»   » ಸಿಎಂ ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಅಣ್ಣಾವ್ರ ಮಗ ಅಪ್ಪು!

ಸಿಎಂ ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಅಣ್ಣಾವ್ರ ಮಗ ಅಪ್ಪು!

Posted By:
Subscribe to Filmibeat Kannada

ಉಪ ಚುನಾವಣೆ ಮುಗಿದ ಬಳಿಕ ನಿನ್ನೆ (ಏಪ್ರಿಲ್ 9) ಮೈಸೂರಿನ ಜಯಲಕ್ಷ್ಮಿಪುರದಲ್ಲಿ ಇರುವ ಡಿ.ಆರ್.ಸಿ ಮಲ್ಟಿಪ್ಲೆಕ್ಸ್ ಗೆ ತೆರಳಿ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರವನ್ನ ವೀಕ್ಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು.['ರಾಜಕುಮಾರ'ನ ರಾಜ್ಯಭಾರ ಕಂಡು ಪುನೀತ್ ಗೆ ಜೈಕಾರ ಹಾಕಿದ ಸಿದ್ದರಾಮಯ್ಯ.!]

ತಮ್ಮ ಬಿಜಿ ಶೆಡ್ಯೂಲ್ ನಡುವೆಯೂ 'ರಾಜಕುಮಾರ' ಚಿತ್ರವನ್ನ ನೋಡಿ, ಒಳ್ಳೆಯ ಮಾತುಗಳನ್ನಾಡಿರುವ ಸಿ.ಎಂ ಸಿದ್ದರಾಮಯ್ಯ ರವರಿಗೆ ಕೃತಜ್ಞತೆ ಸಲ್ಲಿಸಲು ಇಂದು ಸಿ.ಎಂ ಅಧಿಕೃತ ನಿವಾಸ ಕಾವೇರಿಗೆ ಪುನೀತ್ ರಾಜ್ ಕುಮಾರ್, ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಭೇಟಿ ನೀಡಿದ್ದಾರೆ. ಮುಂದೆ ಓದಿ...


ಸಿ.ಎಂ. ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಅಪ್ಪು

ಇಂದು ಬೆಳಗ್ಗೆ ಸಿ.ಎಂ ಅಧಿಕೃತ ನಿವಾಸ 'ಕಾವೇರಿ'ಯಲ್ಲಿ ಪ್ರತ್ಯಕ್ಷರಾದ ಪುನೀತ್ ರಾಜ್ ಕುಮಾರ್, ಸಿದ್ದರಾಮಯ್ಯ ನವರನ್ನು ಭೇಟಿ ಮಾಡಿ, ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.['ರಾಜಕುಮಾರ' ನೋಡಿ ಮಗುವಿನಂತೆ ಕಣ್ಣೀರಿಟ್ಟ ಶಿವಣ್ಣ]


'ರಾಜಕುಮಾರ' ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ ಸಿ.ಎಂ

'ಕಸ್ತೂರಿ ನಿವಾಸ' ಹಾಗೂ ಡಾ.ರಾಜ್ ಕುಮಾರ್ ರವರನ್ನ ನೆನಪಿಸುವ 'ರಾಜಕುಮಾರ' ಚಿತ್ರ ಸಿ.ಎಂ ಸಿದ್ದರಾಮಯ್ಯ ನವರ ಮನಮುಟ್ಟಿದೆ. 'ರಾಜಕುಮಾರ' ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಪುನೀತ್, ಸಂತೋಷ್ ಆನಂದ್ ರಾಮ್ ಹಾಗೂ ವಿಜಯ್ ಕಿರಗಂದೂರ್ ರವರಿಗೆ ಮುಖ್ಯಮಂತ್ರಿಗಳು ಅಭಿನಂದನೆ ಸಲ್ಲಿಸಿದರು.[ಡಾ.ರಾಜ್ ಕುಮಾರ್ ಮತ್ತು 'ರಾಜಕುಮಾರ': ಕಾಕತಾಳೀಯ ಅಂದ್ರೆ ಇದೇ ನೋಡಿ.!]


ನಿನ್ನೆ ದೂರವಾಣಿ ಮೂಲಕ ಮಾತುಕತೆ

ಮೈಸೂರಿನಲ್ಲಿ ಮುಖ್ಯಮಂತ್ರಿಗಳು 'ರಾಜಕುಮಾರ' ಚಿತ್ರ ವೀಕ್ಷಿಸಿರುವ ವಿಚಾರವನ್ನ ಮಾಧ್ಯಮಗಳ ಮೂಲಕ ತಿಳಿದುಕೊಂಡ ಪುನೀತ್ ರವರು ನಿನ್ನೆಯೇ ಸಿದ್ದರಾಮಯ್ಯ ಜೊತೆ ದೂರವಾಣಿ ಮೂಲಕ ಮಾತನ್ನಾಡಿದ್ದರು. ಇಂದು ನೇರವಾಗಿ ಭೇಟಿ ಆಗಿದ್ದಾರೆ.[ವಿಮರ್ಶೆ: ಡಾ'ರಾಜಕುಮಾರ' ಹೆಸರು ಉಳಿಸಿದ ಸಿನಿಮಾ]


ಅಪ್ಪು ಫುಲ್ ಖುಷ್

ಸಿಎಂ ಜೊತೆಗಿನ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಪುನೀತ್, ''ರಾಜಕುಮಾರ' ಸಿನಿಮಾ ನೋಡಿ ಸಿಎಂ ಖುಷಿ ಆಗಿದ್ದಾರೆ. ಚಿತ್ರದಲ್ಲಿ ಇರುವ ಒಳ್ಳೆಯ ಸಂದೇಶ ಅವರಿಗೆ ಇಷ್ಟವಾಗಿದೆ. ಮೊದಲಿನಿಂದಲೂ ನಮ್ಮ ಕುಟುಂಬದ ಬಗ್ಗೆ ಸಿಎಂ ಗೆ ಅಭಿಮಾನ ಇದೆ. ಸಿನಿಮಾ ನೋಡಿದ ಬಳಿಕ ಮುಖ್ಯಮಂತ್ರಿಗಳು ಅಭಿನಂದನೆ ತಿಳಿಸಿದ್ರು. ಇದು ಅವರ ದೊಡ್ಡಗುಣ'' ಎಂದರು.


ಸಿಎಂ ಏನಂದರು.?

''ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಚಿತ್ರ 'ರಾಜಕುಮಾರ'. ಇಂತಹ ಚಿತ್ರಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು'' ಎಂದು 'ರಾಜಕುಮಾರ' ಚಿತ್ರತಂಡವನ್ನು ಅಭಿನಂದಿಸಿದ ಬಳಿಕ ಸಿ.ಎಂ. ಸಿದ್ದರಾಮಯ್ಯ ಹೇಳಿದರು.


ವಿಡಿಯೋ ನೋಡಿ...

ಇಂದು ಬೆಳಗ್ಗೆ ಸಿ.ಎಂ ಸಿದ್ದರಾಮಯ್ಯ ರವರನ್ನ ಪುನೀತ್ ರಾಜ್ ಕುಮಾರ್ ಭೇಟಿ ಮಾಡಿದ ವಿಡಿಯೋ ಇಲ್ಲಿದೆ ನೋಡಿ... ಈ ಲಿಂಕ್ ಕ್ಲಿಕ್ ಮಾಡಿ...


English summary
Power Star Puneeth Rajkumar met Karnataka Chief Minister Siddaramaiah today in Bengaluru. Watch Video.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada