For Quick Alerts
  ALLOW NOTIFICATIONS  
  For Daily Alerts

  ವೀರಗಾಸೆಗೆ ಅಪಮಾನ ಮಾಡಿಲ್ಲ ಎಂದ ಧನಂಜಯ್: ಅಂಥಹದ್ದೇನಿದೆ 'ಹೆಡ್ ಬುಷ್'ನಲ್ಲಿ!

  |

  ಧನಂಜಯ್ ನಟನೆಯ 'ಹೆಡ್-ಬುಷ್' ಸಿನಿಮಾ ಕಳೆದ ವಾರ ಬಿಡುಗಡೆ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಸಹ ಸಿನಿಮಾದ ಕಲೆಕ್ಷನ್ ಗಮನಾರ್ಹವಾಗಿಯೇ ಇದೆ.

  ಸಿನಿಮಾದ ಬಗ್ಗೆ ವ್ಯಕ್ತವಾಗಿರುವ ಋಣಾತ್ಮಕ ವಿಮರ್ಶೆಗಳ ಬಗ್ಗೆ ಈಗಾಗಲೇ ನಟ ಹಾಗೂ ಸಿನಿಮಾದ ನಿರ್ಮಾಪಕರೂ ಆಗಿರುವ ಡಾಲಿ ಧನಂಜಯ್ ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗ ಅವರನ್ನು ಇನ್ನಷ್ಟು ಚಿಂತೆಗೀಡು ಮಾಡುವಂತೆ, ಸಿನಿಮಾದಲ್ಲಿ ಸಮುದಾಯವೊಂದಕ್ಕೆ ಅಪಮಾನ ಎಸಗಿರುವ ಆರೋಪ ಹೊರಿಸಲಾಗುತ್ತಿದೆ.

  'ಹೆಡ್ ಬುಷ್' ಸಿನಿಮಾದಲ್ಲಿ ವೀರಗಾಸೆಗೆ ಅಪಮಾನ ಎಸಗುವ ದೃಶ್ಯಗಳಿವೆ ಎಂದು ಕೆಲವರು ಆರೋಪ ಮಾಡಿದ್ದಾರೆ. ಸಿನಿಮಾದ ಫೈಟ್ ದೃಶ್ಯವೊಂದರಲ್ಲಿ, ವೀರಗಾಸೆ ನೃತ್ಯ ಮಾಡುವ ಕಲಾವಿದರೊಟ್ಟಿಗೆ ನಾಯಕ ಡಾಲಿ ಧನಂಜಯ್ ಫೈಟ್ ಮಾಡಿದ್ದು, ವೀರಗಾಸೆ ವೇಷದಲ್ಲಿರುವವರನ್ನು ಕುಟ್ಟಿ ಕೆಡವುತ್ತಾರೆ, ಈ ದೃಶ್ಯದ ಬಗ್ಗೆ ಅಲ್ಲಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ಆರೋಪಗಳಿಗೆ ಸ್ಪಷ್ಟನೆ ನೀಡಿರುವ ನಟ, ನಿರ್ಮಾಪಕ ಡಾಲಿ ಧನಂಜಯ್, ''ನಾನು ಸ್ವತಃ ವೀರಭದ್ರಸ್ವಾಮಿಯ ಭಕ್ತನಾಗಿದ್ದು, ವೀರಗಾಸಗೆ ಅವಮಾನಿಸುವ ಯಾವ ಅಂಶವು ಇಲ್ಲದಂತೆ ನೋಡಿಕೆೊಂಡಿದ್ದೇನೆ. ದೂಷಿಸುವವರು ದಯವಿಟ್ಟು ಸಿನಿಮಾ ನೋಡಿ ಕೂಲಂಕುಶವಾಗಿ ವಿಮರ್ಶಿಸಬೇಕಾಗಿ ಕೇಳಿಕೊಳ್ಳುತ್ತೇನೆ'' ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

  ವೀರಗಾಸೆ ಕಲೆಯ ನೋಡುತ್ತಾ ಬೆಳೆದವನು: ಧನಂಜಯ್

  ವೀರಗಾಸೆ ಕಲೆಯ ನೋಡುತ್ತಾ ಬೆಳೆದವನು: ಧನಂಜಯ್

  ಮಾಧ್ಯಮದ ಸಂದರ್ಶನವೊಂದರಲ್ಲಿ ಇದೇ ವಿಷಯವಾಗಿ ಮಾತನಾಡಿರುವ ನಟ ಧನಂಜಯ್, ''ನಾನು ವೀರಗಾಸೆ ಕಲೆಯನ್ನು ಸಣ್ಣ ವಯಸ್ಸಿನಿಂದಲೂ ನೋಡಿಕೊಂಡು ಬಂದವನು. ನಾನು ಆ ಕಲೆಗೆ ಅವಮಾನ ಮಾಡಿಲ್ಲ. ಸಿನಿಮಾದಲ್ಲಿ ಸಹ ವೀರಗಾಸೆ ವೇಷದಲ್ಲಿರುವ ಕೆಲವರು ಜಯರಾಜ್ ಪಾತ್ರದಾರಿಯ ಮೇಲೆ ದಾಳಿ ಮಾಡಲು ಬಂದಾಗ, ನಿಜವಾದ ವೀರಗಾಸೆಯವರು ಹಿಂದೆ ಹೋಗಿ, ದುಷ್ಟರು ಮಾತ್ರ ಮುಂದೆ ಬಂದು ಜಯರಾಜ್ ಮೇಲೆ ದಾಳಿ ಮಾಡುವ ದೃಶ್ಯವಿದೆ'' ಎಂದಿದ್ದಾರೆ.

  ವೀರಗಾಸೆಯವರು ಶೂ, ಚಪ್ಪಲಿ ಧರಿಸುವುದಿಲ್ಲ: ಧನಂಜಯ್

  ವೀರಗಾಸೆಯವರು ಶೂ, ಚಪ್ಪಲಿ ಧರಿಸುವುದಿಲ್ಲ: ಧನಂಜಯ್

  ''ವೀರಗಾಸೆಯವರು ಶೂ ಅಥವಾ ಚಪ್ಪಲಿಗಳನ್ನು ಧರಿಸುವುದಿಲ್ಲ, ಆದರೆ ಸಿನಿಮಾದಲ್ಲಿ ಜಯರಾಜ್ ಅನ್ನು ಅಟ್ಯಾಕ್ ಮಾಡಲು ಬಂದವರು ಶೂ ಹಾಕಿರುತ್ತಾರೆ, ಜಯರಾಜ್ ಪಾತ್ರಧಾರಿ ಅದನ್ನು ಗಮನಿಸಿ, ವೀರಗಾಸೆಯವರ ವೇಷದಲ್ಲಿ ಬಂದ ಇವರು ದುರುಳರು ಎಂದು ಎಣಿಸಿಯೇ ಅವರ ಮೇಲೆ ದಾಳಿ ಮಾಡುತ್ತಾನೆ. ಹಾಗಾಗಿ ಸಿನಿಮಾದಲ್ಲಿ ಸಹ ಜಯರಾಜ್ ಪಾತ್ರಧಾರಿ ಹೊಡೆಯುತ್ತಿರುವುದು ವೀರಗಾಸೆಯವರನ್ನಲ್ಲ ಬದಲಿಗೆ ಆ ವೇಷ ಧರಿಸಿ ಬಂದ ಕೆಲವು ದುಷ್ಟರನ್ನು'' ಎಂದು ಸ್ಪಷ್ಟನೆ ನೀಡಿದ್ದಾರೆ ಧನಂಜಯ್.

  ಅವಮಾನ ಮಾಡಿದವರಿಗೆ ಜಯರಾಜ್ ಹೊಡೆಯುತ್ತಾನೆ: ಧನಂಜಯ್

  ಅವಮಾನ ಮಾಡಿದವರಿಗೆ ಜಯರಾಜ್ ಹೊಡೆಯುತ್ತಾನೆ: ಧನಂಜಯ್

  ''ಒಟ್ಟಾರೆಯಾಗಿ ನೋಡುವುದಾದರೆ, ವೀರಗಾಸೆಗೆ ಅವಮಾನ ಮಾಡುತ್ತಿರುವವರಿಗೆ ಜಯರಾಜ್ ಹೊಡೆಯುತ್ತಿರುವುದೇ ವಿನಃ ವೀರಗಾಸೆಯವರಿಗೆ ಅಲ್ಲ. ಆ ಫೈಟ್ ದೃಶ್ಯದಲ್ಲಿ ನಿಜವಾದ ವೀರಗಾಸೆಯವರು ಹಿಂದೆ ನಿಂತಿರುತ್ತಾರೆ ಆದರೆ ನಕಲಿ ವೀರಗಾಸೆಯವರ ಮೇಲೆ ಜಯರಾಜ್ ಪಾತ್ರಧಾರಿ ಫೈಟ್ ಮಾಡುತ್ತಿರುತ್ತಾನೆ. ಅದನ್ನು ನಾವು ಸ್ಪಷ್ಟವಾಗಿ ತೋರಿಸಿದ್ದೀವಿ. ಈ ಫೈಟ್ ದೃಶ್ಯ ಕಂಪೋಸ್ ಮಾಡುವ ಮುನ್ನ ಸಾಕಷ್ಟು ಚರ್ಚೆ ಮಾಡಿಯೇ ಈ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿದೆ. ನಮ್ಮ ನಾಡಿನ ಕಲೆಗಳನ್ನು ಇಟ್ಟುಕೊಂಡು ಕೆಟ್ಟದಾಗಿ ಏನೇನೋ ಮಾಡಲು ಸಾಧ್ಯವಿಲ್ಲ'' ಎಂದಿದ್ದಾರೆ ಧನಂಜಯ್.

  ಸಿನಿಮಾದಲ್ಲಿರುವ ದೃಶ್ಯ ಹೇಗಿದೆ

  ಸಿನಿಮಾದಲ್ಲಿರುವ ದೃಶ್ಯ ಹೇಗಿದೆ

  ಸಿನಿಮಾದ ದೃಶ್ಯವೊಂದರಲ್ಲಿ ಜಯರಾಜ್ ಪಾತ್ರಧಾರಿ ಧನಂಜಯ್ ಮೇಲೆ ಕರಗದ ಸಂದರ್ಭದಲ್ಲಿ ವೀರಗಾಸೆ ವೇಷ ಧರಿಸಿದ ಕೆಲವರು ದಾಳಿ ಮಾಡುತ್ತಾರೆ. ಆಗ ಜಯರಾಜ್, ತನ್ನ ಮೇಲೆ ದಾಳಿ ಮಾಡಿದವರ ಮೇಲೆ ಫೈಟ್ ಮಾಡುತ್ತಾನೆ. ಜಯರಾಜ್ ಮೇಲೆ ದಾಳಿ ಮಾಡಿದ ದುರುಳರು ವೀರಗಾಸೆ ವೇಷ ತೊಟ್ಟಿರುತ್ತಾರೆ ಆದರೆ ಅವರು ಶೂಗಳನ್ನು ಧರಿಸಿರುವುದನ್ನು ಜಯರಾಜ್ ಗಮನಿಸಿಯೇ ಅವರನ್ನು ಗುರುತಿಸಿ ಅವರನ್ನು ಹೊಡೆದು ಕೆಡವುತ್ತಾನೆ. ಫೈಟ್ ಶುರುವಾಗುತ್ತಿದ್ದಂತೆ ನಿಜವಾದ ವೀರಗಾಸೆಯವರು ಹಿಂದೆ ಹೋಗುವ, ಜಯರಾಜ್‌ ಮೇಲೆ ದಾಳಿ ಮಾಡಲು ಬಂದ ನಕಲಿ ವೇಷಧಾರಿಗಳು ಮುಂದೆ ಬರುವ ದೃಶ್ಯವನ್ನೂ ಸಹ ತೋರಿಸಲಾಗಿದೆ.

  English summary
  Actor and producer Daali Dhananjay said we did not insult Veeragase culture in Head Bush movie. He said we discussed then only with care we shoot the movie.
  Wednesday, October 26, 2022, 10:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X