For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: ಅದ್ಧೂರಿಯಾಗಿ ನಡೆದ 'ರಮಣ' ಸ್ಕಂದ-ಶಿಕಾ ಮೆಹಂದಿ, ಸಂಗೀತ ಸಮಾರಂಭ

  By Harshitha
  |

  ಸಿನಿ ರಂಗದಲ್ಲಿ ಸದ್ಯ ಮದುವೆ ಸಡಗರ ಜೋರಾಗಿದೆ. ಚಿರಂಜೀವಿ-ಮೇಘನಾ ರಾಜ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಸ್ಯಾಂಡಲ್ ವುಡ್ ನಟ, ಕಿರುತೆರೆಯ ಹ್ಯಾಂಡ್ಸಮ್ ಸ್ಕಂದ ಅಶೋಕ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿ ಖ್ಯಾತಿಯ ಸ್ಕಂದ ಅಶೋಕ್ ಹೊಸ ಜೀವನಕ್ಕೆ ಅಡಿಯಿಡುತ್ತಿದ್ದಾರೆ. ತಮ್ಮ ಬಹುಕಾಲದ ಗೆಳತಿ ಶಿಕಾ ಪ್ರಸಾದ್ ರನ್ನ ರಮಣ್ ಅಲಿಯಾಸ್ ಸ್ಕಂದ ಅಶೋಕ್ ಕೈಹಿಡಿಯುತ್ತಿದ್ದಾರೆ.

  ಮೇ 31 ರಂದು ಸ್ಕಂದ ಅಶೋಕ್-ಶಿಕಾ ಪ್ರಸಾದ್ ವಿವಾಹ ಮಹೋತ್ಸವ ನಡೆಯಲಿದ್ದು, ಅದಾಗಲೇ ಮೆಹಂದಿ ಹಾಗೂ ಸಂಗೀತ ಕಾರ್ಯಕ್ರಮಗಳು ಅದ್ಧೂರಿಯಾಗಿ ನೆರವೇರಿದೆ. ಅದರ ವಿಡಿಯೋಗಳು ಇಲ್ಲಿವೆ, ನೋಡಿರಿ...

  ಗ್ರ್ಯಾಂಡ್ ಆಗಿ ನಡೆದ ಮೆಹಂದಿ ಸಮಾರಂಭ

  ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ನಿನ್ನೆ (ಮೇ 28) ಬೆಳಗ್ಗೆ ಮೆಹಂದಿ ಶಾಸ್ತ್ರ ನೆರವೇರಿದೆ. ಹಸಿರು ಬಣ್ಣದ ಲೆಹೆಂಗಾ ತೊಟ್ಟು ವಧು ಶಿಕಾ ಪ್ರಸಾದ್ ಕಂಗೊಳಿಸಿದ್ರೆ, ಕುರ್ತಾ ಧರಿಸಿ ಸ್ಕಂದ ಅಶೋಕ್ ಮಿಂಚಿದರು.

  ಅತಿಥಿಗಳ ಕೈ ಸೇರಿದ ರಮಣ್ ಮದುವೆ ಆಮಂತ್ರಣ ಪತ್ರಿಕೆಅತಿಥಿಗಳ ಕೈ ಸೇರಿದ ರಮಣ್ ಮದುವೆ ಆಮಂತ್ರಣ ಪತ್ರಿಕೆ

  ಧಾಂ ಧೂಂ ಆಗಿ ನಡೆದ ಸಂಗೀತ ಕಾರ್ಯಕ್ರಮ

  ಮೆಹಂದಿ ಶಾಸ್ತ್ರ ಮುಗಿದ ಬಳಿಕ ನಿನ್ನೆ ಸಂಜೆ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿಯೇ ಸ್ಕಂದ-ಶಿಕಾ ಸಂಗೀತ ಕಾರ್ಯಕ್ರಮ ಧಾಂ ಧೂಂ ಆಗಿ ನಡೆಯಿತು. ಸಂಗೀತ ಕಾರ್ಯಕ್ರಮದಲ್ಲಿ ವಧು-ವರ ಮಸ್ತ್ ಆಗಿ ಡ್ಯಾನ್ಸ್ ಮಾಡಿದರು.

  6 ದಿನಗಳ ಕಾಲ ನಡೆಯಲಿದೆ ರಮಣನ ಕಲ್ಯಾಣ6 ದಿನಗಳ ಕಾಲ ನಡೆಯಲಿದೆ ರಮಣನ ಕಲ್ಯಾಣ

  ತಾರೆಯರ ದಂಡು

  ತಾರೆಯರ ದಂಡು

  ನಿನ್ನೆ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಶ್ವೇತ ಪ್ರಸಾದ್, ಸುಜಾತ ಸೇರಿದಂತೆ ಇಡೀ 'ರಾಧಾ ರಮಣ' ಧಾರಾವಾಹಿಯ ದಂಡೇ ಕುಣಿದು ಕುಪ್ಪಳಿಸಿತು. ಕಿರುತೆರೆ ಲೋಕದ ತಾರೆಯರು ಹಾಗೂ ಸ್ಯಾಂಡಲ್ ವುಡ್ ನಟ-ನಟಿಯರು ಕೂಡ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮೇ 31 ರಂದು ಅರಮನೆ ಮೈದಾನದಲ್ಲಿ ಸ್ಕಂದ-ಶಿಕಾ ವಿವಾಹ ಮಹೋತ್ಸವ ನಡೆಯಲಿದೆ.

  'ರಾಧಾ ರಮಣ' ಧಾರಾವಾಹಿಯ ನಟನಿಗೆ ಕೂಡಿ ಬಂತು ಕಂಕಣಭಾಗ್ಯ'ರಾಧಾ ರಮಣ' ಧಾರಾವಾಹಿಯ ನಟನಿಗೆ ಕೂಡಿ ಬಂತು ಕಂಕಣಭಾಗ್ಯ

  ಸ್ಕಂದ ಅಶೋಕ್ ಕುರಿತು...

  ಸ್ಕಂದ ಅಶೋಕ್ ಕುರಿತು...

  'ರಾಧಾ ರಮಣ' ಧಾರಾವಾಹಿಯಲ್ಲಿ ನಟಿಸುವ ಮುನ್ನ ಕನ್ನಡ, ತೆಲುಗು ಹಾಗೂ ಮಲಯಾಳಂ ಚಿತ್ರಗಳಲ್ಲಿ ಸ್ಕಂದ ಅಶೋಕ್ ಅಭಿನಯಿಸಿದ್ದಾರೆ. ಕನ್ನಡದ 'ಚಾರುಲತಾ' ಚಿತ್ರಕ್ಕೆ ಸ್ಕಂದ ಅವರೇ ಹೀರೋ.

  English summary
  Kannada Actor Skanda Ashok of 'Radha Ramana' fame, is getting married to Shika Prasad. Check out the videos of couple's Mehendi and Sangeet Ceremony.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X