»   » ಮಂಗಳಮುಖಿಯರ ಕೈಗೆ ಸಿಕ್ಕಿ ನಲುಗಿದ 'ಕೃಷ್ಣ' ಅಜೇಯ್ ರಾವ್

ಮಂಗಳಮುಖಿಯರ ಕೈಗೆ ಸಿಕ್ಕಿ ನಲುಗಿದ 'ಕೃಷ್ಣ' ಅಜೇಯ್ ರಾವ್

Posted By:
Subscribe to Filmibeat Kannada

ಪ್ರೀತಿಯ ರಾಯಭಾರಿ 'ರೋಸ್' ಹಿಡಿದು ಕಳೆದ ವರ್ಷ ತೆರೆಮೇಲೆ ಬಂದ ಸ್ಯಾಂಡಲ್ ವುಡ್ 'ಕೃಷ್ಣ', 'ಜೈ ಭಜರಂಗ ಬಲಿ' ಅಂತ ಕೂಗಿ ಹೇಳಿದರೂ ಯಾರಿಗೂ ಕೇಳಿಸಲಿಲ್ಲ. ಹಾಗೆ, 2014ರಲ್ಲಿ ಒಂದು ಹಿಟ್, ಮತ್ತೊಂದು ಫ್ಲಾಪ್ ಕೊಟ್ಟ ಅಜೇಯ್ ರಾಜ್, ಇದೀಗ ಒಮ್ಮೆಲೆ ಎರಡೆರಡು ಚಿತ್ರಗಳ ಮೂಲಕ ಪರದೆ ಮೇಲೆ ಬರಲಿದ್ದಾರೆ.

ಅಜೇಯ್ ರಾವ್ ಹೋಮ್ ಪ್ರೊಡಕ್ಷನ್ ನಲ್ಲೇ ರೆಡಿಯಾಗಿರುವ 'ಕೃಷ್ಣ ಲೀಲಾ' ರಿಲೀಸ್ ಗೆ ಸಿದ್ದವಾಗಿದೆ. ಹೀಗಿರುವಾಗಲೇ, ಅಜೇಯ್ ನಟಿಸಿರುವ 'ಎ 2nd ಹ್ಯಾಂಡ್ ಲವ್ವರ್' ಚಿತ್ರದ ಟೀಸರ್ ಬಿಡುಗಡೆಯಾಗಿದೆ.


Kannada Movie A 2nd Hand Lover

ಹೇಳಿ ಕೇಳಿ ಚಿತ್ರದ ಹೆಸರೇ 'ಎ 2nd ಹ್ಯಾಂಡ್ ಲವ್ವರ್', ಅಂದ್ಮೇಲೆ ಪಾಪ...ಸೆಕೆಂಡ್ ಹ್ಯಾಂಡ್ ಲವ್ವರ್ ಅಜೇಯ್ ಗತಿ ಚಿತ್ರದಲ್ಲಿ ಏನಾಗಬೇಡ. ಒಂದು ಲವ್ ಫೇಲ್ ಆಗಿರುವ ತಪ್ಪಿಗೆ, ಅಜೇಯ್ ಪೊಲೀಸರಿಂದ ಒದೆ ತಿನ್ನಬೇಕು. ಕಸ ಗುಡಿಸಿ, ಮನೆ ಒರೆಸಬೇಕು. ಸಾಲದಕ್ಕೆ ಸೆಕೆಂಡ್ ಲವ್ವರ್ ಬಟ್ಟೆ ಬೇರೆ ಒಗೆಯಬೇಕು.


Kannada Movie A 2nd Hand Lover

ಇದೆಲ್ಲವನ್ನೂ ಕಷ್ಟಪಟ್ಟು ಮಾಡಿರುವ ಅಜೇಯ್, ಮಂಗಳಮುಖಿಯರ ಕೈಗೂ ಸಿಕ್ಕಿಬಿದ್ದು ನಲುಗಿ ಹೋಗಿದ್ದಾರೆ. ಇಂತಹ 'ಸೆಕೆಂಡ್ ಹ್ಯಾಂಡ್ ಲವ್ವರ್' ಫಜೀತಿಯನ್ನ ಫಸ್ಟ್ ಲುಕ್ ಟೀಸರ್ ಮೂಲಕ ಹೊರತಂದು ನಿರ್ದೇಶಕರು ಚಿತ್ರದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.


ಅಜೇಯ್ ರಾವ್ ಪರಿಸ್ಥಿತಿಯನ್ನ ನೋಡಿ ನಕ್ಕಿದ್ರೆ, ಇದೋ ಇಲ್ಲಿದೆ ಹಾರ್ಟ್ ಪಂಚರ್ ಆದವರಿಗೆ ಹೇಳಿ ಮಾಡಿಸಿರುವ ಹಾಡು. ನೋಡೋಕೆ ರಾಕ್ ಸ್ಟೈಲ್ ನಲ್ಲಿದ್ದರೂ, ಸಖತ್ ಫೀಲ್ ಕೊಟ್ಟು ಗುರುಕಿರಣ್ ಹಾಡಿರುವ ಹಾಡು ಮನ ಕಲುಕುವಂತಿದೆ. [ನಿರ್ಮಾಪಕ ಅಜೇಯ್ ರಾವ್ ಜೇಬು ಖಾಲಿ ಖಾಲಿ!]


Kannada Movie A 2nd Hand Lover

ಪ್ರೀತಿ ಮತ್ತು ನಂಬಿಕೆ ಸುತ್ತ ಸುತ್ತುವ 'ಎ 2nd ಹ್ಯಾಂಡ್ ಲವ್ವರ್' ಸಿನಿಮಾ ಪ್ರೇಮಿಗಳಿಗಾಗಿ ರೆಡಿಯಾಗಿರುವ ಸಿನಿಮಾ. ಅಜೇಯ್ ಗೆ ಇಲ್ಲಿ ಮೊದಲ ಬಾರಿ ಜೋಡಿಯಾಗಿರುವುದು ನಟಿ ಪ್ರಣೀತಾ. ಇನ್ನೂ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು ನಿರ್ದೇಶಕ ರಾಘವ ಲೋಕಿ. [ಅಜೇಯ್ ರಾವ್ ಗೆ ಎದುರಾಗಿದೆ ಆರ್ಥಿಕ ಸಂಕಷ್ಟ]


ಸದ್ದಿಲ್ಲದೇ ಚಿತ್ರೀಕರಣವನ್ನ ಪೂರ್ಣಗೊಳಿಸಿರುವ 'ಎ 2nd ಹ್ಯಾಂಡ್ ಲವ್ವರ್' ಚಿತ್ರದ ರಿಲೀಸ್ ಡೇಟ್ ನ ಇನ್ನೂ ಫೈನಲ್ ಆಗಿಲ್ಲ. ಈಗಷ್ಟೆ ಗುರುಕಿರಣ್ ಸಂಗೀತ ನಿರ್ದೇಶನದ ಹಾಡು ಬಿಡುಗಡೆ ಆಗಿದೆ. ಸ್ಯಾಂಡಲ್ ವುಡ್ ನಲ್ಲಿ 'ಕೃಷ್ಣಲೀಲಾ' ಕಮಾಲ್ ಮಾಡಿದ ನಂತ್ರ ಸೆಕೆಂಡ್ ಹ್ಯಾಂಡ್ ಲವ್ವರ್ ಪಡುವ ಪಾಡನ್ನ ನೀವು ನೋಡಬಹುದು. (ಫಿಲ್ಮಿಬೀಟ್ ಕನ್ನಡ)

English summary
Ajai Rao starrer A 2nd Hand Lover First look Teaser and a Song is out. Watch the videos here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada