ ಹೃದಯವನ್ನೇ ಎತ್ತಿ ಕೊಟ್ಟ ನಮ್ಮ ರಾಕಿಂಗ್ ಯಶ್

ತಮಿಳು ಕಂದನಿಗೆ ಹೃದಯವನ್ನೇ ಎತ್ತಿ ಕೊಟ್ಟ ನಮ್ಮ ರಾಕಿಂಗ್ ಯಶ್

Posted By:
Subscribe to Filmibeat Kannada

ತಮಿಳಿನ ಖ್ಯಾತ ನಟ ಚಿಯಾನ್ ವಿಕ್ರಂ ಅವರು 'ಸ್ಪಿರಿಟ್ ಆಫ್ ಚೆನ್ನೈ' ಎಂಬ ಆಲ್ಬಂ ಸಾಂಗ್ ಒಂದನ್ನು ಹೊರತಂದಿದ್ದು, ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ.

ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಪ್ರವಾಹದ ಬಗ್ಗೆ 'ಐ' ಖ್ಯಾತಿಯ ನಟ ಕಮ್ ನಿರ್ದೇಶಕ ಚಿಯಾನ್ ವಿಕ್ರಂ ಅವರು ತಾವೇ ನಿರ್ದೇಶನ ಮಾಡಿ ಸುಂದರವಾದ ವಿಡಿಯೋ ಒಂದನ್ನು ಹೊರತಂದಿದ್ದಾರೆ.[ಪವರ್ ಸ್ಟಾರ್ ಗೆ ಆಕ್ಷನ್-ಕಟ್ ಹೇಳ್ತಾರಂತೆ ತಮಿಳಿನ ವಿಕ್ರಂ]

Watch 'Spirit of Chennai', Humanity Universal Video Song

ಅಂದಹಾಗೆ ಈ ವಿಡಿಯೋ ಆಲ್ಬಂನ ವಿಶೇಷ ಏನಪ್ಪಾ ಅಂದ್ರೆ ಸ್ಯಾಂಡಲ್ ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್ ಸೇರಿದಂತೆ ಮಾಲಿವುಡ್ ನಿಂದ ಒಬ್ಬೊಬ್ಬ ಸ್ಟಾರ್ ನಟರನ್ನು ಚೆನ್ನೈಗೆ ಕರೆಸಿಕೊಂಡು ಈ ಹಾಡಿನಲ್ಲಿ ಸೇರಿಸಿಕೊಳ್ಳಲಾಗಿದೆ.

ಇಡೀ ಚಿತ್ರರಂಗದ ಸ್ಟಾರ್ ನಟ-ನಟಿಯರನ್ನು ಒಂದೇ ಫ್ರೇಮ್ ನಲ್ಲಿ ಸೇರಿಸಿಕೊಂಡು ಮಾಡಿರುವ 'ಸ್ಪಿರಿಟ್ ಆಫ್ ಚೆನ್ನೈ' ವಿಡಿಯೋ ಆಲ್ಬಂ ನೋಡುಗರ ಮನಕಲಕುವಂತಿದೆ. ಮಾತ್ರವಲ್ಲದೇ 'ಏನಾದರೂ ಅವಘಡ ಸಂಭವಿಸಿದರೆ ಮಾತ್ರ ನಾವೆಲ್ಲಾ ಒಂದಾಗಬೇಕಾ? ಇಲ್ಲದಿದ್ದಲ್ಲಿ ಒಂದಾಗಬಾರದೇ?, ಎಂಬ ಸಂದೇಶ ಇರುವ ಈ ವಿಡಿಯೋ ಖಂಡಿತ ಎಲ್ಲರಿಗೂ ಇಷ್ಟವಾಗುತ್ತದೆ. ಈ ಸುಂದರ ವಿಡಿಯೋ ನೀವು ನೋಡಿ..

ಈ ಜಾಗೃತಿ ಮೂಡಿಸುವ ವಿಡಿಯೋ ಸಾಂಗ್ ನಲ್ಲಿ ನಮ್ಮ ಕನ್ನಡ ಚಿತ್ರರಂಗ ಕ್ಷೇತ್ರದ ಸ್ಟಾರ್ ನಟ ರಾಕಿಂಗ್ ಸ್ಟಾರ್ ಯಶ್ ಅವರು ಪಾಲ್ಗೊಂಡಿದ್ದಾರೆ. ಅಲ್ಲದೇ ಮಲಯಾಳಂ ನಟರಾದ ನಿವಿನ್ ಪೌಲ್, ಪೃಥ್ವಿ ರಾಜ್, ಬಾಲಿವುಡ್ ನಟ ಅಭಿಷೇಕ್ ಬಚ್ಚನ್, ತಮಿಳು ಚಿತ್ರರಂಗದ ಸ್ಟಾರ್ ಗಳು ಭಾಗವಹಿಸಿದ್ದಾರೆ.

ಎಸ್.ಪಿ ಬಾಲಸುಬ್ರಮಣ್ಯಂ, ಶಂಕರ್ ಮಹದೇವನ್, ವಿಜಯ್ ಯೇಸುದಾಸ್ ಮುಂತಾದವರು ಈ ಹಾಡಿಗೆ ಧ್ವನಿಯಾಗಿದ್ದಾರೆ. ಆಲ್ಬಂ ವಿಡಿಯೋ ಸಾಂಗ್ ನ ಶೂಟಿಂಗ್ ಸ್ಟಿಲ್ಸ್ ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ...

ತಮಿಳು ಕಂದನಿಗೆ ಹೃದಯವನ್ನೇ ಎತ್ತಿ ಕೊಟ್ಟ ನಮ್ಮ ರಾಕಿಂಗ್ ಯಶ್

ತಮಿಳು ಕಂದನಿಗೆ ಹೃದಯವನ್ನೇ ಎತ್ತಿ ಕೊಟ್ಟ ನಮ್ಮ ರಾಕಿಂಗ್ ಯಶ್

-
-
-
-
-
-
-
-
-
-
-
-
-
-
-
-
-
-
-
-
-
-
-

English summary
Watch Tamil Video Song 'Spirit of Chennai', Humanity Universal directed by Tamil Actor Chiyaan Vikram.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X