»   » ಕಣ್ಣರಳಿಸುವ ರಾಜಮೌಳಿ 'ಬಾಹುಬಲಿ' ಮೊದಲ ಟೀಸರ್

ಕಣ್ಣರಳಿಸುವ ರಾಜಮೌಳಿ 'ಬಾಹುಬಲಿ' ಮೊದಲ ಟೀಸರ್

Posted By:
Subscribe to Filmibeat Kannada

ಟಾಲಿವುಡ್ ನಲ್ಲಿ ಮಾತ್ರ ಅಲ್ಲ, ಇಡೀ ಭಾರತದಲ್ಲಿ ಸಿಕ್ಕಾಪಟ್ಟೆ ಸದ್ದು-ಸುದ್ದಿ ಮಾಡುತ್ತಿರುವ ಚಿತ್ರ 'ಬಾಹುಬಲಿ'. ಎಸ್.ಎಸ್.ರಾಜಮೌಳಿ ನಿರ್ದೇಶನದ ಅದ್ದೂರಿಯಾಗಿ ರೆಡಿಯಾಗುತ್ತಿರುವ ಮೋಷನ್ ಕ್ಯಾಪ್ಚರ್ ಚಿತ್ರ 'ಬಾಹುಬಲಿ'.

ಇಲ್ಲಿಯವರೆಗೂ ಕೇವಲ ಪೋಸ್ಟರ್ ಮತ್ತು ಮೇಕಿಂಗ್ ನಿಂದ ಸೌಂಡ್ ಮಾಡಿದ್ದ 'ಬಾಹುಬಲಿ' ಚಿತ್ರದ ಮೊದಲ ಟೀಸರ್ ಇಂದು ಬಿಡುಗಡೆಯಾಗಿದೆ. ಎರಡು ಭಾಗಗಳಾಗಿ ರಿಲೀಸ್ ಆಗುತ್ತಿರುವ 'ಬಾಹುಬಲಿ' ಚಿತ್ರದ 'ದಿ ಬಿಗಿನ್ನಿಂಗ್' ಟೀಸರ್ ಇಲ್ಲಿದೆ. ನೋಡಿ, ಕಣ್ತುಂಬಿಕೊಳ್ಳಿ....

ಇದೀಗಷ್ಟೆ ಔಟ್ ಆಗಿರುವ 'ಬಾಹುಬಲಿ' ಟೀಸರ್ ನಲ್ಲಿ ನಾಯಕ ಪ್ರಭಾಸ್ ಮತ್ತು ಖಳನಾಯಕ ರಾಣಾ ಅಬ್ಬರಿಸಿದ್ದಾರೆ. ಯುದ್ಧ ಸನ್ನಿವೇಶ, ಕತ್ತಿ ವರಸೆ ಟೀಸರ್ ನ ಪ್ರಮುಖ ಆಕರ್ಷಣೆ. ವಾರಿಯರ್ ಸನ್ನಿವೇಶಕ್ಕೆ ಬರೋಬ್ಬರಿ 2000 ಜೂನಿಯರ್ ಆರ್ಟಿಸ್ಟ್ ಗಳನ್ನ ಬಳಸಿಕೊಂಡು ರಾಜಮೌಳಿ ಹೆಡ್ ಲೈನ್ಸ್ ಮಾಡಿದ್ದರು. ಆ ಸನ್ನಿವೇಶದ ಝಲಕ್ ಟೀಸರ್ ನಲ್ಲಿದೆ. ['ಬಾಹುಬಲಿ' ಚಿತ್ರದ ಅನುಷ್ಕಾ ಶೆಟ್ಟಿ ಫಸ್ಟ್ ಲುಕ್ ರಿಲೀಸ್]

baahubali

150 ಕೋಟಿ ರೂಪಾಯಿ ಬಜೆಟ್ ನಲ್ಲಿ ರೆಡಿಯಾಗುತ್ತಿರುವ 'ಬಾಹುಬಲಿ'ಯಲ್ಲಿ ನಾಯಕ ಪ್ರಭಾಸ್ ರದ್ದು ದ್ವಿಪಾತ್ರ. ಬಾಹುಬಲಿ ಮತ್ತು ಶಿವುಡು ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಳ್ಳುತ್ತಿದ್ದಾರೆ. ಬಾಹುಬಲಿಗೆ ಅನುಷ್ಕಾ ಶೆಟ್ಟಿ ಜೋಡಿಯಾದರೆ, ಶಿವುಡುಗೆ ತಮ್ಮನ್ನಾ ನಾಯಕಿ. ಆದ್ರೆ, ಇಬ್ಬರ ಸುಳಿವು ಈ ಟೀಸರ್ ನಲ್ಲಿ ಸಿಕ್ಕಿಲ್ಲ. [ಬಾಹುಬಲಿಯಲ್ಲಿ ಅಸ್ಲಂ ಖಾನ್ ಆಗಿ 'ಕಿಚ್ಚ' ಸುದೀಪ್]

ಇನ್ನೂ ಅಸ್ಲಾಂ ಖಾನ್ ಪಾತ್ರದಲ್ಲಿ ಕಿಚ್ಚ ಸುದೀಪ್ ಇದ್ದಾರೆ. ಅವರ ಕಿಚ್ಚು ಇನ್ನೂ ಸಸ್ಪೆನ್ಸ್ ನಲ್ಲಿದೆ. ಇಂದು ಟೀಸರ್ ರಿಲೀಸ್ ಆಗಿದ್ದು, ಜೂನ್ 1, ಬೆಳ್ಳಗ್ಗೆ 10.30ಕ್ಕೆ ಸರಿಯಾಗಿ 'ಬಾಹುಬಲಿ' ಟ್ರೈಲರ್ ಬಿಡುಗಡೆ ಆಗಲಿದೆ.

English summary
SS Rajamouli directorial 'Baahubali The Beginning's first ever teaser is finally out. Baahubali features Prabhas, Rana Daggubati, Anushka Shetty and Tamannaah in the lead roles. Watch the teaser here.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada