For Quick Alerts
  ALLOW NOTIFICATIONS  
  For Daily Alerts

  ಪೋಲಿ ಹುಡುಗನಾಗಿ ಎಂಟ್ರಿ ಕೊಟ್ಟ ವಿನಯ್ ರಾಜ್

  By Harshitha
  |

  ನಟಸಾರ್ವಭೌಮ, ವರನಟ ಡಾ.ರಾಜ್ ಕುಮಾರ್ ಅಭಿಮಾನಿಗಳು ಕಾಯ್ತಿದ್ದ ಗಳಿಗೆ ಕಡೆಗೂ ಬಂದೇ ಬಿಟ್ಟಿದೆ. ರಾಘಣ್ಣನ ಕನಸು ನನಸಾಗುವ ಕಾಲ ಸಮೀಪದಲ್ಲೇ ಇದೆ. ಅಣ್ಣಾವ್ರ ಕುಟುಂಬದ ಮರಿ ಕುಡಿ ತೆರೆಮೇಲೆ ಮಿಂಚುವುದಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ.

  ಅಣ್ಣಾವ್ರ ಮೊಮ್ಮಗ ವಿನಯ್ ರಾಜ್ ಕುಮಾರ್ ಗಾಂಧಿನಗರಕ್ಕೆ ಕಾಲಿಡುತ್ತಾರೆ ಅನ್ನುವ ಸುದ್ದಿ ಕೇಳಿದಾಗಿನಿಂದಲೂ ಸ್ಯಾಂಡಲ್ ವುಡ್ ನಲ್ಲಿ ಕುತೂಹಲ ಗರಿಗೆದರಿತ್ತು. 'ಸಿದ್ದಾರ್ಥ' ಮುಹೂರ್ತ ಮುಗಿಸಿದ ನಂತರವಂತೂ 'ಸಿದ್ದಾರ್ಥ'ನ ದರ್ಶನ ತೆರೆಮೇಲೆ ಹೇಗಿರಬಹುದು? ಅಂತ ಎಲ್ಲರೂ ಕಾತರದಿಂದ ಕಾಯುತ್ತಲೇ ಇದ್ದರು.

  ಆ ಎಲ್ಲಾ ಕುತೂಹಲ, ಕಾತರಗಳಿಗೆ ಇದೀಗ ಬ್ರೇಕ್ ಬಿದ್ದಿದೆ. ತೆರೆಮೇಲೆ 'ಸಿದ್ದಾರ್ಥ' ಹೇಗೆ? ಅನ್ನುವುದಕ್ಕೆ ಉತ್ತರ ಇಲ್ಲಿದೆ ನೋಡಿ 'ಸಿದ್ದಾರ್ಥ' ಟ್ರೇಲರ್ ನಲ್ಲಿ.

  ಪೋಸ್ಟರ್ ಗಳಲ್ಲಿ ವಿನಯ್ ಗಿಟಾರ್ ಹಿಡಿದುಕೊಂಡು ನಿಂತಾಗಲೇ, 'ಸಿದ್ದಾರ್ಥ' ಮ್ಯೂಸಿಕಲ್ ಸಿನಿಮಾ ಅನ್ನುವ ಕ್ಲೂ ನೀಡಿತ್ತು. ಅದೀಗ ಟ್ರೇಲರ್ ನಲ್ಲಿ ಪಕ್ಕಾ ಆಗಿದೆ. 'ಸಿದ್ದಾರ್ಥ' ಒಳ್ಳೆ ಮ್ಯೂಸಿಶಿಯನ್. ಗಿಟಾರ್ ಬಾರಿಸುವುದರಲ್ಲಿ ಎಕ್ಸ್ ಪರ್ಟ್. ಹಾಡೋದ್ರಲ್ಲಿ, ಮೈಕೇಲ್ ಜಾಕ್ಸನ್ ತರ ಮೂನ್ ವಾಕ್ ಮಾಡುವುದರಲ್ಲಿ 'ಸಿದ್ದಾರ್ಥ'ನನ್ನ ಮೀರಿಸುವವರು ಯಾರೂ ಇಲ್ಲ! [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

  ಇಡೀ ಕಾಲೇಜ್ ನಲ್ಲೇ ಉತ್ತಮ ಗಾಯಕನಾಗಿರುವ 'ಸಿದ್ದಾರ್ಥ' ಪ್ಲೇ ಬಾಯ್ ಕೂಡ ಹೌದು! ಹುಡುಗೀರೆಂದರೆ ಜೊಲ್ಲು ಸುರಿಸುವ 'ಸಿದ್ದಾರ್ಥ' ಲವ್ ಮಾಡೋಕೆ ಲಾಯಕ್ಕಲ್ಲವೇ ಅಲ್ಲ.

  ಹೀಗಿದ್ದರೂ 'ಸಿದ್ದಾರ್ಥ'ನನ್ನೇ ಬಯಸಿ ಬಯಸಿ 'ಖುಷಿ' ದಾಸಿಯಾಗುತ್ತಾಳೆ. ಇಬ್ಬರ ಲವ್ವಿ-ಡವ್ವಿ ಮಧ್ಯೆ ಖೇಡಿಗಳ ಹಲ್ಲುದುರಿಸುವ 'ಸಿದ್ದಾರ್ಥ' ಫೈಟ್ ಗಳಲ್ಲಿ 'ಅಪ್ಪು'ರನ್ನ ನೆನಪಿಸುತ್ತಾರೆ. [ಪಾರ್ವತಮ್ಮ ಅವರಿಗೆ ಮೊಮ್ಮಗನ ಪ್ರೀತಿಯ ಉಡುಗೊರೆ]

  ಇದಿಷ್ಟು 'ಸಿದ್ದಾರ್ಥ'ನ ಬಗ್ಗೆ ಟ್ರೇಲರ್ ನಲ್ಲಿ ಸಿಕ್ಕಿರುವ ಡೀಪ್ ಇಂಟ್ರಡಕ್ಷನ್. ಮೊದಲ ನೋಟಕ್ಕೆ ಪೋಲಿ ಹುಡುಗ-ಮುದ್ದು ಹುಡುಗಿಯ ಕಾಲೇಜ್ ಲವ್ ಸ್ಟೋರಿಯಂತೆ ಕಾಣುವ 'ಸಿದ್ದಾರ್ಥ'ನಿಗೆ ಆಕ್ಷನ್ ಕಟ್ ಹೇಳಿರುವುದು 'ಮಿಲನ' ಪ್ರಕಾಶ್.

  'ಸಿದ್ದಾರ್ಥ'ನಂತಹ ಫ್ರೆಶ್ ಲವ್ ಸ್ಟೋರಿಯಲ್ಲಿ ಸ್ನೇಹ ಮತ್ತು ಪ್ರೀತಿಗೆ ಪ್ರಾಮುಖ್ಯತೆ ಇದೆ. 'ಸಿದ್ದಾರ್ಥ'ನ ಗೆಳೆಯರ ಬಳಗದಲ್ಲಿ ನಯನ ಇದ್ರೆ, ಅವನ ಹುಡುಗೀರ್ ಲಿಸ್ಟಲ್ಲಿ ಅಪೂರ್ವ, ದೀಪಿಕಾ ದಾಸ್, ನಿಕ್ಕಿ ಗಲ್ರಾನಿ ಇದ್ದಾರೆ. [ಬಿಡುಗಡೆಗೆ ಮುನ್ನವೇ ದಾಖಲೆ ಬರೆದ 'ಸಿದ್ದಾರ್ಥ']

  ''ಯಾವುದೇ ಆಂಗಲ್ ನಿಂದಲೂ ಬುದ್ಧ ಅಲ್ಲದ ಈ ಸಿದ್ದಾರ್ಥ'' ಟ್ರೇಲರ್ ನಲ್ಲಿ ಎಲ್ಲರ ತಲೆಗೆ ಮತ್ತಷ್ಟು ಹುಳಬಿಟ್ಟಿದ್ದಾನೆ. ಟ್ರೇಲರ್ ನಲ್ಲಿ 'ಸಿದ್ದಾರ್ಥ' ನ ಗೆಟಪ್ ನೋಡಿದ್ಮೇಲೆ ರಾಜವಂಶದ ಕುಡಿಗೆ ಬ್ರೇಕ್ ಸಿಗುವುದು ಪಕ್ಕಾ ಅನ್ನೋದು ಗಾಂಧಿನಗರದ ಲೆಕ್ಕಾಚಾರ. ಅದು ಖಾತ್ರಿಯಾಗುವುದು ಮುಂದಿನ ವರ್ಷ! (ಫಿಲ್ಮಿಬೀಟ್ ಕನ್ನಡ)

  English summary
  Raghavendra Rajkumar's son Vinay Rajkumar starrer 'Siddhartha' trailer is out. Watch the Dashing look of Vinay Rajkumar in the trailer. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X