»   » 'ಇದೊಳ್ಳೆ ರಾಮಾಯಣ' ಅಂತ ನೀವು ತಲೆ ಚಚ್ಚಿಕೊಳ್ಳುವ ಹಾಗಿಲ್ಲ.!

'ಇದೊಳ್ಳೆ ರಾಮಾಯಣ' ಅಂತ ನೀವು ತಲೆ ಚಚ್ಚಿಕೊಳ್ಳುವ ಹಾಗಿಲ್ಲ.!

Posted By:
Subscribe to Filmibeat Kannada

ಬಹು ಭಾಷೆಯಲ್ಲಿ ಮಿಂಚುತ್ತಿರುವ ಅಪ್ಪಟ ಕನ್ನಡದ ಮಣ್ಣಿನ ಮಗ ಪ್ರಕಾಶ್ ರಾಜ್ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ರೀಮೇಕ್ ವರ್ಷನ್ ಗೆ ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ ಎಂಬ ಸುದ್ದಿ ನೀವು ಕೇಳಿರಬಹುದು.

ಹಿಂದಿ ಮತ್ತು ಇತರೆ ಭಾಷೆಯಲ್ಲಿ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರ ಯಾವಾಗ ಸೆಟ್ಟೇರುತ್ತೋ, ಗೊತ್ತಿಲ್ಲ. ಆದ್ರೆ, ಪ್ರಕಾಶ್ ರಾಜ್ ನಿರ್ದೇಶನದಲ್ಲಿ ಕನ್ನಡ ಚಿತ್ರವೊಂದು ಸದ್ಯದಲ್ಲೇ ತೆರೆಗೆ ಬರಲಿದೆ.['ಇದೊಳ್ಳೆ ರಾಮಾಯಣ' ಆಯ್ತಲ್ಲ ಅಂದ್ರಂತೆ..! ಪ್ರಕಾಶ್ ರೈ]

ಚಿತ್ರ ನೋಡಿ 'ಇದೊಳ್ಳೆ ರಾಮಾಯಣ' ಅಂತ ನೀವು ಖಂಡಿತ ತಲೆ ಚಚ್ಚಿಕೊಳ್ಳುವುದಿಲ್ಲ. ಯಾಕಂದ್ರೆ, ಇದು ಪ್ರಕಾಶ್ ರಾಜ್ ಸಿನಿಮಾ.! ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಫೋಟೋ ಸ್ಲೈಡ್ ಕ್ಲಿಕ್ಕಿಸಿ.....

ಪ್ರಕಾಶ್ ರಾಜ್ ಹೊಸ ಸಿನಿಮಾ ಯಾವುದು.?

ಪ್ರತಿಭಾವಂತ ನಟ ಪ್ರಕಾಶ್ ರಾಜ್ ಆಕ್ಷನ್ ಕಟ್ ಹೇಳಿರುವ ಕನ್ನಡ ಚಿತ್ರದ ಹೆಸರೇ 'ಇದೊಳ್ಳೆ ರಾಮಾಯಣ'.!

ದ್ವಿಭಾಷೆಯಲ್ಲಿ ರೆಡಿ ಆಗಿರುವ ಚಿತ್ರ

ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ 'ಇದೊಳ್ಳೆ ರಾಮಾಯಣ' ಏಕಕಾಲಕ್ಕೆ ಸಿದ್ಧವಾಗಿದೆ. ತೆಲುಗಿನಲ್ಲಿ ಚಿತ್ರಕ್ಕೆ 'ಮನವೂರಿ ರಾಮಾಯಣಂ' ಅಂತ ಶೀರ್ಷಿಕೆ ಇಡಲಾಗಿದೆ.

ಮೇಕಿಂಗ್ ಝಲಕ್ ನೋಡಿ....

ರಂಗಭೂಮಿ ಬ್ಯಾಕ್ ಡ್ರಾಪ್ ನಲ್ಲಿ ಸಿದ್ಧವಾಗಿರುವ 'ಇದೊಳ್ಳೆ ರಾಮಾಯಣ' ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆ ಆಗಿದೆ. ನೋಡಲು ಈ ಲಿಂಕ್ ಕ್ಲಿಕ್ ಮಾಡಿ....

ಸದ್ದಿಲ್ಲದೇ ಚಿತ್ರೀಕರಣ ಕಂಪ್ಲೀಟ್

'ಇದೊಳ್ಳೆ ರಾಮಾಯಣ' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದ್ದು ಕಳೆದ ವರ್ಷ. ಅದಾದ ನಂತರ ಚಿತ್ರದ ಬಗ್ಗೆ ಸುದ್ದಿ ಇರ್ಲಿಲ್ಲ. ಈಗ ಇಡೀ ಚಿತ್ರವನ್ನ ಸಂಪೂರ್ಣಗೊಳಿಸಿ, ಪ್ರಮೋಷನ್ ಕೆಲಸದಲ್ಲಿ ತೊಡಗಿದ್ದಾರೆ ಪ್ರಕಾಶ್ ರಾಜ್. 'ಇದೊಳ್ಳೆ ರಾಮಾಯಣ' ಚಿತ್ರದ ಮತ್ತೊಂದು ಮೇಕಿಂಗ್ ಝಲಕ್ ಇಲ್ಲಿದೆ ನೋಡಿ....

ಪ್ರಕಾಶ್ ರಾಜ್ ನಿರ್ಮಿಸಿರುವ ಚಿತ್ರ ಇದು

ತಮ್ಮ ಸ್ವಂತ ಬ್ಯಾನರ್ 'ಪ್ರಕಾಶ್ ರಾಜ್ ಪ್ರೊಡಕ್ಷನ್ಸ್' ಅಡಿಯಲ್ಲಿ 'ಇದೊಳ್ಳೆ ರಾಮಾಯಣ' ಸಿದ್ಧವಾಗಿದೆ.

ಇಳಯರಾಜ ಸಂಗೀತ

'ಇದೊಳ್ಳೆ ರಾಮಾಯಣ' ಚಿತ್ರಕ್ಕೆ ಮ್ಯೂಸಿಕ್ ಮಾಂತ್ರಿಕ ಇಳಯರಾಜ ಸಂಗೀತ ನೀಡಿದ್ದಾರೆ.

ಮುಂದಿನ ತಿಂಗಳು ತೆರೆಗೆ

ಸೆನ್ಸಾರ್ ಅಂಗಳಕ್ಕೆ ಸದ್ಯದಲ್ಲೇ ಕಾಲಿಡಲಿರುವ 'ಇದೊಳ್ಳೆ ರಾಮಾಯಣ' ಚಿತ್ರ ಸೆಪ್ಟೆಂಬರ್ ನಲ್ಲಿ ಬಿಡುಗಡೆ ಆಗಲಿದೆ.

English summary
Kannada Actor Prakash Raj directorial Bi-lingual film 'Idolle Ramayana' making video is making rounds in Social media platform. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada