For Quick Alerts
  ALLOW NOTIFICATIONS  
  For Daily Alerts

  'ಡಬ್ಬಿಂಗ್' ವಿವಾದದ ಬಗ್ಗೆ ಉಪೇಂದ್ರ ಹೇಳಿದ್ದೇನು?

  By Harshitha
  |

  ಇಲ್ಲಿಯವರೆಗೂ ಡಬ್ಬಿಂಗ್ ಬಗ್ಗೆ ತುಟಿಕ್ ಪಿಟಿಕ್ ಅನ್ನದ ರಿಯಲ್ ಸ್ಟಾರ್ ಉಪೇಂದ್ರ ತೆಲುಗು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕರ್ನಾಟಕದಲ್ಲಿ ಭುಗಿಲೆದ್ದಿರುವ ಡಬ್ಬಿಂಗ್ ವಿವಾದ ಬಗ್ಗೆ ಮಾತನಾಡಿದ್ದಾರೆ.

  ''ಕರ್ನಾಟಕದಲ್ಲಿ ತೆಲುಗು ಚಿತ್ರಗಳಿಗೆ ದೊಡ್ಡ ಮಾರ್ಕೆಟ್ ಇದೆ. ಕನ್ನಡ ಸಿನಿಮಾಗಳು ತೆಲುಗು ಮತ್ತು ತಮಿಳು ಚಿತ್ರಗಳಿಗೆ ನೇರವಾಗಿ ಪೈಪೋಟಿ ನೀಡಬೇಕು. ತೆಲುಗು ಸಿನಿಮಾಗಳು ಹಿಟ್ ಆಗಬೇಕು ಅಂದ್ರೆ ಕನ್ನಡದವರೇ ನೋಡಬೇಕು ಅಲ್ಲವೇ?''

  ''ಕರ್ನಾಟಕದಲ್ಲಿ ಬಹುತೇಕರಿಗೆ ತೆಲುಗು ಅರ್ಥವಾಗುತ್ತದೆ ಮತ್ತು ಮಾತನಾಡಲು ಬರುತ್ತದೆ. ಎಲ್ಲರೂ ಎಂಜಾಯ್ ಮಾಡ್ತಾರೆ. ದೊಡ್ಡ ಮಾರ್ಕೆಟ್ ಇದೆ. ಅದ್ರೆ ಡಬ್ಬಿಂಗ್ ಮಾಡಿದ್ರೆ, ಆ ಕ್ವಾಲಿಟಿ ಹೋಗುತ್ತೆ ಅಂತ ಅನಿಸುತ್ತೆ.'' [ಡಬ್ಬಿಂಗ್ ಪರವಾದಿಗಳಿಂದ ಉಪೇಂದ್ರರಿಗೆ ಟ್ವೀಟ್ ಪಾಠ]

  ''ಪವನ್ ಕಲ್ಯಾಣ್ ಸಿನಿಮಾಗಳನ್ನ ಅವರ ವಾಯ್ಸ್ ನಲ್ಲೇ ನೋಡ್ಬೇಕು. ಬೇರೆ ವಾಯ್ಸ್ ನಲ್ಲಿ ನೋಡಿದರೆ ಅಷ್ಟು ಮಜಾ ಇರಲ್ಲ. ಹೀಗಾಗಿ ಡಬ್ಬಿಂಗ್ ತೆಲುಗು ಮತ್ತು ಕನ್ನಡ ಇಂಡಸ್ಟ್ರಿಗೆ ಒಳ್ಳೆಯದಲ್ಲ.''

  ''ತೆಲುಗು ಜೊತೆಗೆ ತಮಿಳು ಚಿತ್ರಗಳೂ ಬಂದರೆ, ಅಲ್ಲಿನ ಲೋಕಲ್ ಮಾರ್ಕೆಟ್ ಮೇಲೆ ಪ್ರಭಾವ ಬೀರುತ್ತವೆ. ಈಗಲೇ ನಾವು ಕಷ್ಟ ಅನುಭವಿಸುತ್ತಿದ್ದೇವೆ. ಅದಕ್ಕೆ ಡಬ್ಬಿಂಗ್ ಬೇಡ.'' [ಕನ್ನಡ ಚಾನೆಲ್ ನಲ್ಲಿ ಬಂದೇಬಿಡ್ತು ಡಬ್ಬಿಂಗ್ ಸಿನಿಮಾ?]

  ''ಕನ್ನಡದಲ್ಲೇ ನೋಡಬೇಕು ಅಂತಿದ್ರೆ ಡಬ್ಬಿಂಗ್ ಮಾತ್ರ ತನ್ನಿ, ತೆಲುಗು ಮತ್ತು ತಮಿಳು ಚಿತ್ರಗಳನ್ನ ಡೈರೆಕ್ಟ್ ಆಗಿ ತರಬೇಡಿ. ಡಬ್ ಮಾಡಿ ರಿಲೀಸ್ ಮಾಡಿದ್ರೆ ಎಲ್ಲರೂ ಕನ್ನಡನೇ ನೋಡ್ತಾರೆ. ಎರಡು ಬರುತ್ತೆ ಅಂದ್ರೆ ಲೋಕಲ್ ಮಾರ್ಕೆಟ್ ಗತಿ ಏನಾಗಬೇಕು. ಈಗಲೇ ನಮಗೆ ಥಿಯೇಟರ್ ಗಳು ಸಿಗುತ್ತಿಲ್ಲ.'' [ಡಬ್ಬಿಂಗ್ ಬಂದ್ರೆ ಏನಾಗ್ಬಹುದು? ಸಣ್ಣ ಲೆಕ್ಕಾಚಾರ..]

  ''ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳಿಗೆ ನೇರವಾದ ಮಾರ್ಕೆಟ್ ಇದೆ ಕರ್ನಾಟಕದಲ್ಲಿ. ಥಿಯೇಟರ್ ಗಳನ್ನ ಡಿಸ್ಟ್ರಿಬ್ಯೂಟರ್ ಗಳು ಕನ್ಟ್ರೋಲ್ ಮಾಡ್ತಾರೆ. ಆದ್ರೆ, ದೊಡ್ಡ ಸಿನಿಮಾ ಬರ್ತಿದೆ ಅಂದ್ರೆ, ಕ್ರೇಜ್ ಇರುತ್ತಲ್ವಾ ಎಲ್ಲಾ ಕನ್ಟ್ರೋಲ್ ಸ್ಮಾಶ್ ಮಾಡುತ್ತೆ. ಬೇರೆ ಭಾಷೆ ಸಿನಿಮಾಗಳು 200-300 ಸಿನಿಮಾಗಳಲ್ಲಿ ರಿಲೀಸ್ ಆಗುತ್ತೆ.''

  ಹೀಗಂತ ಸಂದರ್ಶನದಲ್ಲಿ ಉಪೇಂದ್ರ ಇಲ್ಲಿನ ವಸ್ತುಸ್ಥಿತಿ ಬಗ್ಗೆ ಹೇಳಿದ್ದಾರೆ. ಅದರ ವಿಡಿಯೋ ಇಲ್ಲಿದೆ ನೋಡಿ...

  ಉಪೇಂದ್ರ ರವರ ಈ ಮಾತುಗಳಿಂದ ಇದೀಗ ಡಬ್ಬಿಂಗ್ ಪರ ವಾದಿಸುತ್ತಿರುವವರ ಕಣ್ಣು ಕೆಂಪಗಾಗಿದೆ. ಟ್ವಿಟ್ಟರ್ ನಲ್ಲಿ ದೊಡ್ಡ ಯುದ್ಧವೇ ನಡೆಯುತ್ತಿದೆ.

  English summary
  Kannada Actor Upendra has reacted upon Dubbing issue in Kannada Film Industry during an interview with Telugu TV Channel. Watch the video here.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X