For Quick Alerts
  ALLOW NOTIFICATIONS  
  For Daily Alerts

  ದೆವ್ವಕ್ಕೂ-ದೆವ್ವಕ್ಕೂ ಫೈಟು : 'ಕಲ್ಪನಾ-2' ನೋಡೋರಿಗೆ ಟ್ರೀಟು.!

  By Harshitha
  |

  ಗಾಂಧಿನಗರದಲ್ಲಿ ಮತ್ತೆ ಹಾರರ್ ಸಿನಿಮಾಗಳು ಹೆಚ್ಚಾಗುತ್ತಿವೆ. ಸ್ಯಾಂಡಲ್ ವುಡ್ ಸಿನಿ ಪ್ರಿಯರಿಗೆ ವಾರಕ್ಕೊಂದು ಹೊಸ ದೆವ್ವ ಪರಿಚಯವಾಗುತ್ತಿದೆ. ಈ ಶುಕ್ರವಾರ ತೆರೆ ಮೇಲೆ ನಿಮ್ಮನ್ನೆಲ್ಲಾ ಗಢ ಗಢ ನಡುಗಿಸಲು ಬರುತ್ತಿರುವ ಪ್ರೇತಾತ್ಮ 'ಕಲ್ಪನಾ'.

  ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಿರುವ ಹಾರರ್ ಸಿನಿಮಾ 'ಕಲ್ಪನಾ-2' ಜುಲೈ 15 ರಂದು ತೆರೆಗೆ ಬರುತ್ತಿದೆ. ತಮಿಳಿನ 'ಕಾಂಚನಾ-2' ಚಿತ್ರದ ರೀಮೇಕ್ ಆಗಿರುವ 'ಕಲ್ಪನಾ-2' ಚಿತ್ರದ ಸಣ್ಣ ಝಲಕ್ ಇಲ್ಲಿದೆ ನೋಡಿ....

  ತಮಿಳಿನ 'ಕಾಂಚನಾ-2' ಚಿತ್ರದಂತೆಯೇ ಕನ್ನಡದ 'ಕಲ್ಪನಾ-2' ಚಿತ್ರ ಕೂಡ ಭಯಂಕರವಾಗಿದೆ ಎನ್ನುವುದಕ್ಕೆ ಈ ಟ್ರೈಲರ್ ಸಾಕ್ಷಿ. ಉಪೇಂದ್ರ, ಪ್ರಿಯಾಮಣಿ, ಅವಂತಿಕಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಇರುವ 'ಕಲ್ಪನಾ-2' ಚಿತ್ರ ಮೊದಲ ನೋಟಕ್ಕೆ ದಿಗಿಲು ಹುಟ್ಟಿಸುತ್ತದೆ. [ಸೆನ್ಸಾರ್ ನಲ್ಲಿ 'ಕಲ್ಪನಾ' ಪಾಸ್, ಇನ್ನೇನಿದ್ರೂ ತೆರೆ ಮೇಲೆ ಅಬ್ಬರ]

  ನಾಲ್ಕು ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ 'ಕಲ್ಪನಾ' ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿತ್ತು. ಅದೇ ಹುಮ್ಮಸ್ಸಿನಲ್ಲಿ ನಿರ್ಮಾಪಕ ಡಾ.ಕೆ.ಎಂ.ರಾಜೇಂದ್ರ 'ಕಲ್ಪನಾ-2' ಚಿತ್ರವನ್ನ ರೆಡಿ ಮಾಡಿದ್ದಾರೆ. ಅನಂತರಾಜು ಆಕ್ಷನ್ ಕಟ್ ಹೇಳಿರುವ ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತವಿದೆ.

  English summary
  Kannada Actor Real Star Upendra, Actress Priyamani and Avanthika Shetty starrer 'Kalpana-2' trailer is out. Watch the horrifying trailer here...

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X