twitter
    For Quick Alerts
    ALLOW NOTIFICATIONS  
    For Daily Alerts

    ಅಪ್ಪು ಸಾವಿನ ಸುದ್ದಿಯನ್ನು ಎಷ್ಟು ಗಂಟೆ ತಡವಾಗಿ ಬಿಚ್ಚಿಟ್ರು? ಮುಚ್ಚಿಡೋಣ ಎಂದು ಹೇಳಿದ್ಯಾರು? ಸತ್ಯಾಂಶ ಬಹಿರಂಗ

    |

    ಸರಿಯಾಗಿ ವರ್ಷದ ಹಿಂದೆ ಈ ದಿನ ( ಅಕ್ಟೋಬರ್ 29 ) ಈ ಸಮಯಕ್ಕೆ ಪ್ರತಿಯೊಬ್ಬ ಕನ್ನಡಿಗನೂ ಸಹ ಎಂದಿನಂತೆ ತನ್ನ ದಿನವನ್ನು ದೂಡಲಾಗುತ್ತಿರಲಿಲ್ಲ. ಕಾರಣ ಕನ್ನಡ ಚಿತ್ರರಂಗದ ಫ್ಯಾಮಿಲಿ ಪ್ರೇಕ್ಷಕರ ಡಾರ್ಲಿಂಗ್ ಪುನೀತ್ ರಾಜ್ ಕುಮಾರ್ ಇನ್ನಿಲ್ಲ ಎಂಬ ಸುದ್ದಿ ಕಿವಿಗೆ ಬಡಿದು ಎದೆಗೆ ನೋವುಂಟು ಮಾಡಿತ್ತು.

    ಎಂದಿನಂತೆ ಮುಂಜಾನೆ ಎದ್ದು ತನ್ನ ಪಾಲಿನ ವರ್ಕ್ ಔಟ್ ಮುಗಿಸಿದ್ದ ಪುನೀತ್ ರಾಜ್ ಕುಮಾರ್ ಅವರಿಗೆ ತುಸು ಎದೆನೋವು ಕಾಣಿಸಿಕೊಂಡಿತ್ತು. ಇದನ್ನು ನಿರ್ಲಕ್ಷಿಸದೆ ಪುನೀತ್ ರಾಜ್ ಕುಮಾರ್ ತಮ್ಮ ಮನೆಯ ಪಕ್ಕದಲ್ಲಿಯೇ ಇದ್ದ ವೈದ್ಯರನ್ನು ಭೇಟಿ ಮಾಡಿದ್ದರು. ಅಪ್ಪು ತೀವ್ರವಾಗಿ ಬೆವರುತ್ತಿದ್ದನ್ನು ಕಂಡ ವೈದ್ಯ ರಮಣ ರಾವ್ ಇಸಿಜಿ ನಡೆಸಿ ಶೀಘ್ರವೇ ಪುನೀತ್ ಅವರನ್ನು ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಸಲಹೆ ನೀಡಿದ್ರು.

    ಹೀಗೆ ರಮಣ ರಾವ್ ಅವರ ಸಲಹೆ ಮೇರೆಗೆ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಅಪ್ಪು ಅವರನ್ನು ವಿಕ್ರಂ ಆಸ್ಪತ್ರೆಗೆ ಕರೆದೊಯ್ದಿದ್ದರು. ಕಾವೇರಿ ಚಿತ್ರಮಂದಿರ ಸಮೀಪಿಸುತ್ತಿದ್ದಂತೆ ಅಶ್ವಿನಿ ತೊಡೆಯ ಮೇಲೆ ಮಲಗಿದ ಪುನೀತ್ ರಾಜ್ ಕುಮಾರ್ ಕಣ್ಣು ಮುಚ್ಚಿದ್ದರು. ಆಗ ಕಣ್ಣು ಮುಚ್ಚಿದ ಅಪ್ಪು ಮತ್ತೆ ಕಣ್ಣು ತೆರೆಯಲೇ ಇಲ್ಲ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಶತಪ್ರಯತ್ನ ಮಾಡಿದರೂ ಅಪ್ಪು ಮೇಲೇಳಲೇ ಇಲ್ಲ. ಇಷ್ಟೆಲ್ಲ ಜರುಗಿದರೂ ಸಹ ಪುನೀತ್ ಅಭಿಮಾನಿಗಳಿಗೆ ಅಪ್ಪು ಆಸ್ಪತ್ರೆ ಸೇರಿ ನಿಧನ ಹೊಂದಿದ ನಂತರ ಲಘು ಹೃದಯಾಘಾತವಾಗಿದೆ, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿಯನ್ನು ಹರಡಲಾಗಿತ್ತು. ಆದರೆ ಸತ್ಯಾಂಶವನ್ನು ಬಹುಬೇಗನೆ ಹೊರಬಿಟ್ಟಿರಲಿಲ್ಲ. ಹೀಗೆ ಅಂದು ಅಪ್ಪು ನಿಧನದ ಸುದ್ದಿಯನ್ನು ಮುಚ್ಚಿಡಲು ಕಾರಣರು ಯಾರು ಎಂಬ ವಿಷಯ ಬಹಿರಂಗವಾಗಿದೆ.

     ಅಪ್ಪು ಸಾವಿನ ಸುದ್ದಿಯನ್ನು 3 ಗಂಟೆ ಮುಚ್ಚಿಡಲಾಗಿತ್ತು

    ಅಪ್ಪು ಸಾವಿನ ಸುದ್ದಿಯನ್ನು 3 ಗಂಟೆ ಮುಚ್ಚಿಡಲಾಗಿತ್ತು

    ಇತ್ತೀಚೆಗಷ್ಟೇ ನಡೆದ ಅಪ್ಪು ಕಪ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಬಿಜೆಪಿಯ ಆರ್ ಅಶೋಕ್ ಪುನೀತ್ ರಾಜ್ ಕುಮಾರ್ ಅವರ ನಿಧನದ ದಿನವನ್ನು ನೆನಪಿಸಿಕೊಂಡರು. ಈ ದಿನ ನಾನು ನಿಮಗೆಲ್ಲ ಆ ವಿಷಯವನ್ನು ತಿಳಿಸಲೇಬೇಕು ಎಂದು ಮಾತನಾಡಿದ ಆರ್ ಅಶೋಕ್ ಅಪ್ಪು ನಿಧನ ಹೊಂದಿದ್ದಾರೆ ಎಂಬ ವಿಷಯವನ್ನು 3 ಗಂಟೆಗಳ ಕಾಲ ಯಾರಿಗೂ ತಿಳಿಸದೆ ಮುಚ್ಚಿಟ್ಟಿದ್ದೆವು ಎಂದು ತಿಳಿಸಿದರು.

     ಮುಚ್ಚಿಡಲು ಕಾರಣವೇನು?

    ಮುಚ್ಚಿಡಲು ಕಾರಣವೇನು?

    ಇದೇ ವೇಳೆ ಕಾರಣವನ್ನು ತಿಳಿಸಿದ ಆರ್ ಅಶೋಕ್ ಡಾ ರಾಜ್ ಕುಮಾರ್ ಅವರು ನಿಧನ ಹೊಂದಿದಾಗ ಸುದ್ದಿಯನ್ನು ಬಹುಬೇಗನೆ ಜನರಿಗೆ ತಿಳಿಸಲಾಗಿತ್ತು. ಹಾಗಾಗಿಯೇ ಅಂದು ಹಲವಾರು ಅಹಿತಕರ ಘಟನೆಗಳು ನಡೆದಿದ್ದವು, ಈ ಬಾರಿಯೂ ಅದೇ ರೀತಿ ಮಾಡಿದ್ದರೆ ಪರಿಸ್ಥಿತಿ ನಮ್ಮ ಕೈನಲ್ಲಿ ಇರುತ್ತಿರಲಿಲ್ಲ, ಹೀಗಾಗಿಯೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುವ ಸಲುವಾಗಿ ತಡವಾಗಿ ನಿಧನದ ಸುದ್ದಿಯನ್ನು ತಿಳಿಸಿದೆವು ಎಂದು ಆರ್ ಅಶೋಕ್ ತಿಳಿಸಿದರು.

     'ಬೆಳಿಗ್ಗೆನೇ ತಮಾಷೆ ಮಾಡಬೇಡಿ ಎಂದಿದ್ದೆ'

    'ಬೆಳಿಗ್ಗೆನೇ ತಮಾಷೆ ಮಾಡಬೇಡಿ ಎಂದಿದ್ದೆ'

    ಇನ್ನು ಅಪ್ಪು ನಿಧನದ ವಿಷಯ ತಮಗೆ ತಿಳಿದಾಗ ತಾವು ಸಿಎಂ ಕಚೇರಿಯಲ್ಲಿ ಕುಳಿತಿದ್ದೆವು ಎಂದು ಆರ್ ಅಶೋಕ್ ತಿಳಿಸಿದರು. ಆಗ ಮುಖ್ಯಮಂತ್ರಿಗಳು ಅಪ್ಪು ನಿಧನ ಹೊಂದಿದ್ದಾರಂತೆ ಎಂದು ಹೇಳಿದಾಗ ಬೆಳ್ಳಂಬೆಳಿಗ್ಗೆಯೇ ತಮಾಷೆ ಮಾಡಬೇಡಿ ಸುಮ್ಮನಿರಿ ಎಂದು ವಿಷಯವನ್ನು ತಳ್ಳಿ ಹಾಕಿದ್ದೆ, ನಾನು ನಂಬಲೇ ಇಲ್ಲ ಎಂದು ಅಶೋಕ್ ಹೇಳಿದರು. ಆದರೆ ಮುಖ್ಯಮಂತ್ರಿಗಳು ಸುದ್ದಿ ನಿಜವಂತೆ ಎಂದು ಪದೇಪದೇ ಹೇಳಿದಾಗ ಕೂಡಲೇ ಆಸ್ಪತ್ರೆಯ ವೈದ್ಯರಿಗೆ ಕರೆಮಾಡಿ ಸುದ್ದಿಯನ್ನು ಖಚಿತಪಡಿಸಿಕೊಂಡೆ ಹಾಗೂ ಯಾವುದೇ ಕಾರಣಕ್ಕೂ ಸುದ್ದಿ ಹೊರಗಡೆ ಹೋಗಬಾರದು ಗೌಪ್ಯತೆ ಕಾಪಾಡಿ ಎಂದು ವೈದ್ಯರಿಗೆ ಸಲಹೆ ನೀಡಿದೆ ಎಂದು ಅಶೋಕ್ ತಿಳಿಸಿದರು.

    English summary
    We revealed Puneeth Rajkumar's death news 3 hours lately says R Ashok . Read on
    Saturday, October 29, 2022, 14:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X