For Quick Alerts
  ALLOW NOTIFICATIONS  
  For Daily Alerts

  ಏಯ್, ನೀನೊಬ್ನೆನಾ ಕುಡಿಯೋದು, ನಿನಗಿಂತ ಜಾಸ್ತಿ ಕುಡಿತೀವಿ!

  By ಸೋನು ಗೌಡ
  |

  ಸಾಮಾನ್ಯವಾಗಿ ಸೆಲೆಬ್ರಿಟಿಗಳಿಗೆ ಅವರ ಅಭಿಮಾನಿಗಳು ಹೇಗೆ ತುಂಬಾ ಮುಖ್ಯವಾಗುತ್ತಾರೋ, ಹಾಗೆಯೇ ಅಭಿಮಾನಿಗಳಿಗೂ ಅವರವರ ಫೆವರಿಟ್ ಸ್ಟಾರ್ಸ್ ಅಂದ್ರೆ ಅಷ್ಟೆ ಅಭಿಮಾನ, ಪ್ರೀತಿ, ಗೌರವ ಇದ್ದೇ ಇರುತ್ತದೆ.

  ಅದ್ರಲ್ಲೂ ಕೆಲವು ಅಭಿಮಾನಿಗಳು ಅಂತೂ ತಮ್ಮ ತಮ್ಮ ಸ್ಟಾರ್ ಗಳ ಬಗ್ಗೆ ವಿಪರೀತವಾಗಿ ಅಭಿಮಾನ ಇಟ್ಟುಕೊಳ್ಳುತ್ತಾರೆ.

  ರಿಯಲ್ ಸ್ಟಾರ್ ಉಪೇಂದ್ರ ಅವರು ಡಿಫರೆಂಟ್ ಅನ್ನೋದಕ್ಕೆ 'ಅವರ 'ಉಪ್ಪಿ 2' ಚಿತ್ರ ನೋಡಿದವರಿಗೆ ನಿದರ್ಶನಗಳು ಈಗಾಗಲೇ ಸಿಕ್ಕಿರುತ್ತವೆ.

  ಅದೇನೆ ಇರಲಿ ಅಂದಹಾಗೆ ಸಿನಿಮಾಗಳನ್ನು ಮಾತ್ರ ಡಿಫರೆಂಟಾಗಿ ಮಾಡುವುದು ಮಾತ್ರವಲ್ಲದೇ ಏನಾದರೂ ಸಮಸ್ಯೆ ಬಂದರೂ ಚಾಲಾಕಿತನದಿಂದ ನಿಭಾಯಿಸುವ ಕಲೆ ಕೂಡ ನಮ್ಮ ರಿಯಲ್ ಸ್ಟಾರ್ ಗಿದೆ. [ಅಂದು 'ನಾನು', ಇಂದು 'ನೀನು' ಮುಂದೆ 'ಯಾರು'?]

  ಅದು ಹೇಗಂತೀರಾ, ಹಾಗಿದ್ರೆ ಈ ವಿಡಿಯೋ ನೋಡಿ.....

  ಬಲ್ಲ ಮೂಲಗಳ ಮಾಹಿತಿ ಪ್ರಕಾರ 'ಉಪ್ಪಿ 2' ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಓರ್ವ ಕುಡಿದ ಮತ್ತಿನಲ್ಲಿ 'ಉಪ್ಪಿ 2' ಚಿತ್ರದ ಶೂಟಿಂಗ್ ಸೆಟ್ ಪ್ರವೇಶಿಸಿ ಗಲಾಟೆ ಪ್ರಾರಂಭಿಸಿದ ಸಂದರ್ಭದಲ್ಲಿ ಪರಿಸ್ಥಿತಿ ವಿಪರೀತ ಆಗುತ್ತಿರುವುದನ್ನು ಕಂಡ ಉಪೇಂದ್ರ ಅವರು ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯ ಬಳಿ ಮಾತಾಡಿ ಸಾವಕಾಶವಾಗಿ ಸಮಸ್ಯೆಯನ್ನು ಬಗೆಹರಿಸಿದರಂತೆ.[ಐಎಂಡಿಬಿ ರೇಟಿಂಗ್ ನಲ್ಲಿ ಉಪ್ಪಿಗಿಂತ ರುಚಿ ಬೇರೆ ಇಲ್ಲ!]

  ಹೇ ನೀನು ಒಬ್ಬನೇನಾ ಕುಡಿಯೋದು, ನಾವು ಕುಡಿತೀವಿ, ಏನಿಲ್ಲಿ ಶೂಟಿಂಗ್ ನಡೀತಾ ಇರೋದು ಕಾಣಿಸ್ತಿಲ್ವ, ಫಸ್ಟ್ ಮರ್ಯಾದೆ ಕೊಟ್ಟು ಮಾತಾಡು, ನಿನಗೆ ಇದೆ ಹಬ್ಬ ಬಾ ನನ್ ಜೊತೆ ಆಮೇಲೆ ಮಾತಾಡ್ತಿನಿ, ಅಂತ ಹೀಗೆ ಸಖತ್ ಡೈಲಾಗ್ ಮೂಲಕ ಉಪ್ಪಿ ಖಡಕ್ ಆಗಿ ಕುಡುಕನನ್ನು ಸಂಭಾಳಿಸಿದರು.

  ಇದೀಗ ರಿಯಲ್ ಸ್ಟಾರ್ ಉಪೇಂದ್ರ ಅವರ ತಮ್ಮ ನಟನೆ-ನಿರ್ದೇಶನದಲ್ಲಿ ಮಾತ್ರವಲ್ಲದೇ ತಮ್ಮ ಫ್ಯಾನ್ ಗಳನ್ನು ತಮ್ಮ ಹತೋಟಿಯಲ್ಲಿಟ್ಟುಕೊಳ್ಳುವ ಕಲೆಯು ಇವರಲ್ಲಿದೆ ಮಾತ್ರವಲ್ಲದೇ 'ನಾನು' ಡಿಫರೆಂಟು ಅನ್ನೋದನ್ನ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ.[ಉಪ್ಪಿ2 ಗಳಿಕೆ: ಮೂರೇ ದಿನಕ್ಕೆ ಸಿಲ್ವರ್ ಜ್ಯುಬಿಲಿ ಪ್ಲಸ್]

  ಏನೇ ಆಗಲಿ ಹೆಸರಿಗೆ ತಕ್ಕಂತೆ ರಿಯಲ್ ಸ್ಟಾರ್ ಮಾತ್ರವಲ್ಲದೇ ನಿಜ ಜೀವನದಲ್ಲೂ ಖಡಕ್ ಆಗಿರೋ ಉಪ್ಪಿಗೆ ಹ್ಯಾಟ್ಸಾಫ್ ಹೇಳೋಣ.

  English summary
  While shooting for Uppi 2, a drunkard man entered the shooting spot and started behaving weird. When the situation seemed out of control, Real Star Upendra came down to handle his fan!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X