»   » ವಿಡಿಯೋ ; 'ಜಾಗ್ವಾರ್' ನಿಖಿಲ್ ತಯಾರಿ ಸೂಪರ್ರೋ ಸೂಪರ್.!

ವಿಡಿಯೋ ; 'ಜಾಗ್ವಾರ್' ನಿಖಿಲ್ ತಯಾರಿ ಸೂಪರ್ರೋ ಸೂಪರ್.!

Posted By:
Subscribe to Filmibeat Kannada

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ರವರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರವರ ಪುತ್ರ ನಿಖಿಲ್ ಕುಮಾರ್ ಅಭಿನಯದ ಚೊಚ್ಚಲ ಸಿನಿಮಾ 'ಜಾಗ್ವಾರ್' ಮುಹೂರ್ತ ಸಮಾರಂಭ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆದಿದೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕ್ರೇಜಿ ಸ್ಟಾರ್ ರವಿಚಂದ್ರನ್, ರೆಬೆಲ್ ಸ್ಟಾರ್ ಅಂಬರೀಶ್, ಟಿ.ಎಸ್.ನಾಗಾಭರಣ, ಹಿರಿಯ ನಟಿ ಜಯಮಾಲಾ, ಸರೋಜಾ ದೇವಿ ಸೇರಿದಂತೆ ಗಾಂಧಿನಗರದ ದಿಗ್ಗಜರು 'ಜಾಗ್ವಾರ್' ಮುಹೂರ್ತ ಸಮಾರಂಭಕ್ಕೆ ಸಾಕ್ಷಿಯಾಗಿದ್ದಾರೆ.

ಕಳೆದ ಆರು ತಿಂಗಳಿನಿಂದ ತಯಾರಿಯಲ್ಲಿ ತೊಡಗಿದ್ದ ನಿಖಿಲ್ ಕುಮಾರ್, ಹಾಲಿವುಡ್ ಸ್ಟಂಟ್ ಮಾಸ್ಟರ್ ಸಿರಿಲ್ ರಫೇಲ್ ರಿಂದ ಮಾರ್ಷಲ್ ಆರ್ಟ್ಸ್, ಸ್ಟಂಟ್ಸ್, ಕಿಕ್ ಬಾಕ್ಸಿಂಗ್ ಮತ್ತು ಡ್ಯಾನ್ಸ್ ನಲ್ಲಿ ತರಬೇತಿ ಪಡೆದಿದ್ದಾರೆ. ['ಫಿಲ್ಮಿಬೀಟ್ ಕನ್ನಡ' ವಿಶೇಷ; ಎಚ್.ಡಿ.ಕೆ ಪುತ್ರ ನಿಖಿಲ್ ಸಂದರ್ಶನ]

ಅದರ ಮೇಕಿಂಗ್ ವಿಡಿಯೋ, ಟೀಸರ್ ಮಾದರಿಯಲ್ಲಿ ಇದೇ ಸಮಾರಂಭದಲ್ಲಿ ಬಿಡುಗಡೆ ಆಗಿದೆ. MAKING OF NIKHIL KUMAR ವಿಡಿಯೋ ಇಲ್ಲಿದೆ ನೋಡಿ......

jaguar

ಈ ವಿಡಿಯೋ ನೋಡಿದ್ಮೇಲೆ, ಸ್ಯಾಂಡಲ್ ವುಡ್ ಗೆ ಹೊಸ 'ಆಲ್ ರೌಂಡರ್' ಎಂಟ್ರಿಕೊಟ್ಟಿದ್ದಾರೆ! ಅಂತ ಉದ್ಗರಿಸಿದರೆ ಅತಿಶಯೋಕ್ತಿ ಏನಲ್ಲ. ಯಾಕಂದ್ರೆ, ಡ್ಯಾನ್ಸ್ ಮತ್ತು ಫೈಟ್ ನಲ್ಲಿ ನಿಖಿಲ್ ಗೌಡ ತೋರಿಸಿರುವ ಕರಾಮತ್ತು ಅಂತದ್ದು! [ಡಾ.ರಾಜ್ ಕುಮಾರ್ ನನಗೆ ಸ್ಪೂರ್ತಿ - ನಿಖಿಲ್ ಗೌಡ]

ಹಗಲಿರುಳು ಬೆವರಿಳಿಸಿ ಪವರ್ ಪಫ್ ಬಾಡಿ ಬಿಲ್ಡ್ ಮಾಡಿರುವ ನಿಖಿಲ್ 'ಜಾಗ್ವಾರ್' ಸಿನಿಮಾಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಈ ವಿಡಿಯೋ. [ಹೀರೋ ಆದ ನಿಖಿಲ್; ಗೌಡರ ಮನೆಯಲ್ಲಿ ಭಿನ್ನಮತ!?]

ಟಾಲಿವುಡ್ ನ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ 'ಜಾಗ್ವಾರ್' ಚಿತ್ರದ ಕಥೆ ರಚಿಸಿದ್ದಾರೆ. ರಾಜಮೌಳಿ ಶಿಷ್ಯ ಮಹದೇವ್ ಆಕ್ಷನ್ ಕಟ್ ಹೇಳಲಿದ್ದಾರೆ. ಇಂದು ಮುಹೂರ್ತ ಮುಗಿಸಿರುವ 'ಜಾಗ್ವಾರ್' ಚಿತ್ರತಂಡ ಜನವರಿ 4 ರಿಂದ ಶೂಟಿಂಗ್ ಶುರುಮಾಡಲಿದೆ. ಚೆನ್ನಾಂಬಿಕ ಫಿಲ್ಮ್ಸ್ ಬ್ಯಾನರ್ ನಡಿಯಲ್ಲಿ ಶ್ರೀಮತಿ ಅನಿತಾ ಕುಮಾರಸ್ವಾಮಿ ನಿರ್ಮಾಣದಲ್ಲಿ ಕನ್ನಡ ಮತ್ತು ತೆಲುಗಿನಲ್ಲಿ 'ಜಾಗ್ವಾರ್' ಏಕಕಾಲಕ್ಕೆ ರೆಡಿಯಾಗಲಿದೆ.

English summary
Nikhil Kumar, son of EX CM H.D.Kumaraswamy is making his debut in Sandalwood through 'Jaguar'. The making video of Nikhil Kumar's preparations for the movie is out. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada