For Quick Alerts
  ALLOW NOTIFICATIONS  
  For Daily Alerts

  ಸಸ್ಪೆನ್ಸ್ ಥ್ರಿಲ್ಲರ್ 'ಜ್ವಲಂತಂ' ಚಿತ್ರದ ಈ ಹಾಡು ಕೇಳಿದ್ದೀರಾ?

  By Suneetha
  |

  ಗಾಂಧಿನಗರದಲ್ಲಿ ಇದೀಗ ಹೊಸಬರಿಗೆ ಪರ್ವ ಕಾಲ, ಅದ್ಯಾವಾಗ 'ರಂಗಿತರಂಗ' ಹಿಟ್ ಆಯ್ತೋ ಆ ನಂತರ ಬಂದ ಹೊಸಬರ ಬಹುತೇಕ ಚಿತ್ರಗಳು ಬಾಕ್ಸಾಫೀಸ್ ನಲ್ಲಿ ಒಳ್ಳೆ ಕಲೆಕ್ಷನ್ ಮಾಡುವ ಮೂಲಕ ಎಲ್ಲರನ್ನು ತಮ್ಮತ್ತ ನೋಡುವಂತೆ ಮಾಡಿವೆ.

  ಇದೀಗ ಆ ಸಾಲಿಗೆ ಮತ್ತೊಂದು ಹೊಸ ಸೇರ್ಪಡೆ ಹೊಸಬ್ಬರ 'ಜ್ವಲಂತಂ', ನವ ನಿರ್ದೇಶಕ ಅಂಬರೀಶ ಬಿ.ಎಂ ಆಕ್ಷನ್-ಕಟ್ ಹೇಳಿರುವ 'ಜ್ವಲಂತಂ' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ.

  ಅಂದಹಾಗೆ ನಟನೆ-ನಿರ್ದೇಶನ ಸಂಗೀತ ನಿರ್ದೇಶನ ಸೇರಿದಂತೆ ಎಲ್ಲಾ ಕೆಲಸಗಳನ್ನು ಹೊಸಬರೇ ಸೇರಿಕೊಂಡು ಮಾಡಿರುವ 'ಜ್ವಲಂತಂ' ಚಿತ್ರದಲ್ಲಿ ಇನ್ನೊಂದು ವಿಶೇಷವಿದೆ. ಅದೇನಪ್ಪಾ ಅಂದ್ರೆ, ಚಿತ್ರತಂಡ ತಮಿಳಿನ ಖ್ಯಾತ ಸಂಗೀತ ನಿರ್ದೇಶಕ 'ಕೊಲವೆರಿಡಿ' ಖ್ಯಾತಿಯ ಅನಿರುದ್ಧ್ ರವಿಚಂದರ್ ಅವರನ್ನು ಸ್ಯಾಂಡಲ್ ವುಡ್ ಗೆ ಕರೆಸಿಕೊಂಡು ಸಿನಿಮಾ ಹೀರೋ ಜ್ವಾಲಾ ಅವರು ಸಖತ್ ಸ್ಟೆಪ್ ಹಾಕಿರೋ ಟಮಟೆ ಹಾಡನ್ನು ಹಾಡಿಸಿದ್ದಾರೆ.['ಕೊಲವೆರಿಡಿ' ಸಂಗೀತ ನಿರ್ದೇಶಕನ, ಕನ್ನಡ ಹಾಡು ಬಿಡುಗಡೆ]

  ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಕಾಲಿರಿಸಿದ ಕಾಲಿವುಡ್ ನ ಫೇಮಸ್ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರು ಟಮಟೆ ಹಾಡಿಗೆ ಧ್ವನಿಯಾಗಿದ್ದು, ಆ ಹಾಡು ಇಲ್ಲಿದೆ ನೋಡಿ..

  ಇನ್ನು ಚಿತ್ರದ ಟೀಸರ್ ನೋಡುತ್ತಿದ್ದರೆ ಚಿತ್ರದ ಕಥೆ ಯಾವ ರೀತಿ ಇರಬಹುದು ಅಂತ ವೀಕ್ಷಕರು ಊಹಿಸಿಕೊಳ್ಳಲು ಸಾಧ್ಯವಾಗದಂತೆ ಸಿನಿಮಾ ಮಾಡಿರುವುದು ನೋಡಿದರೆ ಭಂಡಾರಿ ಸಹೋದರರ 'ರಂಗಿತರಂಗ' ಕಮಾಲ್ ಮಾಡಿದಂತೆ ಡಿಫರೆಂಟ್ ಹೆಸರಿಟ್ಟುಕೊಂಡ 'ಜ್ವಲಂತಂ', ಕಮಾಲ್ ಮಾಡುತ್ತ ನೋಡಬೇಕು.[ಸ್ಯಾಂಡಲ್ ವುಡ್ಡಿಗೆ 'ಕೊಲವೆರಿಡಿ' ಸಂಗೀತ ನಿರ್ದೇಶಕ]

  ಹೊಸ ಪ್ರತಿಭೆ ನಾಯಕ ಜ್ವಾಲಾ, ದೀಪ್ತಿ ಹಾಗು ದೀಪಾ ಗೌಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನಾಧರಿಸಿದ 'ಜ್ವಲಂತಂ' ಚಿತ್ರದ ಟೀಸರ್ ಇಲ್ಲಿದೆ ನೋಡಿ.

  English summary
  Watch the Making Of Tamate Tamate Song sung by Anirudh Ravichander from Jwalantham, starring Jwala, Deepti Kapse, Deepa Gowda, Achuta Rao, Krishna Adiga, Yeshwanth Shetty, Pavan, Chethan Poojary. The movie is directed by Ambarish BM.
  Monday, October 19, 2015, 17:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X