twitter
    For Quick Alerts
    ALLOW NOTIFICATIONS  
    For Daily Alerts

    ಅವರ ರೀತಿ ನನ್ನನ್ನು ಯಾರೂ ಹುರಿದುಂಬಿಸಲಿಲ್ಲ, ನನ್ನ ಕಬ್ಜ ಚಿತ್ರ ಅವರಿಗೆ ಅರ್ಪಣೆ ಎಂದ ಆರ್ ಚಂದ್ರು

    |

    ಪ್ಯಾನ್ ಇಂಡಿಯಾ ಟ್ರೆಂಡ್ ಸದ್ಯ ಸಿನಿಮಾ ಕ್ಷೇತ್ರವನ್ನು ರೂಲ್ ಮಾಡ್ತಿದೆ. ದೊಡ್ಡ ಸ್ಟಾರ್ ಎಂದರೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರವನ್ನು ನಿರ್ಮಿಸಲೇಬೇಕಾದ ಅನಿವಾರ್ಯತೆ, ಬೇಡಿಕೆ ಉಂಟಾಗಿದೆ. ಇನ್ನು ಕಂಟೆಂಟ್ ಇರುವ ಚಿತ್ರಗಳು ಮಾತ್ರ ಪ್ಯಾನ್ ಇಂಡಿಯಾ ಬಿಡುಗಡೆಯಾಗಲು ಅರ್ಹತೆ ಹೊಂದಿದ್ದು, ಕಥೆಯನ್ನು ಪರಭಾಷಾ ಸಿನಿ ರಸಿಕರೂ ಸಹ ಮೆಚ್ಚಿಕೊಂಡು ಚಿತ್ರಕ್ಕೆ ಹಿಟ್ ಟಾಕ್ ಬಂದರೆ ಒಳ್ಳೆಯ ಕಲೆಕ್ಷನ್ ಫಿಕ್ಸ್.

    ಇನ್ನು ಕನ್ನಡ ಚಿತ್ರರಂಗದ ನಟರು, ನಿರ್ದೇಶಕರು ಹಾಗೂ ನಿರ್ಮಾಪಕರೂ ಸಹ ಇದೇ ಯೋಜನೆಯಲ್ಲಿದ್ದು, ಪ್ಯಾನ್ ಇಂಡಿಯಾ ಚಿತ್ರಗಳನ್ನು ಮಾಡಿ ಖ್ಯಾತಿ ಗಳಿಸಬೇಕು, ಹಣ ಗಳಿಸಬೇಕು ಎಂಬ ಉದ್ದೇಶದಿಂದ ರೇಸ್‌ಗೆ ಇಳಿದಿದ್ದಾರೆ. ಇನ್ನು ಕನ್ನಡದ ಕೆಜಿಎಫ್ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಬ್ಬರಿಸುವುದರ ಮೂಲಕ ಕನ್ನಡ ಚಿತ್ರಗಳಿಗೆ ಪರಭಾಷೆಯಲ್ಲಿ ಮಾರ್ಕೆಟ್ ಸೃಷ್ಟಿಸಿದ್ದು, ಈ ಚಿತ್ರದ ಬಳಿಕ ಕನ್ನಡದ ಹಲವಾರು ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಗೆದ್ದು ಬೀಗಿವೆ.

    ಇನ್ನು ಕೆಜಿಎಫ್ ಚಿತ್ರವನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರವನ್ನು ಮಾಡಬೇಕು ಎಂದು ಮುಂದೆ ಬಂದ ಚಿತ್ರತಂಡಗಳ ಪೈಕಿ ಆರ್ ಚಂದ್ರು ನಿರ್ದೇಶನದ ಕಬ್ಜ ಸಹ ಒಂದು. ಉಪೇಂದ್ರ ಹಾಗೂ ಸುದೀಪ್ ನಟಿಸಿರುವ ಈ ಚಿತ್ರ ಇದೇ ಮಾರ್ಚ್ 17ರಂದು ಬಿಡುಗಡೆಯಾಗಲಿದ್ದು, ಚಿತ್ರತಂಡ ಚಿತ್ರದ ಪ್ರಚಾರದ ಕಾರ್ಯವನ್ನು ಈಗಾಗಲೇ ಆರಂಭಿಸಿದೆ. ನಿರ್ದೇಶಕ ಆರ್ ಚಂದ್ರು ನಿನ್ನೆ ( ಜನವರಿ 31 ) ಸುದ್ದಿಗೋಷ್ಠಿಯೊಂದನ್ನು ನಡೆಸಿ ಚಿತ್ರದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡು ಚಿತ್ರವನ್ನು ತನ್ನನ್ನು ಹುರಿದುಂಬಿಸಿದ ವ್ಯಕ್ತಿಗೆ ಅರ್ಪಿಸುತ್ತಿದ್ದೇನೆ ಎಂಬ ವಿಷಯವನ್ನು ತಿಳಿಸಿದರು.

    ಪುನೀತ್ ರಾಜ್‌ಕುಮಾರ್‌ಗೆ ಕಬ್ಜ ಅರ್ಪಣೆ

    ಪುನೀತ್ ರಾಜ್‌ಕುಮಾರ್‌ಗೆ ಕಬ್ಜ ಅರ್ಪಣೆ

    ಪುನೀತ್ ರಾಜ್‌ಕುಮಾರ್ ನಿಧನ ಹೊಂದಿದ ಬಳಿಕ ಬಿಡುಗಡೆಗೊಂಡ ಬಿಡುಗಡೆಗೊಂಡ ಬಹುತೇಕ ಎಲ್ಲಾ ಚಿತ್ರಗಳು ಸಹ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಆರಂಭಗೊಂಡಿವೆ. ಹಲವು ನಿರ್ದೇಶಕರು ತಮ್ಮ ಚಿತ್ರಗಳನ್ನು ಪುನೀತ್ ರಾಜ್‌ಕುಮಾರ್ ಅವರಿಗೆ ಅರ್ಪಿಸಿದ್ದಾರೆ. ಅದರಲ್ಲೂ ಕನ್ನಡ ಚಲಚಿತ್ರರಂಗದ ಕೀರ್ತಿ ಪತಾಕೆಯನ್ನು ಹಾರಿಸಿದ ಚಿತ್ರಗಳಾದ ಕೆಜಿಎಫ್ ಹಾಗೂ ಕಾಂತಾರ ಚಿತ್ರಗಳನ್ನೂ ಸಹ ಅವುಗಳ ನಿರ್ದೇಶಕರು ಪುನೀತ್‌ ರಾಜ್‌ಕುಮಾರ್ ಅವರಿಗೆ ಅರ್ಪಿಸಿದ್ದರು. ಈ ಸಾಲಿಗೆ ಇದೀಗ ನಿರ್ದೇಶಕ ಆರ್ ಚಂದ್ರು ಸಹ ಸೇರಿಕೊಂಡಿದ್ದು, ತಮ್ಮ ಕಬ್ಜ ಚಿತ್ರವನ್ನು ಪುನೀತ್ ರಾಜ್‌ಕುಮಾರ್ ಅವರಿಗೆ ಅರ್ಪಿಸುವುದಾಗಿ ಹೇಳಿಕೆ ನೀಡಿದ್ದಾರೆ.

    ಚಂದ್ರು ಹೇಳಿದ್ದಿಷ್ಟು

    ಚಂದ್ರು ಹೇಳಿದ್ದಿಷ್ಟು

    ಸುದ್ದಿಗೋಷ್ಟಿಯಲ್ಲಿ ಪುನೀತ್ ರಾಜ್‌ಕುಮಾರ್ ಬಗ್ಗೆ ಮಾತನಾಡಿದ ಚಂದ್ರು" ಅಪ್ಪು ಸರ್ ಸುಮಾರು ಬಾರಿ ಸೆಟ್‌ಗೆ ಬಂದಿದ್ದಾರೆ. ಅವರು ನನ್ನ ಬಗ್ಗೆನೇ ಕಾಳಜಿ ತಗೊಳ್ತಾ ಇದ್ದಿದ್ದು. ಏನೋ ಇಷ್ಟೊಂದು ಖರ್ಚು ಮಾಡ್ತಾ ಇದ್ದೀಯಾ, ಹೆಂಗೋ ರಿಕವರಿ ಮಾಡ್ತೀಯಾ, ಯಾವಾಗ ಬಂದ್ರೂ ಹೆಗಲ ಮೇಲೆ ಕೈಹಾಕಿ ಸೈಡ್‌ಗೆ ಕರೆದುಕೊಂಡು ಹೋಗಿ ಹುಷಾರಾಗಿ ಮಾಡಪ್ಪ, ಇಷ್ಟು ಜನ, ಇಂಥ ಸೆಟ್ ಅಂತ ತುಂಬಾ ಎಕ್ಸೈಟ್ ಆಗಿ ಮಾತನಾಡುತ್ತಿದ್ದರು. ನನ್ನನ್ನು ಹುರಿದುಂಬಿಸುತ್ತಾ ಇದ್ರು" ಎಂದು ಹೇಳಿಕೆ ನೀಡಿದರು.

    ತಾವೇ ಪ್ರಮೋಷನ್ ಮಾಡಲು ಮುಂದಾಗಿದ್ರು

    ತಾವೇ ಪ್ರಮೋಷನ್ ಮಾಡಲು ಮುಂದಾಗಿದ್ರು

    ಇನ್ನೂ ಮುಂದುವರಿದು ಮಾತನಾಡಿದ ಚಂದ್ರು ಅಪ್ಪು ಸರ್ ನಿಧನ ಹೊಂದುವ ವಾರದ ಹಿಂದೆ ತನಗೆ ಕರೆ ಮಾಡಿ ಚಿತ್ರದ ಮೋಷನ್ ಪೋಸ್ಟರ್ ಬಗ್ಗೆ ಕೊಂಡಾಡಿದ್ರು ಎಂದು ಹೇಳಿದರು. ಅಷ್ಟೇ ಅಲ್ಲದೇ ತಲೆ ಕೆಡಿಸಿಕೊಳ್ಳಬೇಡ, ಪ್ರಮೋಷನ್‌ಗೆ ನಾನೇ ಜೊತೆ ಇರುತ್ತೇನೆ, ಟೀಸರ್ ನಾನೇ ಬಿಡುಗಡೆ ಮಾಡುತ್ತೇನೆ ಎಂದಿದ್ದರು, ಆದರೆ ಈ ದಿನ ಅವರು ಇಲ್ಲ, ಹೀಗಾಗಿ ಈ ಚಿತ್ರವನ್ನು ಅವರಿಗೆ ಅರ್ಪಿಸುತ್ತಿದ್ದೇನೆ, ನಮ್ಮ ಚಿತ್ರದಲ್ಲಿ ನಟಿಸಿದಿದ್ದರೂ ಚಿತ್ರದ ಕ್ವಾಲಿಟಿ ಹಾಗೂ ಕಂಟೆಂಟ್ ನೋಡಿ ಮೆಚ್ಚಿಕೊಂಡು ಬೆನ್ನು ತಟ್ಟಿದ್ರು, ಅವರ ರೀತಿ ನನ್ನನ್ನು ಯಾರೂ ಸಹ ಹುರಿದುಂಬಿಸಿಲ್ಲ, ಹೀಗಾಗಿ ಅವರ ಹುಟ್ಟುಹಬ್ಬದ ದಿನವೇ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದು, ಅದರ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಚಂದ್ರು ತಿಳಿಸಿದರು.

    English summary
    We are proud to dedicate Kabzaa film to Puneeth Rajkumar says R Chandru. Read on
    Wednesday, February 1, 2023, 11:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X