»   » ವಿಡಿಯೋ: 'ಕಿರಿಕ್' ಸಾನ್ವಿ ಜೊತೆ ಸಂಕ್ರಾಂತಿ ಸಂಭ್ರಮ!

ವಿಡಿಯೋ: 'ಕಿರಿಕ್' ಸಾನ್ವಿ ಜೊತೆ ಸಂಕ್ರಾಂತಿ ಸಂಭ್ರಮ!

Written By:
Subscribe to Filmibeat Kannada

ಕೆಲವು ನಟಿಯರು ಚಿತ್ರರಂಗಕ್ಕೆ ಕಾಲಿಟ್ಟ ಅತಿ ಸಣ್ಣ ಸಮಯದಲ್ಲಿಯೇ ಜನಪ್ರಿಯರಾಗುತ್ತಾರೆ. ಅಂತಹವರಲ್ಲಿ ಒಬ್ಬರು ಈ ಕೊಡಗಿನ ಸುಂದರಿ ರಶ್ಮಿಕಾ ಮಂದಣ್ಣ. 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಚಂದನವನದಲ್ಲಿ ಮೋಡಿ ಮಾಡುತ್ತಿರುವ ಮೋಹಕ ಯುವತಾರೆ.['ಕಿರಿಕ್ ಪಾರ್ಟಿ' ವಿಮರ್ಶೆ: ಮತ್ತೆ ನೆನಪಾಗುತ್ತಿದೆ ಕಾಲೇಜಿನ 'ಜಾಲಿಲೈಫ್'!]

ಹೆಸರು ರಶ್ಮಿಕಾ ಮಂದಣ್ಣ...ಆದ್ರೆ, ಚಿತ್ರಪ್ರೇಮಿಗಳ ಪಾಲಿಗೆ ಈಕೆ ಮುದ್ದು 'ಸಾನ್ವಿ'. ಅದೇಷ್ಟೋ ಹುಡುಗರು ''ದಿನಬೆಳಗೆದ್ದು ಯಾರ ಮುಖವ ನಾನು ನೋಡಿದೆ, ಅಂದಾನೋ ಅದೃಷ್ಟಾನೋ ಮುಂದೆ ಕೂತಿದೆ'' ಎಂದು ಸಾನ್ವಿಯ ಕನವರಿಕೆ ಮಾಡುತ್ತಿದ್ದಾರೆ.[ದರ್ಶನ್ 49ನೇ ಚಿತ್ರಕ್ಕೆ ಒಬ್ಬರು ಶೃತಿ ಹರಿಹರನ್, ಮತ್ತೊಬ್ಬರು?]

ಮಾಡೆಲಿಂಗ್ ಲೋಕದಿಂದ ಸ್ಯಾಂಡಲ್ ವುಡ್ ಗೆ ಜಿಗಿದ ರಶ್ಮಿಕಾ, ಚೊಚ್ಚಲ ಚಿತ್ರದಲ್ಲಿಯೇ ಕನ್ನಡಿಗರ ಮನಗೆದ್ದಿದ್ದಾರೆ. ತಮ್ಮ ಮೋಹಕ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ. ಮೊದಲ ಚಿತ್ರದ ಬಿಡುಗಡೆಗೂ ಮುಂಚೆನೇ ದರ್ಶನ್ ಅವರ ಸಿನಿಮಾದಲ್ಲಿ ನಾಯಕಿಯಾಗಿ ಅವಕಾಶ ಪಡೆದುಕೊಂಡರು. ಅದರ ಜೊತೆಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರ 'ಚಮಕ್' ಚಿತ್ರದಲ್ಲೂ ನಾಯಕಿಯಾಗುವ ಮೂಲಕ ಯಶಸ್ವಿ ವೃತ್ತಿ ಜೀವನವನ್ನ ಆರಂಬಿಸಿದ್ದಾರೆ.[ಗಣೇಶ್ 'ಚಮಕ್‌' ಗೆ ಕಿರಿಕ್‌ ಹುಡುಗಿ ನಟಿ]

ಹೀಗೆ ಚಂದನವನದಲ್ಲಿ ಮೋಡಿ ಮಾಡುತ್ತಿರುವ ರಶ್ಮಿಕಾ ಅವರು, ನಿಮ್ಮ 'ಫಿಲ್ಮಿ ಬೀಟ್' ಜೊತೆ ಸಂಕ್ರಾಂತಿ ಆಚರಣೆ ಮಾಡಿದ್ದಾರೆ. ನಿಮ್ಮೆಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ತಿಳಿಸುತ್ತಾ, ರಶ್ಮಿಕಾ ಮಂದಣ್ಣ ಅವರ 'ಕಿರಿಕ್ ಸಂಕ್ರಾಂತಿ' ಹೇಗಿತ್ತು ಅಂತ ಅವರ ಮಾತುಗಳಲ್ಲೇ ಕೇಳಿ, ಈ ವಿಡಿಯೋದಲ್ಲಿ.....

English summary
Kannada Actress Rashmika Mandanna wishes all Filmibeat Kannada viewers 'A Very Happy Sankranti'. Watch video.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada