»   » ಅಂದು 'ದೇವದಾಸ್' ಜೊತೆ ಗಣೇಶ್: ಇಂದು 'ದೇವದಾಸ್' ಜೊತೆ ಗಣಿ ಪುತ್ರ ವಿಹಾನ್.!

ಅಂದು 'ದೇವದಾಸ್' ಜೊತೆ ಗಣೇಶ್: ಇಂದು 'ದೇವದಾಸ್' ಜೊತೆ ಗಣಿ ಪುತ್ರ ವಿಹಾನ್.!

Posted By:
Subscribe to Filmibeat Kannada

ಯೋಗರಾಜ್ ಭಟ್ ನಿರ್ದೇಶನದ ಬ್ಲಾಕ್ ಬಸ್ಟರ್ 'ಮುಂಗಾರು ಮಳೆ' ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಪಾತ್ರ ಎಷ್ಟು ಮುಖ್ಯವಾಗಿತ್ತೋ... ಮೊಲ 'ದೇವದಾಸ್' ಕೂಡ ಅಷ್ಟೇ ಪ್ರಮುಖ ಪಾತ್ರ ವಹಿಸಿತ್ತು.

ಗಣೇಶ್ ತರಹ ಕಿಲೋಮೀಟರ್ ಗಟ್ಟಲೆ ಡೈಲಾಗ್ ಹೊಡೆಯದಿದ್ದರೂ, ಗಣಿ ಜೊತೆಗೆ ಪ್ರತಿ ಫ್ರೇಮ್ ನಲ್ಲೂ ಇರುತ್ತಿದ್ದ ಮೊಲ 'ದೇವದಾಸ್' ಅಸಂಖ್ಯಾತ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತ್ತು.

Watch Video: Ganesh son Vihaan playing with Devdas

ಕ್ಲೈಮ್ಯಾಕ್ಸ್ ನಲ್ಲಿ ಪ್ರೀತಂ (ಗಣೇಶ್) ಲವ್ ಫೇಲ್ಯೂರ್ ಆಗ್ತಿದ್ದಂತೆ, ಮೊಲ 'ದೇವದಾಸ್' ಕೂಡ ಪ್ರಾಣ ಬಿಡುತ್ತೆ. ಈ ಸನ್ನಿವೇಶ ಕಂಡು ಅದೆಷ್ಟೋ ಮಂದಿಯ ಕಣ್ಣಾಲಿಗಳು ಒದ್ದೆ ಆಗಿದ್ದವು.

ನಂಬಿದ್ರೆ ನಂಬಿ.! 'ಮುಂಗಾರು ಮಳೆ'ಯ ಮೊಲ 'ದೇವದಾಸ್' ದೆವ್ವ ಆಗಿದೆ.!

ಅಷ್ಟಕ್ಕೂ, 'ಮುಂಗಾರು ಮಳೆ'ಯ ಮೊಲ 'ದೇವದಾಸ್'ನ ಇಂದು ನಾವು ನೆನಪಿಸಿಕೊಳ್ಳಲು ಕಾರಣ ಒನ್ಸ್ ಅಗೇನ್ ಗಣೇಶ್ ಮತ್ತು ಅವರ ಪುತ್ರ ವಿಹಾನ್.

ಫುಲ್ ಡೀಟೇಲ್ಸ್ ಗೆ ಬರುವ ಮುನ್ನ, ಮೊದಲು ಈ ವಿಡಿಯೋನ ನೋಡಿಕೊಂಡು ಬನ್ನಿ....

ಮೊಲದ ಜೊತೆ ತಮ್ಮ ಪುತ್ರ ವಿಹಾನ್ ಆಟವಾಡುತ್ತಿರುವ ವಿಡಿಯೋ ಒಂದನ್ನ ಇಂದು ಗಣೇಶ್ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 'ವಿಹಾನ್ ಜೊತೆ ದೇವದಾಸ್' ಎಂಬ ಕ್ಯಾಪ್ಷನ್ ಕೂಡ ವಿಡಿಯೋಗೆ ಗಣೇಶ್ ನೀಡಿದ್ದಾರೆ.

English summary
Golden Star Ganesh son Vihaan playing with 'Devdas' Rabbit. Watch video here.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada