»   »  ಎಕ್ಸ್ ಕ್ಲೂಸಿವ್ : ನವ ವಧು ರಾಧಿಕಾ ಪಂಡಿತ್ ಗೌರಿ ಪೂಜೆ ವಿಡಿಯೋ

ಎಕ್ಸ್ ಕ್ಲೂಸಿವ್ : ನವ ವಧು ರಾಧಿಕಾ ಪಂಡಿತ್ ಗೌರಿ ಪೂಜೆ ವಿಡಿಯೋ

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಇಂದು ಗೃಹಸ್ಥಾಶ್ರಮಕ್ಕೆ ಕಾಲಿಡಲಿದ್ದಾರೆ. ಇಂದು ಮಧ್ಯಾಹ್ನ 11.30 ರಿಂದ 12.30ರವರೆಗೆ ಇರುವ ಶುಭ ಅಭಿಜಿತ್ ಲಗ್ನದಲ್ಲಿ ಮಾಂಗಲ್ಯ ಧಾರಣೆ ನಡೆಯಲಿದೆ.

ಬೆಂಗಳೂರಿನ ಪ್ರತಿಷ್ಟಿತ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಯಶ್-ರಾಧಿಕಾ ಪಂಡಿತ್ ವಿವಾಹ ಮಹೋತ್ಸವ ನೆರವೇರಲಿದೆ. ಇದಕ್ಕಾಗಿ ಸೋಮನಾಥೇಶ್ವರ ದೇವಸ್ಥಾನದ ಸೆಟ್ ಕೂಡ ನಿರ್ಮಾಣವಾಗಿದೆ.[ಎಕ್ಸ್ ಕ್ಲೂಸಿವ್: ತಾಜ್ ವೆಸ್ಟ್ಎಂಡ್ ನಲ್ಲಿ ಯಶ್-ರಾಧಿಕಾ 'ಧಾರೆ'ಗೆ ಶಿವಾಲಯ ನಿರ್ಮಾಣ]

ರಾಧಿಕಾ ಪಂಡಿತ್ ಹಾಗೂ ಯಶ್ ರವರ ಮದುವೆ ದಿಬ್ಬಣದ ಎಕ್ಸ್ ಕ್ಲೂಸಿವ್ ವಿಡಿಯೋಗಳನ್ನ ನಿಮ್ಮ ಮುಂದೆ ಇಡ್ತಿದ್ದೀವಿ ನೋಡಿ....

ಗೌರಿ ಪೂಜೆ ಮಾಡಿದ ನವ ವಧು ರಾಧಿಕಾ ಪಂಡಿತ್

ಮಾಂಗಲ್ಯ ಧಾರಣೆ ನಡೆಯುವ ಮುನ್ನ ಅಪ್ಪಟ ಕೊಂಕಣಿ ಸಂಪ್ರದಾಯದಂತೆ ಸಿಂಗಾರಗೊಂಡು ನಟಿ ರಾಧಿಕಾ ಪಂಡಿತ್ ಗೌರಿ ಪೂಜೆ ನೆರವೇರಿಸಿದರು. ಅದರ ಎಕ್ಸ್ ಕ್ಲೂಸಿವ್ ವಿಡಿಯೋ ಇಲ್ಲಿದೆ ನೋಡಿ...

ತಂದೆ-ತಾಯಿ ಜೊತೆ ರಾಧಿಕಾ ಪಂಡಿತ್

ಅರಿಶಿನ ಶಾಸ್ತ್ರ ಹಾಗೂ ಗೌರಿ ಪೂಜೆ ನಡೆದ ಬಳಿಕ ತಂದೆ ಕೃಷ್ಣ ಪ್ರಸಾದ್ ಹಾಗೂ ತಾಯಿ ಮಂಗಳ ಪಂಡಿತ್ ಜೊತೆ ಪುತ್ರಿ ವಧು ರಾಧಿಕಾ ಪಂಡಿತ್ ಕಂಗೊಳಿಸಿದ್ದು ಹೀಗೆ... ವಿಡಿಯೋ ಇಲ್ಲಿದೆ ನೋಡಿ

ಸೋಮನಾಥೇಶ್ವರ ದೇವಸ್ಥಾನದ ಸೆಟ್

ರಾಧಿಕಾ ಪಂಡಿತ್ ಹಾಗೂ ಯಶ್ ವಿವಾಹಕ್ಕೋಸ್ಕರ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಐತಿಹಾಸಿಕ ಸೋಮನಾಥೇಶ್ವರ ದೇವಸ್ಥಾನದ ಸೆಟ್ ನಿರ್ಮಾಣವಾಗಿದೆ. ವಿಡಿಯೋ ಇಲ್ಲಿದೆ ನೋಡಿ...

ಯಶ್-ರಾಧಿಕಾ ಆಸೆಯಂತೆ ದೇವಸ್ಥಾನ ನಿರ್ಮಾಣ

ಪ್ರಕೃತಿಗೆ ಸಾಕ್ಷಿಯಾಗಿ, ಶಿವ-ಪಾರ್ವತಿಯ ಸಮ್ಮುಖದಲ್ಲಿ ಮದುವೆ ಆಗಬೇಕೆಂಬುದು ಯಶ್ ಹಾಗೂ ರಾಧಿಕಾ ಪಂಡಿತ್ ಆಸೆ. ಅದರಂತೆ ಸೋಮನಾಥೇಶ್ವರ ದೇಗುಲದ ಸೆಟ್ ನಲ್ಲಿ ಮದುವೆ ಮಂಟಪ ನಿರ್ಮಾಣ ಮಾಡಲಾಗಿದೆ. ವಿಡಿಯೋ ಇಲ್ಲಿದೆ ನೋಡಿ...

ನಂದಿ ವಿಗ್ರಹ, ಗಣೇಶ ಮೂರ್ತಿ

ಕಲಾವಿದ ಅರುಣ್ ಸಾಗರ್ ನಿರ್ಮಿಸಿರುವ ದೇಗುಲದ ಸೆಟ್ ನಲ್ಲಿ ನಂದಿ ವಿಗ್ರಹ ಹಾಗೂ ಗಣೇಶ ಮೂರ್ತಿ ಕೂಡ ಇರುವುದು ವಿಶೇಷ. [ಮೆಹಂದಿ ಸಮಾರಂಭದಲ್ಲಿ ಕುಣಿದು ಕುಪ್ಪಳಿಸಿದ ರಾಧಿಕಾ-ಯಶ್]

ತಾವರೆ ಹೂಗಳಿಂದ ಅಲಂಕಾರ

ಒಂದು ಸಾವಿರಕ್ಕೂ ಹೆಚ್ಚು ತಾವರೆ ಹೂ, ಸೇವಂತಿ ಹೂ, ನಂದಿ ಬಟ್ಟಲು ಹೂ, ಮೈಸೂರು ಮಲ್ಲಿಗೆ ಹೂ, ಸುಗಂಧ ರಾಜ ಹೂಗಳಿಂದ ಮದುವೆ ಮಂಟಪ ಅಲಂಕಾರಗೊಂಡಿದೆ. [ಮದುವೆಗೂ ಮುಂಚೆ ರಾಕಿಂಗ್ ಸ್ಟಾರ್ ಗೆ ರಾಧಿಕಾ ಪಂಡಿತ್ ಚಾಲೆಂಜ್ !]

ವರ ಪೂಜೆ ನಡೆಯುತ್ತಿದೆ

ಸದ್ಯಕ್ಕೆ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಯಶ್ ರವರ ವರ ಪೂಜೆ ನಡೆಯುತ್ತಿದೆ. ರಾಧಿಕಾ ಪಂಡಿತ್ ತಂದೆ ಕೃಷ್ಣ ಪ್ರಸಾದ್, ತಾಯಿ ಮಂಗಳಾ ಪಂಡಿತ್... ಯಶ್ ರವರ ಕಾಲು ತೊಳೆದು ವರ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಯಶ್ ತಂದೆ ಅರುಣ್ ಕುಮಾರ್ ಹಾಗೂ ತಾಯಿ ಪುಷ್ಟ, ಸಹೋದರಿ ನಂದಿನಿ ಹಾಜರ್ ಇದ್ದರು. ವಿಡಿಯೋ ನೋಡಿ...

English summary
Watch the exclusive video of Bride Radhika Pandit performing Gowri Pooja.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada