»   » ತುಳು ಪರ್ಬ' ಚಿತ್ರದ ಸಖತ್ ಫೀಲಿಂಗ್ಸ್ ನೋಡಿ

ತುಳು ಪರ್ಬ' ಚಿತ್ರದ ಸಖತ್ ಫೀಲಿಂಗ್ಸ್ ನೋಡಿ

Posted By:
Subscribe to Filmibeat Kannada

ತುಳು ಚಿತ್ರರಂಗವೂ ಇದೀಗ ಸಾಕಷ್ಟು ಮುಂದುವರೆದಿದ್ದು, ಕನ್ನಡ ಚಿತ್ರಗಳಂತೆ ಇದೀಗ ತುಳು ಚಿತ್ರಗಳು ಪ್ರೇಕ್ಷಕರನ್ನು ಕಮಾಲ್ ಮಾಡುತ್ತಿದೆ. ಇದಕ್ಕೆ ಒಳ್ಳೊಳ್ಳೆ ನಿದರ್ಶನಗಳೆಂದರೆ ಸಾಕಷ್ಟು ತುಳು ಚಿತ್ರಗಳು 100-200 ದಿನಗಳವರೆಗೂ ಓಡುತ್ತಿರುವ, 'ಚಾಲಿಪೋಲಿಲು', 'ಒರಿಯನ್ ತೂಂಡ ಒರಿಯಾಗಾಪುಜಿ', 'ರಂಗ್', ಇತ್ಯಾದಿ.

ಇದೀಗ ಮತ್ತೊಂದು ತುಳು ಕಿರು-ಚಿತ್ರವೊಂದು ತಯಾರಾಗುತ್ತಿದ್ದು, ಚಿತ್ರದ ಹಾಡುಗಳು ಯೂಟ್ಯೂಬ್ ನಲ್ಲಿ ಹರಿದಾಡುತ್ತಿವೆ. ಲೋಕು ಕುಡ್ಲ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕಿರು ಚಿತ್ರ 'ಪರ್ಬ' ದ ಒಂದು ಹಾಡು ಇಲ್ಲಿದೆ ನೋಡಿ.... [ಅದ್ಭುತ ದಾಖಲೆ ಬರೆದ ತುಳು ಸಿನೆಮಾ 'ಚಾಲಿಪೋಲಿಲು']

ಶ್ರೀ ಸತ್ಯನಾರಾಯಣ ಪ್ರೊಡಕ್ಷನ್ಸ್ ಅರ್ಪಿಸುವ 'ಪರ್ಬ' ಚಿತ್ರದ ಸಖತ್ ಫೀಲಿಂಗ್ಸ್ ಜೊತೆಗೆ ಒಂದು ಫ್ಯಾಮಿಲಿ ಸುತ್ತ, ಸುತ್ತುವ ಕಥೆಯನ್ನು ಈ ಹಾಡಿನಲ್ಲಿ ತೋರಿಸಲಾಗಿದೆ. [ಕೋಡ್ಲು ರಾಮಕೃಷ್ಣ ನಿರ್ದೇಶನದ 25ನೇ ಚಿತ್ರ 'ಏರೆಗ್ಲಾ ಪನೊಡ್ಚಿ']

'ಈ ಸೃಷ್ಟಿಡೂ.......ಪೊನ್ನು ಪನ್ಪಿ ಪದನೇ ಶಾಪನಾ?. ಕಣ್ಣ ನೀರ್ ಪನಿಟೆ ಮೀಪಿನ. ಬದ್ಕ್ ದಾಯೇ ಈತ್ ಕೈಪೆನಾ? ವಿಧಿತಾ ಗೊಬ್ಬುಗಿತ್ತೇ ಸೋತೇನಾ? (ಈ ಸೃಷ್ಟಿಯಲ್ಲಿ...ಹೆಣ್ಣು ಎನ್ನುವ ಪದವೇ ಶಾಪನಾ?. ಕಣ್ಣೀರ ಹನಿಯಲ್ಲೇ ಸ್ನಾನನಾ. ಬದುಕು ಯಾಕೆ ಇಷ್ಟು ಕಹಿನಾ? ವಿಧಿಯ ಆಟಕ್ಕೆ ಸೋತನಾ?)

Watch Tulu Short Film 'Parba' Video Song

ಈ ತರಹದ ಅರ್ಥಪೂರ್ಣ ಲಿರಿಕ್ಸ್ ಇರುವ, ರಮೇಶ್ ಚಂದ್ರ ಹಾಗೂ ಅಕ್ಷತಾ ರಾವ್ ಅವರ ಧ್ವನಿಯಲ್ಲಿ ಮೂಡಿಬಂದಿರುವ 'ಪರ್ಬ' ಕಿರು ಚಿತ್ರದ ಹಾಡು ಕರಾವಳಿ ಪ್ರದೇಶದಲ್ಲಂತೂ ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ. [ಚಾಲಿಪೋಲಿಲು 200; ಸಚಿವ ಖಾದರ್ ಜೊತೆ ಸಂಭ್ರಮ]

ಅಖಿಲ ಭಾರತೀಯ ತುಳು ಒಕ್ಕೂಟ ಸಂಘದ ಅಧ್ಯಕ್ಷ ಧರ್ಮಪಾಲ್ ಯು ದೇವಾಡಿಗ ಅವರು 'ಪರ್ಬ' ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಅಭಿಷೇಕ್ ಎಸ್.ಎನ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ಚಿತ್ರದ ಹಾಡಿನಲ್ಲಿರುವ ದೃಶ್ಯಗಳನ್ನು ನೋಡುತ್ತಿದ್ದರೆ ಒಂದು ಹೆಣ್ಣಿನ ಸಂಸಾರದ ಸುತ್ತ 'ಪರ್ಬ' ಚಿತ್ರದ ಕಥೆ ಸುತ್ತಬಹುದು ಅಂತ ನಮ್ಮ ಅನಿಸಿಕೆ. ಈಗಾಗಲೇ ಸಾಕಷ್ಟು ಕುತೂಹಲ ಸೃಷ್ಟಿಸಿರುವ ಹಾಡು ಕರಾವಳಿ ಪ್ರೇಕ್ಷಕರನ್ನು ಚಿತ್ರ ಬಿಡುಗಡೆಗೆ, ಕಾಯುವಂತೆ ಮಾಡಿದೆ, ಅಂದರೂ ತಪ್ಪಾಗ್ಲಿಕ್ಕಿಲ್ಲ.

English summary
Tulu movie 'Parba' song out. The movie is produced by Dharmapal U Devadiga, and Directed by Loku Kudla. Watch Thulu Short Movie 'Parba' Video Song

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada