»   » ನಟಿ ಶ್ರದ್ಧಾ ಶ್ರೀನಾಥ್'ಗೆ 'ಅಲಮೇಲಮ್ಮ' ಸಂದರ್ಶನದಲ್ಲಿ ಕಿರಿಕಿರಿ

ನಟಿ ಶ್ರದ್ಧಾ ಶ್ರೀನಾಥ್'ಗೆ 'ಅಲಮೇಲಮ್ಮ' ಸಂದರ್ಶನದಲ್ಲಿ ಕಿರಿಕಿರಿ

Posted By:
Subscribe to Filmibeat Kannada

ನಟಿ ಶ್ರದ್ಧಾ ಶ್ರೀನಾಥ್ ಮತ್ತು ರಿಷಿ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಆಪರೇಷನ್ ಅಲಮೇಲಮ್ಮ' ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಸಿಂಪಲ್ ಸುನಿಯ ಈ ಚಿತ್ರ ಸಿಂಪಲ್ಲಾಗೆ ಇದ್ದರೂ ಹೆಚ್ಚು ಮನರಂಜನೆ ನೀಡುವ ಭರವಸೆ ನೀಡಿದೆ.

ಸದ್ಯ ಚಿತ್ರತಂಡ ಪ್ರಮೋಷನ್ ಕಾರ್ಯದಲ್ಲಿ ತೊಡಗಿಕೊಂಡಿದೆ. ಈ ನಡುವೆ ನಟಿ ಶ್ರದ್ಧಾ ಶ್ರೀನಾಥ್, ಚಿತ್ರದ ನಾಯಕ ನಟ ರಿಷಿ ಮತ್ತು ನಿರ್ದೇಶಕ ಸುನಿ ಒಂದು ಸಂದರ್ಶನಲ್ಲಿ ಭಾಗಿಯಾಗಿದ್ದಾರೆ. ಇದೇ ಸಂದರ್ಶನ ಕಾರ್ಯಕ್ರಮದಲ್ಲಿ ನಟಿಗೆ ಸಖತ್ ಕಿರಿ ಕಿರಿ ಉಂಟಾಗುವ ಹಾಗೆ ಸಂದರ್ಶನ ಕಾರ್ಯಕ್ರಮ ನಡೆದಿದೆ. ಕೇವಲ ನಟಿಗೆ ಮಾತ್ರವಲ್ಲದೇ ನಟನು ಸಹ ಮುಜುಗರಕ್ಕೀಡಾಗುವ ಹಾಗೆ ಸಂದರ್ಶನ ನಡೆದಿದೆ. ಆ ವಿಡಿಯೋ ಈಗ ಯೂಟ್ಯೂಬ್ ನಲ್ಲಿ ಹೆಚ್ಚು ವೀಕ್ಷಣೆ ಪಡೆಯುತ್ತಿದ್ದು, ಇದುವರೆಗೂ 90 ಸಾವಿರಕ್ಕಿಂತ ಹೆಚ್ಚು ಬಾರಿ ನೋಡಲ್ಪಟ್ಟಿದೆ.

Watch Video: Shraddha Srinath and Rishi's Operation Fail Interview

ಆದರೆ ಅದೆಂತಹ ಸಂದರ್ಶನವಿರಬಹುದು? ಕಿರಿಕಿರಿ ಆಗುವ ಹಾಗೆ ಸಂದರ್ಶನ ಮಾಡಿದ ಆ ಪುಣ್ಯಾತ್ಮರು ಯಾರು? ಎಂದು ಏನೇನೋ ಪ್ರಶ್ನೆಗಳನ್ನು ಹಾಕಿಕೊಂಡು ತಲೆಗೆ ಹುಳ ಬಿಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಯಾಕಂದ್ರೆ ಸಿಂಪಲ್ ಸುನಿಯ ಚಿತ್ರಕ್ಕೆ ತಕ್ಕನಾಗಿ ಸಿಂಪಲ್ ಆಗಿಯೇ ಚಿತ್ರದ ಪ್ರಮೋಷನ್‌ ಹಿನ್ನೆಲೆಯಲ್ಲಿ ಔಟ್ ಅಂಡ್ ಜೌಟ್ ಕಾಮಿಡಿ ಆಗಿ ಚಿತ್ರೀಕರಿಸಿರುವ ಸಂದರ್ಶನವಿದು.

Watch Video: Shraddha Srinath and Rishi's Operation Fail Interview

'ಆಪರೇಷನ್ ಫೇಲ್' ಎಂದು ಟೈಟಲ್ ನೀಡಿ ಮನರಂಜನಾತ್ಮಕವಾಗಿ ಮಾಡಿರುವ ಈ ಸಂದರ್ಶನ ಎಷ್ಟೊಂದು ಮಜವಾಗಿದೆ, ಶ್ರದ್ಧಾ ಶ್ರೀನಾಥ್ ಗೆ ಹೇಗೆ ಕಿರಿಕಿರಿ ಉಂಟಾಗಿದೆ. ಇಂಟರ್‌ವ್ಯೂ ಮಾಡಿದವರು ಯಾರು ಅನ್ನೋದನ್ನ ಸಂದರ್ಶನದ ವಿಡಿಯೋ ನೋಡಿಯೇ ತಿಳಿಯಿರಿ. ವಿಡಿಯೋ ನೋಡಲು ಕ್ಲಿಕ್ ಮಾಡಿ

'ಆಪರೇಷನ್ ಅಲಮೇಲಮ್ಮ' ಚಿತ್ರ ಸೆನ್ಸಾರ್ ಮಗಿಸಿ 'ಯು' ಸರ್ಟಿಫಿಕೇಟ್ ಪಡೆದಿದೆ. ಚಿತ್ರ ಜುಲೈ 21 ರಂದು ಗ್ರ್ಯಾಂಡ್ ಆಗಿ ಬಿಡುಗಡೆ ಆಗುತ್ತಿದೆ.

English summary
Watch Video: Shraddha Srinath and Rishi's Operation Fail Interview

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada