»   » ವೈಯುಕ್ತಿಕ ಜೀವನದ ಬಗ್ಗೆ ಕಿಚ್ಚ ಸುದೀಪ್ ಬಾಯ್ಬಿಟ್ಟ ಸತ್ಯ

ವೈಯುಕ್ತಿಕ ಜೀವನದ ಬಗ್ಗೆ ಕಿಚ್ಚ ಸುದೀಪ್ ಬಾಯ್ಬಿಟ್ಟ ಸತ್ಯ

By: ಹರಾ
Subscribe to Filmibeat Kannada

ಅಭಿಮಾನಿಗಳ ಪ್ರೀತಿಯ 'ನಲ್ಲ'ನ ದಾಂಪತ್ಯದಲ್ಲಿ ಬಿರುಕು ಉಂಟಾಗಿರುವ ಪರಿಣಾಮ, ವಿವಾಹ ವಿಚ್ಛೇದನಕ್ಕಾಗಿ ಸುದೀಪ್ ಮತ್ತು ಪತ್ನಿ ಪ್ರಿಯಾ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲಿ ಮತ್ತು ಟ್ವಿಟ್ಟರ್ ನಲ್ಲಿ ಕಿಚ್ಚ ಸುದೀಪ್ ತಮ್ಮ ಮನದಾಳವನ್ನು ಬಿಚ್ಚಿಟ್ಟಿದ್ದರು. ''ಇದು ಚಿಕ್ಕ ವಿಷಯ, ಆದಷ್ಟು ಬೇಗ ಎಲ್ಲವೂ ಸರಿಹೋಗಲಿದೆ'' ಅಂತ ಆಶಾವಾದ ವ್ಯಕ್ತಪಡಿಸಿದ್ದರು. [ಟ್ವಿಟ್ಟರ್ ನಲ್ಲಿ ಮನದಾಳ ಬಿಚ್ಚಿಟ್ಟ ಕಿಚ್ಚ ಸುದೀಪ್.!]

ಈ ಕಹಿ ಘಟನೆ ನಡೆಯುವುದಕ್ಕೂ ಮುನ್ನ ಕಿಚ್ಚ ಸುದೀಪ್ ವಿಶೇಷ ಸಂದರ್ಶನವೊಂದನ್ನ ನೀಡಿದ್ದರು. ಅದು ಪತ್ರಕರ್ತ, ನಿರ್ದೇಶಕ ಕಮ್ ಸುದೀಪ್ ಆತ್ಮೀಯ ಗೆಳೆಯ ಇಂದ್ರಜಿತ್ ಲಂಕೇಶ್ ರವರಿಗೆ. [ಕನ್ನಡ ಥಳಕು ಬಳುಕಿನ ಲೋಕದಲ್ಲಿ ದಾಂಪತ್ಯದ ಹುಳುಕು]

'ಲವ್ ಯು ಆಲಿಯ' ಚಿತ್ರದ ಸ್ಪೆಷಲ್ ಚಾಟ್ ಶೋ ಸನ್ನಿವೇಶಕ್ಕಾಗಿ ಇಂದ್ರಜಿತ್ ಲಂಕೇಶ್, ಸುದೀಪ್ ರವರನ್ನ ಸಂದರ್ಶಿಸಿದ್ದರು. ಸಿನಿಮಾ ಚಿತ್ರೀಕರಣ ಅಂದ್ಮೇಲೆ ಎಲ್ಲವೂ ಬರೀ ಡೈಲಾಗ್ಸ್ ಅಷ್ಟೇ ಅಂತಲೇ ಎಲ್ಲರ ಭಾವನೆ. ಆದ್ರೆ, ಈ ಇಂಟರ್ವ್ಯೂನಲ್ಲಿ ಸುದೀಪ್ ಹೇಳಿರುವುದೆಲ್ಲಾ ಅವರ ಮನದಾಳ.

ಸಂದರ್ಶನದಲ್ಲಿ ಮಗಳು ಸಾನ್ವಿ, ಪತ್ನಿ ಪ್ರಿಯಾ ಬಗ್ಗೆ ಮನಬಿಚ್ಚಿ ಮಾತನಾಡಿರುವ ಸುದೀಪ್ ''ನಾನು ಈವರೆಗೂ ಒಳ್ಳೆಯ ತಂದೆ, ಒಳ್ಳೆಯ ಪತಿ ಆಗಿಲ್ಲ. ಆಗುವುದಕ್ಕೆ ಪ್ರಯತ್ನ ಪಡುತ್ತಿದ್ದೇನೆ'' ಅಂತ ಹೇಳಿದ್ದಾರೆ. ಮುಂದೆ ಓದಿ.....

'ಲವ್ ಯು ಆಲಿಯ' ಚಿತ್ರಕ್ಕಾಗಿ ಫ್ರೀ ಕಾಲ್ ಶೀಟ್.!

'ಲವ್ ಯು ಆಲಿಯ' ಚಿತ್ರದಲ್ಲಿ ಸುದೀಪ್ 'ಸೆಲೆಬ್ರಿಟಿ ಸುದೀಪ್' ಆಗೇ ಕಾಣಿಸಿಕೊಂಡಿದ್ದಾರೆ. ಸುದೀಪ್ ಇಲ್ಲಿ ಸುದೀಪ್ ಆಗಿರುವುದರಿಂದ ಅವರ ಭಾವನೆಗಳನ್ನೇ ಹಂಚಿಕೊಂಡಿದ್ದಾರೆ ಹೊರತು ಅವರಿಗೆ ಯಾರೂ ಡೈಲಾಗ್ಸ್ ಬರೆದು ಕೊಟ್ಟಿಲ್ಲ. ಪ್ರೀತಿ, ಮದುವೆ, ವಿಚ್ಛೇದನ, ಅಪ್ಪ-ಮಗಳ ಸಂಬಂಧದ ಮೌಲ್ಯಗಳ ಬಗ್ಗೆ ಸಂದೇಶ ಸಾರುವ ಸಿನಿಮಾ 'ಲವ್ ಯು ಅಲಿಯ'. ಇದಕ್ಕೆ ಪೂರಕವಾಗಿ ಲಿವಿಂಗ್ ಎಕ್ಸಾಂಪಲ್ ಒಬ್ಬರಿಂದ ಕೂಡ ಸಂದೇಶ ನೀಡಬೇಕು ಅನ್ನುವ ಕಾರಣಕ್ಕೆ ಇಂದ್ರಜಿತ್ ಲಂಕೇಶ್, ಚಾಟ್ ಶೋ ಸನ್ನಿವೇಶವನ್ನ ಬಳಸಿಕೊಂಡು ಅದರಲ್ಲಿ ಸುದೀಪ್ ರನ್ನ ಇಂಟರ್ವ್ಯೂ ಮಾಡಿದ್ರು. ಅದರಲ್ಲಿ ಸುದೀಪ್ ಏನು ಹೇಳಿದ್ದಾರೆ ಅಂತ ತಿಳಿದುಕೊಳ್ಳುವುದಕ್ಕೆ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

['ಲವ್ ಯು ಆಲಿಯ'ಗೆ ಸುದೀಪ್ ಉಚಿತ ಕಾಲ್ ಶೀಟ್]

ಮಗಳು ಸಾನ್ವಿ ಅಂದ್ರೆ ಸುದೀಪ್ ಗೆ ಪ್ರಾಣ

ಕಿಚ್ಚ ಸುದೀಪ್ ಗೆ ಸಾನ್ವಿ ಅನ್ನುವ ಮುದ್ದಾದ ಮಗಳಿದ್ದಾಳೆ. ಸಾನ್ವಿ ಜೊತೆ ಸುದೀಪ್ ಅನುಬಂಧ ಹೇಗಿದೆ? ಬಿಜಿ ಶೆಡ್ಯೂಲ್ ನಲ್ಲಿ ಸುದೀಪ್ ಕುಟುಂಬಕ್ಕಾಗಿ ಸಮಯ ಮಾಡಿಕೊಳ್ಳುತ್ತಾರಾ? ಪತ್ನಿ ಪ್ರಿಯಾ ಅವರ ಸಪೋರ್ಟ್ ಹೇಗಿದೆ ಅನ್ನುವ ಬಗ್ಗೆ ಸುದೀಪ್ ಬಾಯ್ಬಿಟ್ಟಿದ್ದಾರೆ. ವೈಯುಕ್ತಿಕ ಬದುಕಿನ ಬಗ್ಗೆ ಸುದೀಪ್ ಹೇಳಿರುವ ಸತ್ಯ ಸಂಗತಿಯನ್ನ ತಿಳಿದುಕೊಳ್ಳುವುದಕ್ಕೆ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

ನನಗೆ ಕುಟುಂಬವೇ ಸ್ಪೂರ್ತಿ

''ನನ್ನ ಫ್ಯಾಮಿಲಿಯಲ್ಲಿ ಲೇಡೀಸ್ ಜಾಸ್ತಿ. ಎಲ್ಲರಿಂದ ನಾನು ಸ್ಪೂರ್ತಿ ಪಡೆದಿದ್ದೇನೆ. ಇಂಜಿನಿಯರಿಂಗ್ ನಿಂದ ಸಿನಿಮಾಗೆ ಬರುವುದಕ್ಕೆ ಎಲ್ಲರೂ ಸಪೋರ್ಟ್ ಮಾಡಿದ್ದಾರೆ. ನನ್ನ ಕೆರಿಯರ್ ಸ್ಟಾರ್ಟ್ ಆದಾಗ ಡೌನ್ ಫಾಲ್ ನೋಡಿದ್ದೇ ಜಾಸ್ತಿ. ಆಗ ಎಲ್ಲರೂ ಮಾಡು ಅಂತ ಸಪೋರ್ಟ್ ಮಾಡಿದ್ರು.'' - ಸುದೀಪ್

ಕುಟುಂಬಕ್ಕಾಗಿ ಸಮಯ ಮಾಡಿಕೊಳ್ಳುತ್ತೇನೆ

''ನನ್ನ ಕುಟುಂಬಕ್ಕಾಗಿ ನಾನು ಸಮಯ ಮಾಡಿಕೊಳ್ತೀನಿ. 'ಬಿಗ್ ಬಾಸ್', 'ಸಿಸಿಎಲ್', 'ಕೆಪಿಎಲ್' ಎಲ್ಲವೂ ನಾನು ಇಷ್ಟ ಪಟ್ಟು ಮಾಡ್ತಿರೋದು. ಏನೇ ಇದ್ದರೂ ಫ್ಯಾಮಿಲಿನೇ ಫಸ್ಟ್ ಪ್ರೈಯಾರಿಟಿ ನನಗೆ.'' - ಸುದೀಪ್ [ಕಿಚ್ಚನ ದಾಂಪತ್ಯದಲ್ಲಿ ಕಿಚ್ಚು : ಸುದೀಪ್ ಹೇಳಿದ್ದೇನು?]

ಜನರಿಂದ...ಜನರಿಗಾಗಿ...

''ಸಿನಿಮಾ ಅಂತ ಬಂದ್ರೆ ಜನರು. ಕನ್ನಡ ಇಂಡಸ್ಟ್ರಿಯಲ್ಲಿ ನಾನು ಏನಾದರೂ ಗಳಿಸಿದ್ದೇನೆ ಅಂದ್ರೆ ಅದು ಜನರು. ಜನರಿಗೆ ನಾನು ಯಾವತ್ತೂ ಚಿರಋಣಿ. ಸಮಾಜದಲ್ಲಿ ಏನೇ ಸಮಸ್ಯೆ ಇದ್ದರೂ ನಾನು ತಕ್ಷಣ ಸ್ಪಂದಿಸುವುದು ಇದೇ ಕಾರಣಕ್ಕೆ.'' - ಸುದೀಪ್

ಒಳ್ಳೆ ತಂದೆ, ಒಳ್ಳೆ ಪತಿ ಆಗಲು ಪ್ರಯತ್ನ ಪಡುತ್ತಿದ್ದೇನೆ.!

''ಐ ಆಮ್ ಟ್ರೈಯಿಂಗ್ ಟು ಬಿ ಎ ಬೆಟರ್ ಫಾದರ್ ನೌ. ನಾನು ಹಸ್ಬೆಂಡ್ ಆಗಿ ಹಂಡ್ರೆಡ್ ಪರ್ಸೆಂಟ್ ಫುಲ್ ಫಿಲ್ ಮಾಡುವುದಕ್ಕಾಗಿಲ್ಲ. ಆಸ್ ಎ ಫಾದರ್ ಕೂಡ ನಾನು ಫುಲ್ ಫಿಲ್ ಮಾಡುವುದಕ್ಕೆ ಆಗಿಲ್ಲ. ನನ್ನ ವೃತ್ತಿಯಿಂದ ಹಾಗಾಗಿರಬಹುದು. ನನ್ನ ಮಗಳನ್ನ ಮದುವೆ ಆಗುವವರು ನನಗಿಂತ ಬೆಟರ್ ಆಗಿರಬೇಕು.'' - ಸುದೀಪ್

ನಾನು ಉತ್ತಮ ತಂದೆ ಅಲ್ಲ, ಉತ್ತಮ ಪತಿ ಅಲ್ಲ..!

''ನಿಜ ಹೇಳ್ತೀನಿ. ನಾನು ಬೆಟರ್ ಫಾದರ್ ಅಲ್ಲ, ಬೆಟರ್ ಹಸ್ಬೆಂಡ್ ಕೂಡ ಅಲ್ಲ. ಅದಾಗುವುದಕ್ಕೆ ಈಗ ಪ್ರಯತ್ನ ಪಡುತ್ತಿದ್ದೇನೆ. ಇಲ್ಲಿವರೆಗೂ ಆಗಿಲ್ಲ. ನನಗೆ ಗೊತ್ತಿರುವ ಹಾಗೆ ಸೈನ್ಸ್ ರಾಂಗ್ ಇದೆ. ಹಾಗಿದ್ಮೇಲೆ ನಾನು ಮನುಷ್ಯ. ನಾನು ತುಂಬಾ ಕಡೆ ತಪ್ಪು ಮಾಡಿದ್ದೇನೆ. ತಿದ್ದಿಕೊಳ್ಳುವುದಕ್ಕೆ ಟ್ರೈ ಮಾಡ್ತಿದ್ದೇನೆ.'' - ಸುದೀಪ್ [14 ವರ್ಷದ ಸುದೀಪ್ ದಾಂಪತ್ಯ ಜೀವನದಲ್ಲಿ ಬಿರುಗಾಳಿ: ಡೈವೋರ್ಸ್!]

ಸಂದರ್ಶನದ ವಿಡಿಯೋ ನೋಡಿ....

ಮಗಳು ಸಾನ್ವಿ, ಆಕೆಯ ಭವಿಷ್ಯದ ಬಗ್ಗೆ ಕೂಡ ಸುದೀಪ್ ಸಾಕಷ್ಟು ಮಾತನಾಡಿದ್ದಾರೆ. ಅಲ್ಲದೇ, ಪತ್ನಿ ಪ್ರಿಯರನ್ನ ಸುದೀಪ್ ಹೊಗಳಿದ್ದಾರೆ. 'ಲವ್ ಯು ಆಲಿಯ' ಚಿತ್ರಕ್ಕಾಗಿ ಇಂದ್ರಜಿತ್ ಲಂಕೇಶ್ ನಡೆಸಿರುವ ಸುದೀಪ್ ಸಂದರ್ಶನದ ಕಂಪ್ಲೀಟ್ ವಿಡಿಯೋ ಇಲ್ಲಿದೆ ನೋಡಿ...

English summary
Kannada Actor Kiccha Sudeep has spoken his heart out in an interview with Kannada Director Indrajith Lankesh for the movie 'Love You Alia'. Watch the video here.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada