»   » ಏಡ್ಸ್ ಬಗ್ಗೆ ಡಾ. ಸುದೀಪ್ ರಿಂದ ವಿಜಯ್ ಗೆ ಪಾಠ

ಏಡ್ಸ್ ಬಗ್ಗೆ ಡಾ. ಸುದೀಪ್ ರಿಂದ ವಿಜಯ್ ಗೆ ಪಾಠ

Posted By:
Subscribe to Filmibeat Kannada

ಎಚ್ ಐವಿ ಎಂದರೇನು? ಸೋಂಕು ಹರಡುವುದು ಹೇಗೆ? ಏಡ್ಸ್ ರೋಗದ ಬಗ್ಗೆ ಏನೆಲ್ಲ ತಪ್ಪು ತಿಳುವಳಿಕೆ ಇದೆ ಎಂಬುದರ ಬಗ್ಗೆ ಟೀಚ್ ಏಡ್ಸ್ ಸಂಸ್ಥೆ ಅನಿಮೇಟೆಡ್ ವಿಡಿಯೋಗಳ ಮೂಲಕ ಜನ ಜಾಗೃತಿ ಮೂಡಿಸುತ್ತಿದೆ. ಡಾಕ್ಟರ್ ಪಾತ್ರದಲ್ಲಿ ಕಿಚ್ಚ ಸುದೀಪ್ ಅವರು ಕಾಯಿಲೆ ಬಗ್ಗೆ ವಿಜಯ್ ರಾಘವೇಂದ್ರ ಅವರಿಗೆ ಪಾಠ ಹೇಳುತ್ತಾರೆ.

ಡಾಕ್ಟ್ರೇ ನಾನು ಎಚ್ ಐವಿ, ಏಡ್ಸ್ ಬಗ್ಗೆ ಕೇಳಿದ್ದೀನಿ ಆದರೆ, ನನಗೆ ಈ ಬಗ್ಗೆ ವಿವರಗಳು ಗೊತ್ತಿಲ್ಲ ಎಂದು ಪ್ರಶ್ನೆ ಕೇಳುವ ಮೂಲಕ ಶುರುವಾಗುವ ಅಧ್ಯಾಯ ಸುಮಾರು 12 ಅಧ್ಯಾಯದಲ್ಲಿರುವ ಈ ಪಾಠ ವೈದ್ಯರ ಭೇಟಿಯಿಂದ ಹಿಡಿದು ಎಚ್ ಐವಿ ಪರೀಕ್ಷಾ ಕೇಂದ್ರ, ಸಂರಕ್ಷಣೆ ಬಗ್ಗೆ ಸವಿವರವಾಗಿ ಅನಿಮೇಷನ್ ಮೂಲಕ ಹೇಳಲಾಗಿದೆ.

ಇದೇ ರೀತಿ ಅನಿಮೇಟೆಡ್ ಸರಣಿ ಎಲ್ಲಾ ಭಾಷೆಗಳಲ್ಲೂ ಮುಂದುವರೆದಿದೆ. ಕನ್ನಡದಲ್ಲಿ ಕಿಚ್ಚ ಸುದೀಪ್ ಹಾಗೂ ವಿಜಯ್ ರಾಘವೇಂದ್ರ ಜೋಡಿಯಲ್ಲದೆ ಸುಹಾಸಿನಿ ಹಾಗೂ ಅನು ಪ್ರಭಾಕರ್ ಅವರು ಕೂಡಾ ತಮ್ಮ ದನಿ ದಾನ ಮಾಡಿದ್ದಾರೆ.

ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ ಹಾಗೂ ನವೀನ್ ಅವರನ್ನು ಬಳಸಿಕೊಳ್ಳಲಾಗಿದೆ. ಜೊತೆಗೆ ಅನುಷ್ಕಾ ಶೆಟ್ಟಿ ಹಾಗೂ ಸ್ವಾತಿ ರೆಡ್ಡಿ ಅವರ ಅನಿಮೇಟೆಡ್ ಸರಣಿ ಕೂಡಾ ಯೂಟ್ಯೂಬ್ ನಲ್ಲಿದೆ.

TeachAIDS ambassador Sudeep

ಏನಿದು ಟೆಕ್ ಏಡ್ಸ್: ಟೆಕ್ ಏಡ್ಸ್((http://teachaids.org) ಸರ್ಕಾರೇತರ ಸಂಸ್ಥೆಯಾಗಿದ್ದು, ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದ ಯೋಜನೆಯಾಗಿದೆ. ಗ್ರಾಹಕಸ್ನೇಹಿ ಸಾಫ್ಟ್ ವೇರ್ ಮೂಲಕ ಎಚ್ ಐವಿ ಹಾಗೂ ಏಡ್ಸ್ ಬಗ್ಗೆ ಜಾಗೃತಿ ಮೂಡಿಸುತ್ತಿದೆ.

ವಿಶ್ವದ ಬಹುತೇಕ ಭಾಷೆಗಳಲ್ಲಿ ಈ ಅನಿಮೇಟೆಡ್ ಚಿತ್ರಸರಣಿ ಹೊರಬಂದಿದೆ.ಸುಮಾರು 70 ದೇಶಗಳಲ್ಲಿ ಈ ರೀತಿ ಜಾಗೃತಿ ಕಾರ್ಯಕ್ರಮಕ್ಕೆ ಸೆಲಿಬ್ರಿಟಿಗಳು ಕೈ ಜೋಡಿಸಿದ್ದಾರೆ.

ಕಿಚ್ಚ ಸುದೀಪ್ ಹಾಗೂ ವಿಜಯ್ ರಾಘವೇಂದ್ರಇರುವ ವಿಡಿಯೋ ನೋಡಿ


ಸುಹಾಸಿನಿ ಮಣಿರತ್ನಂ ಹಾಗೂ ಅನು ಪ್ರಭಾಕರ್ ಇರುವ ವಿಡಿಯೋ ನೋಡಿ
English summary
TeachAIDS ambassadors Sudeep and Vijay Raghavendra donated their voices and faces in the video version of the Kannada HIV animated software. TeachAIDS (http://teachaids.org) is a nonprofit social venture founded at Stanford University that creates breakthrough interactive software addressing numerous persistent problems in HIV and AIDS prevention around the world.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada