»   » ಟ್ರೈಲರ್: ಅಭಿಮಾನಿಗಳ ಕುತೂಹಲಕ್ಕೆ ಕಿಚ್ಚು ಹಚ್ಚಿದ ಕಿಚ್ಚ

ಟ್ರೈಲರ್: ಅಭಿಮಾನಿಗಳ ಕುತೂಹಲಕ್ಕೆ ಕಿಚ್ಚು ಹಚ್ಚಿದ ಕಿಚ್ಚ

Posted By:
Subscribe to Filmibeat Kannada

ಸುದೀಪ್ ಮತ್ತು ನಿತ್ಯಾ ಮೆನನ್ ಅವರು ಇದೇ ಮೊದಲ ಬಾರಿಗೆ ಒಂದಾಗಿ ಕಾಣಿಸಿಕೊಂಡಿರುವ ಈ ವರ್ಷದ ಬಹುನಿರೀಕ್ಷಿತ ಸಿನಿಮಾ 'ಕೋಟಿಗೊಬ್ಬ 2' ತೆರೆಗೆ ಅಪ್ಪಳಿಸಲು ತಯಾರಾಗಿ ನಿಂತಿದೆ.

ಅಂದಹಾಗೆ ಮೊನ್ನೆ-ಮೊನ್ನೆ 'ಕೋಟಿಗೊಬ್ಬ 2' ಚಿತ್ರದ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಅದರಲ್ಲಿ ಸುದೀಪ್ ಅವರ ನಟನೆ, ಸ್ಟೈಲಿಷ್ ಲುಕ್, ಖಡಕ್ ಖದರ್ ನೋಡಿದ್ದ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದರು.[ಟೀಸರ್: ವ್ಹಾ.! ನಮ್ ಕಿಚ್ಚ ಅವ್ರುದ್ದು ಅದೇನ್ ಸ್ಟೈಲ್ ಅಂತೀರಾ]


Watch Tamil Movie 'Mudinja Ivana Pudi' Official Trailer

ಆದರೆ ಇದೀಗ ಅದನ್ನು ಮೀರಿಸುವಂತೆ ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ಸದ್ಯಕ್ಕೆ ತಮಿಳು ವರ್ಷನ್ 'ಮುಡಿಂಜ ಇವನ ಪುಡಿ' ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು, ಸಾಕಷ್ಟು ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ.


ಬುಧವಾರ (ಜುಲೈ 20) ದಂದು ಚೆನ್ನೈನಲ್ಲಿ 'ಮುಡಿಂಜ ಇವನ ಪುಡಿ' ಚಿತ್ರದ ಆಡಿಯೋ ಮತ್ತು ಟ್ರೈಲರ್ ಬಿಡುಗಡೆ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ.[ಸುದೀಪ್ ಅಸಾಧಾರಣ ಸಾಧನೆಗೆ ನನ್ನದೊಂದು ಸೆಲ್ಯೂಟ್ ಎಂದವರಾರು.?]


Watch Tamil Movie 'Mudinja Ivana Pudi' Official Trailer

ಈ ಸಮಾರಂಭದಲ್ಲಿ ಖ್ಯಾತ ತಮಿಳು ನಟ ಕಮ್ ನಿರ್ಮಾಪಕ ಧನುಷ್, ತಮಿಳು ನಟ ವಿಜಯ್ ಸೇತುಪತಿ, ಕಾಲಿವುಡ್ ಕಾಮಿಡಿ ನಟ ಶಿವಕಾರ್ತಿಕೇಯನ್, ಖ್ಯಾತ ನಿರ್ದೇಶಕ ಪಿ.ವಾಸು, ಸೇರಿದಂತೆ ಹಲವಾರು ಗಣ್ಯಾತೀ ಗಣ್ಯರು ಪಾಲ್ಗೊಂಡಿದ್ದರು.


ಇನ್ನು ತಮಿಳು ವರ್ಷನ್ ಟ್ರೈಲರ್ ನೋಡುತ್ತಿದ್ದರೆ, ಸಾಕಷ್ಟು ಕುತೂಹಲ ಮೂಡುತ್ತಿದ್ದು, ಅಭಿಮಾನಿಗಳಿಗೆ ಸುದೀಪ್ ಭರ್ಜರಿ ಮನರಂಜನೆ ನೀಡಿದ್ದಾರೆ. ಈ ಬಾರಿ ಸುದೀಪ್ ಅವರ ಒಂದೊಂದು ಡೈಲಾಗ್ ಗಳಿಗೂ ವಿಶಲ್, ಚಪ್ಪಾಳೆ ಬೀಳೋದು ಗ್ಯಾರೆಂಟಿ.[ಆಗಸ್ಟ್ ನಲ್ಲಿ 'ಕೋಟಿಗೊಬ್ಬ'ನ ದರ್ಬಾರ್ ಶುರುವಾಗುತ್ತಾ.?]


Watch Tamil Movie 'Mudinja Ivana Pudi' Official Trailer

"ಇವಳ ನಾಲ್ ಚಿನ್ನ ಚಿನ್ನದ ಅಡಿಕ್ಕಂ ಪೋದು, ಏ ಕೂಡವೇ ಇರ್ಂದ್, ಪೆರಿಸ್ಸಾ ಅಡಿಚ್ಚ ಒಡನೆ, ಪಿರಿಚ್ಚ್ ಟ್ಟ್ ಪೋಯಿ, ಹ್ಯಾಪಿಯಾ ಇರ್ ಕ್ಕ್ ಲಾ ತೋನುದ್ ಪಾರ್, ದಟ್ಸ್ ದ ಪವರ್ ಆಫ್ ಮನಿ" (ಇಷ್ಟು ದಿನ ಚಿಕ್ಕ-ಚಿಕ್ಕದಾಗಿ ಹೊಡಿಯುವಾಗ, ನನ್ನ ಜೊತೆಗೇ ಇದ್ದು, ದೊಡ್ಡದನ್ನು ಹೊಡೆದ ಕೂಡಲೇ, ಬೇರ್ಪಟ್ಟು ಸಂತೋಷವಾಗಿ ಇರೋಣ ಅಂತ ಅನ್ಸುತ್ತೆ ನೋಡು, ಅದು ಹಣದ ತಾಕತ್ತ್). ಅನ್ನೋ ಡೈಲಾಗ್ ಗಳು ಮತ್ತಷ್ಟು ಕುತೂಹಲ ಕೆರಳಿಸುತ್ತವೆ.


ರೋಮ್ಯಾಂಟಿಕ್, ಸಸ್ಪೆನ್ಸ್, ಫೈಟ್, ಕಾಮಿಡಿಯುಳ್ಳ, 'ಕೋಟಿಗೊಬ್ಬ 2' (ಮುಡಿಂಜ ಇವನ ಪುಡಿ) ಚಿತ್ರಕ್ಕೆ ನಿರ್ದೇಶಕ ಕೆ.ಎಸ್ ರವಿಕುಮಾರ್ ಆಕ್ಷನ್-ಕಟ್ ಹೇಳಿದ್ದು, ನಿರ್ಮಾಪಕ ಸೂರಪ್ಪ ಬಾಬು ಬಂಡವಾಳ ಹೂಡಿದ್ದಾರೆ.[ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಜುಲೈನಲ್ಲಿ ಡಬಲ್ ಧಮಾಕಾ]


Watch Tamil Movie 'Mudinja Ivana Pudi' Official Trailer

ನಿತ್ಯಾ ಮೆನನ್, ಪ್ರಕಾಶ್ ರಾಜ್, ಕಾಮಿಡಿ ನಟ ಸತೀಶ್, ರವಿಶಂಕರ್, ಶರತ್ ಲೋಹಿತಾಶ್ವ, ನೇಸರ್, ಚಿಕ್ಕಣ್ಣ, ಸಾಧು ಕೋಕಿಲಾ ಸೇರಿದಂತೆ ಹಲವು ಘಟಾನುಘಟಿಗಳು ಕಾಣಿಸಿಕೊಂಡಿರುವ 'ಕೋಟಿಗೊಬ್ಬ 2' ಸುದೀಪ್ ಗೆ ಬಿಗ್ ಬ್ರೇಕ್ ಕೊಡೋದು ಪಕ್ಕಾ ಅಂತ್ಹೆನಿಸುತ್ತಿದೆ.


ಚಿತ್ರ ಬಿಡುಗಡೆಗೆ ಇನ್ನೂ ಕೊಂಚ ಸಮಯ ಇದ್ದು, ಸದ್ಯಕ್ಕೆ ಬಿಡುಗಡೆ ಆಗಿರೋ ತಮಿಳು ವರ್ಷನ್ ಟ್ರೈಲರ್ ನೋಡ್ಕೊಂಡು ಬನ್ನಿ...


English summary
Watch Tamil Movie 'Mudinja Ivana Pudi' Official Trailer. Kannada Actor sudeep, Actress Nithya menen in the lead role. The movie is directed by KS Ravikumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada