For Quick Alerts
  ALLOW NOTIFICATIONS  
  For Daily Alerts

  ಯಶ್ ಆಸೆ ಈಡೇರಿತು : ಸಂತಸ ಹಂಚಿಕೊಂಡ ರಾಕಿಂಗ್ ಕುಟುಂಬ

  |

  ಡಿಸೆಂಬರ್ ತಿಂಗಳಿನಲ್ಲಿ 'KGF' ಹಾಗೂ YGF (yash going to be father) ಈ ಎರಡು ಮಹತ್ವದ ಸಂಗತಿಗಳಿಗಾಗಿ ಯಶ್ ಕಾತುರದಿಂದ ಕಾಯುತ್ತಿದ್ದರು. ಈಗ ಸಿನಿಮಾಗೆ ಮುಂಚೆ ಯಶ್ ತಂದೆಯ ಪಟ್ಟ ಪಡೆದಿದ್ದಾರೆ.

  ನಟ ಯಶ್ ಹಾಗೂ ರಾಧಿಕಾ ಪಂಡಿತ್ ಜೋಡಿಗೆ ಮುದ್ದಾದ ಹೆಣ್ಣು ಮಗು ಜನಿಸಿದೆ. ಇಂದು ಬೆಳಗ್ಗೆ 6.20ರ ಸುಮಾರಿಗೆ ಬೆಂಗಳೂರಿನ ಬ್ರಿಗೇಡ್ ರಸ್ತೆಯ ಪೋರ್ಟಿಸ್ ಆಸ್ಪತ್ರೆಯಲ್ಲಿ ಮಗುವಿನ ಜನನವಾಗಿದೆ. ಡಿಸೆಂಬರ್ ತಿಂಗಳು ಯಶ್ ಪಾಲಿಗೆ ಲಕ್ಕಿ ಎನ್ನುವುದು ಮತ್ತೆ ಸಾಬೀತಾಗಿದೆ.

  ತಂದೆಯಾದ ಯಶ್ : ಮನೆಗೆ ಬಂದ ಮಹಾಲಕ್ಷ್ಮಿ

  ಪುಟ್ಟ ಕಂದಮ್ಮನ ಆಗಮನದಿಂದ ಯಶ್ ಹಾಗೂ ರಾಧಿಕಾ ಕುಟುಂಬದಲ್ಲಿ ಸಂತಸ ಮೂಡಿದೆ. ಯಶ್ ತಾಯಿ ಪುಷ್ಪ ಹಾಗೂ ತಂಗಿ ನಂದಿನಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ ಮುಂದೆ ಓದಿ...

  ಅಜ್ಜಿಯಾದ ಯಶ್ ತಾಯಿ

  ಅಜ್ಜಿಯಾದ ಯಶ್ ತಾಯಿ

  ''ತುಂಬ ಖುಷಿ ಆಗುತ್ತಿದೆ. ನನ್ನ ಮಗ ಯಶ್ ಅಪ್ಪ ಆಗಿದ್ದಾನೆ. ಮಗು ಮತ್ತು ರಾಧಿಕಾ ಇಬ್ಬರೂ ಆರೋಗ್ಯವಾಗಿ ಇದ್ದಾರೆ. ಯಶ್ ಗೆ ಆಶೀರ್ವಾದ ಮಾಡಿದ ಜನ ಅವನ ಮಗಳಿಗೂ ಆಶೀರ್ವಾದ ಮಾಡಿ ಅಂತ ಕೇಳಿಕೊಳ್ಳುತ್ತಾನೆ.'' ಎಂದು ಯಶ್ ತಾಯಿ ಪುಷ್ಪ ತಮ್ಮ ಖುಷಿ ಹಂಚಿಕೊಂಡಿದ್ದಾರೆ.

  ಸೊಸೆ ಬಗ್ಗೆ ನಂದಿನಿ ಮಾತು

  ಸೊಸೆ ಬಗ್ಗೆ ನಂದಿನಿ ಮಾತು

  ''ನನಗೆ ಗಂಡು ಮಗು ಆಗಿತ್ತು. ಅಣ್ಣನಿಗೆ ಹೆಣ್ಣು ಮಗು ಆಗಿದ್ದು, ಖುಷಿ ನೀಡಿದೆ. ಅಣ್ಣನಿಗೆ ಹೆಣ್ಣು ಮಗು ಅಂದರೆ ತುಂಬ ಇಷ್ಟ ಇತ್ತು. ನಮ್ಮ ತಾಯಿ ಹಾಗೂ ನನಗೂ ಹೆಣ್ಣು ಮಗು ಇಷ್ಟ ಇತ್ತು. ಅದೇ ರೀತಿ ಎಲ್ಲರ ಆಸೆಯಂತೆ ಹೆಣ್ಣು ಮಗುವೇ ಆಗಿದೆ.'' ಎಂದಿದ್ದಾರೆ ಯಶ್ ಸಹೋದರಿ ನಂದಿನಿ.

  ಲಕ್ಕಿ ಸ್ಥಳದಲ್ಲಿ ರಾಧಿಕಾ ಪಂಡಿತ್ ಸೀಮಂತ: ಅಂಬಿ, ಪುನೀತ್ ಭಾಗಿ

  ಸಿಜೇರಿಯನ್ ಮೂಲಕ ಹೆರಿಗೆ

  ಸಿಜೇರಿಯನ್ ಮೂಲಕ ಹೆರಿಗೆ

  ರಾಧಿಕಾ ಪರೀಕ್ಷೆ ಮಾಡಿದ್ದ ಡಾಕ್ಟರ್ ಡಿಸೆಂಬರ್ 9 ಹೆರಿಗೆಗೆ ಡೇಟ್ ನೀಡಿದ್ದರು, ಆದರೆ, ಒಂದು ವಾರದ ಮುಂಚೆಯೇ ಮಗು ಜನಿಸಿದೆ. ಸಿಜೇರಿಯನ್ ಮೂಲಕ ಹೆರಿಗೆ ಮಾಡಲಾಗಿದೆ. ಮಗು 3.5 ಕೆಜಿ ತೂಕ ಇದೆಯಂತೆ. ಯಶ್ ಹಾಗೂ ರಾಧಿಕಾ ಇಬ್ಬರನ್ನು ಮಗು ಹೊಲುತ್ತಿದೆ.

  ಫೋಟೋ ಹಾಗೂ ವಿಡಿಯೋ

  ಯಶ್ - ರಾಧಿಕಾ ದಂಪತಿಯ ಪುಟ್ಟ ಕಂದಮ್ಮನ ವಿಡಿಯೋ ಹಾಗೂ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಯಶ್ ಕುಟುಂಬಕ್ಕೆ ವಿಶ್ ಮಾಡುತ್ತಿದ್ದಾರೆ. ಡಿಸೆಂಬರ್ 2016 ರಲ್ಲಿ ಯಶ್ ರಾಧಿಕಾ ವಿವಾಹ ನಡೆದಿದ್ದು, ಡಿಸೆಂಬರ್ 2019ರಲ್ಲಿಯೇ ಮಗುವಾಗಿದೆ.

  English summary
  watch video : Kannada actress Radeeka Pandith give birth to baby girl.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X