»   » ಇದೋ ಬೊಂಬಾಟ್ ಆಫರ್: 'ಉಗ್ರಂ' ಫುಲ್ ಮೂವಿ

ಇದೋ ಬೊಂಬಾಟ್ ಆಫರ್: 'ಉಗ್ರಂ' ಫುಲ್ ಮೂವಿ

Posted By:
Subscribe to Filmibeat Kannada

ಈ ವಾರಾಂತ್ಯ ಯಾವ ಸಿನಿಮಾ ನೋಡಬೇಕೆಂದು ಪ್ಲಾನ್ ಹಾಕಿದ್ದೀರಾ? ಅಂತಹ ಏನೂ ಪ್ಲಾನ್ ಗೀನು ಇಲ್ಲದಿದ್ದರೆ ಇಲ್ಲಿದೆ ನೋಡಿ ಒಂದು ಬೊಂಬಾಟ್ ಆಫರ್. ಟಿವಿ ಆಫ್ ಮಾಡಿ, ಇಂಟರ್ ನೆಟ್ ಆನ್ ಮಾಡ್ಕೊಳ್ಳಿ ಒಂದೇ ಒಂದು ಕ್ಲಿಕ್ ದೂರದಲ್ಲಿದೆ ಒಂದೊಳ್ಳೆಯ ಚಿತ್ರವನ್ನು ನೋಡುವ ಸುವರ್ಣಾವಕಾಶ.

ಕಳೆದ ವರ್ಷ ತೆರೆಕಂಡು ಬಾಕ್ಸ್ ಆಫೀಸಲ್ಲಿ ಭಾರಿ ಸದ್ದು ಮಾಡಿದ್ದೂ ಅಲ್ಲದೆ, ಶತದಿನೋತ್ಸವ ಆಚರಿಸಿದ ಚಿತ್ರ 'ಉಗ್ರಂ'. ಈ ಚಿತ್ರವನ್ನು ನೀವು ನೋಡಿಲ್ಲ ಎಂದರೆ, ಇನ್ನೊಮ್ಮೆ ನೋಡಬೇಕು ಎಂದುಕೊಂಡಿದ್ದರೆ ಸಂಪೂರ್ಣ ಚಿತ್ರವನ್ನು ಇಲ್ಲಿ ಯಾವುದೇ ಅಡೆತಡೆ ಇಲ್ಲದೆ ನೋಡಬಹುದು. [ಉಗ್ರಂ ಚಿತ್ರ ವಿಮರ್ಶೆ]


ಸೈಲೆಂಟ್ ಆಗಿದ್ದ ಶ್ರೀಮುರಳಿ ಅವರ ವೃತ್ತಿಬದುಕಿನಲ್ಲಿ ಅನಿರೀಕ್ಷಿತ ತಿರುವು ನೀಡಿದ ಚಿತ್ರ 'ಉಗ್ರಂ'. ಈ ರೀತಿಯ ಕಥೆಗಳು ಈ ಹಿಂದೆ ಬಂದಿಲ್ಲ ಅಂತಲ್ಲ. ಸಾಕಷ್ಟು ಬಂದು ಹೋಗಿವೆ. ಆದರೆ ಸ್ಯಾಂಡಲ್ ವುಡ್ ಮಟ್ಟಿಗೆ ಒಂಥರಾ ಹೊಸ ಅನುಭವ ನೀಡಿದ ಚಿತ್ರ.

ಉಗ್ರಂ ಚಿತ್ರ ಶತದಿನೋತ್ಸವ ಆಚರಿಸಿಕೊಂಡಿದ್ದೂ ಆಯಿತು. ತನ್ನ ಮೇಕಿಂಗ್ ನಿಂದಾಗಿ, ಅತ್ಯುತ್ತಮ ಚಿತ್ರಕಥೆಯಿಂದಾಗಿ ಎಲ್ಲರ ಗಮನಸೆಳೆದ ಚಿತ್ರವಿದು. ಶ್ರೀಮುರಳಿ ಅನ್ನೋ ಹೀರೋ ಫೀನಿಕ್ಸ್ ನಂತೆ ಎದ್ದು ಬರುವಂತಾಗಿದ್ದೇ ಈ ಚಿತ್ರದಿಂದ.

A still from Ugramm

ಪ್ರಶಾಂತ್ ನೀಲ್ ಅವರ ಚೊಚ್ಚಲ ನಿರ್ದೇಶನದ 'ಉಗ್ರಂ' ಚಿತ್ರ ಕೇವಲ ಸಿಂಗಲ್ ಸ್ಕ್ರೀನ್ ತೆರೆಯ ಮೇಲಷ್ಟೇ ಅಲ್ಲದೆ ಮಲ್ಟಿಫ್ಲೆಕ್ಸ್ ಗಳಲ್ಲೂ ಭರ್ಜರಿ ಕಲೆಕ್ಷನ್ ಮಾಡಿರುವುದು ವಿಶೇಷ. ಚಿತ್ರವನ್ನು ಮೊದಲ ಬಾರಿಗೆ ಕೋಲಾರ ಗೋಲ್ಡ್ ಫೀಲ್ಡ್ಸ್ ನಲ್ಲಿರುವ ಚಿನ್ನದ ಗಣಿಯ ಸೈನೇಡ್ ರಾಶಿಯ ಹೊರಗೆ ಚಿತ್ರಿಸಲಾಗಿದೆ.

ಆರಂಭದಿಂದ ಕೊನೆಯವರೆಗೂ ಕುತೂಹಲ ಕೆರಳಿಸುವ 'ಉಗ್ರಂ' ತನ್ನ ಅತ್ಯುತ್ತಮ ಚಿತ್ರಕಥೆಯಿಂದಾಗಿ ಪ್ರೇಕ್ಷಕರ ಕುತೂಹಲವನ್ನು ಕಾಯ್ದುಕೊಳ್ಳುತ್ತದೆ. ಪಾತ್ರವರ್ಗದಲ್ಲಿ ತಿಲಕ್ ಶೇಖರ್, ಪದ್ಮಜಾ ರಾವ್, ಮಿತ್ರ, ಜೈ ಜಗದೀಶ್, ಅವಿನಾಶ್, ಅತುಲ್ ಕುಲಕರ್ಣಿ ಮುಂತಾದವರು ಅಭಿನಯಿಸಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Watch Ugramm - Kannada Full Movie online. It stars Srimurali and Haripriya as the lead pair, supported by Thilak Shekar, Atul Kulkarni, Avinash, Jai Jagadish, Padmaja Rao and others.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada