»   » ಭಾರತೀಯ ಸೈನಿಕರ ಪರ ಟ್ವಿಟ್ಟರ್ ನಲ್ಲಿ ಕಹಳೆ ಊದಿದ ಉಪೇಂದ್ರ.!

ಭಾರತೀಯ ಸೈನಿಕರ ಪರ ಟ್ವಿಟ್ಟರ್ ನಲ್ಲಿ ಕಹಳೆ ಊದಿದ ಉಪೇಂದ್ರ.!

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ... ಕೇವಲ ನಟ ಮಾತ್ರ ಅಲ್ಲ. ಅವರೊಳಗಡೆ ಸಾಮಾಜಿಕ ಕಳಕಳಿ ಹೊಂದಿರುವ ಓರ್ವ ಉತ್ತಮ ಪ್ರಜೆ ಇದ್ದಾನೆ. ಭ್ರಷ್ಟ ವ್ಯವಸ್ಥೆ ವಿರುದ್ಧ ದನಿ ಎತ್ತುವ ಒಬ್ಬ ಹೋರಾಟಗಾರ ಇದ್ದಾನೆ.

ಸಮಾಜದ ಬಗ್ಗೆ ಅವರಿಗೆ ಇರುವ ಕಾಳಜಿಯನ್ನ ತಮ್ಮ ಸಿನಿಮಾಗಳ ಮೂಲಕ ಉಪೇಂದ್ರ ಹೊರತರುತ್ತಲಿರುತ್ತಾರೆ. ಅದಕ್ಕೆ 'ಸೂಪರ್', 'H20', 'ಉಪೇಂದ್ರ', 'ಎ', 'ಉಪ್ಪಿ-2' ಸಿನಿಮಾಗಳೇ ಸಾಕ್ಷಿ.

ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ: ಉಪೇಂದ್ರ ಕೊಟ್ಟ ಸೂಪರ್ ಸುಪ್ರೀಂ ಐಡಿಯಾ!

ಕಾವೇರಿ ವಿವಾದ, ನೋಟ್ ಬ್ಯಾನ್ ಸೇರಿದಂತೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೊರಹಾಕುತ್ತಲೇ ಬಂದಿರುವ ಉಪೇಂದ್ರ ಇದೀಗ ಭಾರತದ ಗಡಿಯಲ್ಲಿ ಸೃಷ್ಟಿಯಾಗುತ್ತಿರುವ ಯುದ್ಧ ವಾತಾವರಣದ ಕುರಿತು ಟ್ವಿಟ್ಟರ್ ನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿರಿ...

ಸೈನಿಕರ ಬಗ್ಗೆ ಯೋಚಿಸಿ....

''ಸಣ್ಣ ಪುಟ್ಟ ವಿಷಯಗಳ ಬಗ್ಗೆ ಜನರು ದೇಶದ ಒಳಗೆ ಕಿತ್ತಾಡುತ್ತಿದ್ದರೆ, ಅತ್ತ ಸೈನಿಕರು ಸಿಕ್ಕಿಂ ಗಡಿಯಲ್ಲಿ ಚೀನಾ ಕಡೆಯಿಂದ ಯುದ್ಧದ ಅಪಾಯ ಎದುರಿಸುತ್ತಿದ್ದಾರೆ'' ಎಂದು ನಟ ಉಪೇಂದ್ರ ಟ್ವೀಟ್ ಮಾಡಿದ್ದಾರೆ.

GST ಬಗ್ಗೆ ರಿಯಲ್ ಸ್ಟಾರ್ ಉಪ್ಪಿ ಹೇಳಿದ್ದೇನು?

ಇಸ್ರೇಲ್ ನಿಂದ ಕಲಿಯಿರಿ...

''ಇಸ್ರೇಲ್ ನಿಂದ ನಾವು ಕಲಿಯುವುದು ಬೇಕಾದಷ್ಟಿದೆ'' ಎಂದು ಮಾರ್ಮಿಕವಾಗಿ ನಟ ಉಪೇಂದ್ರ ಟ್ವೀಟಿಸಿದ್ದಾರೆ.

ಆಳುವುದಕ್ಕೆ ಲಾಯಕ್ಕಲ್ಲ.!

ದೇಶದ ವ್ಯವಸ್ಥೆ ಬಗ್ಗೆ ಅಸಮಾಧಾನಗೊಂಡಿರುವ ಉಪೇಂದ್ರ, ''ನಾವು ಆಳಿಸಿಕೊಳ್ಳುವುದಕ್ಕೆ ಲಾಯಕ್ಕು. ಆಳುವುದಕ್ಕೆ ಅಲ್ಲ'' ಎಂದಿದ್ದಾರೆ.

'ಬಂದ್'ಗೆ ಹೆಸರುವಾಸಿ

''ಹೇಗಿದ್ದರೂ ನಾವು 'ಬಂದ್'ಗಳಿಗೆ ಹೆಸರುವಾಸಿ. ಹೀಗಿರುವಾಗ, ಬೃಹತ್ ಸಂಖ್ಯೆಯಲ್ಲಿ ಬೀದಿಗಳಿದು ಸೈನಿಕರಿಗೆ ನಮ್ಮ ಬೆಂಬಲ ಸೂಚಿಸಲು, ಚೀನಾಗೆ ವಾರ್ನ್ ಮಾಡಲು ನಾವು 'ಭಾರತ್ ಬಂದ್' ಯಾಕೆ ಮಾಡಬಾರದು'' ಅಂತ ಉಪೇಂದ್ರ ನುಡಿದಿದ್ದಾರೆ.

English summary
''We are fit to be ruled, Not to rule'' tweets Upendra regarding Threat of War from China in Sikkim border.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada