For Quick Alerts
  ALLOW NOTIFICATIONS  
  For Daily Alerts

  ಕಾನೂನಿಗೆ ಯಾರೂ ದೊಡ್ಡವರಲ್ಲ, ಹಂಸಲೇಖ ವಿರುದ್ಧವೂ ಕ್ರಮ: ಗೃಹ ಸಚಿವ

  |

  ಅಸ್ಪೃಶ್ಯತೆ ಖಂಡಿಸಿ ಹಂಸಲೇಖ ಆಡಿದ್ದ ಮಾತುಗಳು ಬೇರಯದ್ದೇ ಮಜಲು ಪಡೆದುಕೊಂಡಿವೆ. ಅಸ್ಪೃಶ್ಯತೆ ಖಂಡಿಸುವ ಭರದಲ್ಲಿ ಹಂಸಲೇಖ ಅವರು ಪೇಜಾವರ ಶ್ರೀಗಳ ಕುರಿತು ಆಡಿದ್ದ ಮಾತುಗಳು ಪೇಜಾವರರ ಭಕ್ತರನ್ನು ಹಾಗೂ ಕೆಲವು ಸಮುದಾಯದವರನ್ನು ಕೆರಳಿಸಿದೆ. ಹಾಗಾಗಿ ಹಂಸಲೇಖ ವಿರುದ್ಧ ಬ್ರಾಹ್ಮಣ ಸಂಘ ಸೇರಿದಂತೆ ಇನ್ನೂ ಕೆಲವರು ವೈಯಕ್ತಿಕ ದೂರುಗಳನ್ನು ದಾಖಲಿಸಿದ್ದಾರೆ.

  ಇದೀಗ ಪ್ರಕರಣ ಇನ್ನಷ್ಟು ತೀವ್ರಗೊಳ್ಳುತ್ತಿದ್ದು, ಸ್ವತಃ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಕರಣ ಕುರಿತು ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದಾರೆ. ''ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಎಲ್ಲರಂತೆ ಸಂಗೀತ ದಿಗ್ಗಜ ಹಂಸಲೇಖ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು'' ಎಂದಿದ್ದಾರೆ.

  ಮೂರು ಪ್ರಕರಣಗಳು ಹಂಸಲೇಖ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದು, ಪ್ರಕರಣವನ್ನು ಬಸವನಗುಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಹಂಸಲೇಖರಿಗೆ ನೊಟೀಸ್ ನೀಡಲಾಗಿತ್ತು. ಆದರೆ ಅವರು ಹಾಜರಾಗದ ಕಾರಣ ಇದೀಗ ಮತ್ತೊಂದು ನೊಟೀಸ್ ನೀಡಲಾಗಿದೆ. ಹಂಸಲೇಖ ಸಂಪರ್ಕಕ್ಕೆ ಸಿಗದ ಕಾರಣ ಮನೆಗೆ ಹೋಗಿ ಹಂಸಲೇಖರ ಪತ್ನಿಗೆ ನೊಟೀಸ್ ನೀಡಿದ್ದಾರೆ.

  ಪೇಜಾವರರು ಚಿಕನ್ ಕೊಟ್ಟರೆ ತಿನ್ನುತ್ತಿದ್ದರೆ: ಹಂಸಲೇಖ ಪ್ರಶ್ನೆ

  ಪೇಜಾವರರು ಚಿಕನ್ ಕೊಟ್ಟರೆ ತಿನ್ನುತ್ತಿದ್ದರೆ: ಹಂಸಲೇಖ ಪ್ರಶ್ನೆ

  ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದ ಹಂಸಲೇಖ ಅಸ್ಪೃಶ್ಯತೆ ಬಗ್ಗೆ ಮಾತಾಡುತ್ತಾ, ಕೃಷ್ಣೈಕ್ಯ ಪ್ರೇಜಾವರ ಶ್ರೀಗಳು ದಲಿತರ ಮನೆಗೆ ಹೋಗಿದ್ದರ ಬಗ್ಗೆ ಪ್ರಸ್ತಾಪಿಸಿದ್ದರು. ದಲಿತರ ಮನೆಗೆ ಹೋದ ಪೇಜಾವರ ಸ್ವಾಮಿಗಳು ಅಲ್ಲಿ ಕುಳಿತಿದ್ದರಷ್ಟೆ ಅವರು ಕೋಳಿ ಕೊಟ್ಟರೆ ತಿನ್ನಲಿಕ್ಕಾಗುತ್ತದೇನು? ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ಅವರು ತಿನ್ನುತ್ತಿದ್ದರೇನು? ಲಿವರ್ ಫ್ರೈ ಕೊಟ್ಟಿದ್ದರೆ ತಿನ್ನುತ್ತಿದ್ದರೇನು?'' ಎಂದು ಹಂಸಲೇಖ ಪ್ರಶ್ನೆ ಮಾಡಿದ್ದರು.

  ಬೃಂದಾವನದ ಮುಂದೆ ಕ್ಷಮೆ ಕೇಳಬೇಕೆಂದ ಸದಸ್ಯರು

  ಬೃಂದಾವನದ ಮುಂದೆ ಕ್ಷಮೆ ಕೇಳಬೇಕೆಂದ ಸದಸ್ಯರು

  ಹಂಸಲೇಖ ಅವರು ಪೇಜಾವರರ ಬಗ್ಗೆ ಮಾತನಾಡಿದ್ದಕ್ಕೆ ಮಠದ ವಿಶ್ವಪ್ರಸನ್ನ ತೀರ್ಥರು ಸೇರಿದಂತೆ ಹಲವು ಅಸಮಾಧಾನ ವ್ಯಕ್ತಪಡಿಸಿದ್ದರು. ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ವಿಪ್ರ ಯುವ ವೇದಿಕೆ ವತಿಯಿಂದ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಹಂಸಲೇಖ ವಿರುದ್ಧ ದೂರು ನೀಡಲಾಗಿತ್ತು. ''ಹಂಸಲೇಖ ಕೇವಲ ಕ್ಷಮೆ ಕೇಳಿದರೆ ಸಾಲದು, ವಿದ್ಯಾಪೀಠ ವೃತ್ತದ ಬಳಿ ಇರುವ ಪೇಜಾವರ ಶ್ರೀಗಳ ಬೃಂದಾವನದ ಬಳಿ ಬಂದು ಮುಂದೆ ನಿಂತು ಕೈ ಮುಗಿದು ಕ್ಷಮೆ ಕೇಳಬೇಕು. ನಾಲ್ಕು ಗೋಡೆಗಳ ನಡುವೆ ಕೇಳಲಾಗಿರುವ ಕ್ಷಮೆಯನ್ನು ನಾವು ಒಪ್ಪುವುದಿಲ್ಲ'' ಎಂದು ಬ್ರಾಹ್ಮಣ ಸಂಘದವರು ಒತ್ತಾಯಿಸಿದ್ದರು.

  ದೂರು ದಾಖಲಿಸಿದ ಮಾಧ್ವ ಮಹಾಸಭಾ

  ದೂರು ದಾಖಲಿಸಿದ ಮಾಧ್ವ ಮಹಾಸಭಾ

  ಬಳಿಕ ನಗರದ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿಯೂ ಕೃಷ್ಣ ರಾಜು ಹೆಸರಿನ ವ್ಯಕ್ತಿಯೊಬ್ಬರು ಹಂಸಲೇಖ ವಿರುದ್ಧ ದೂರು ದಾಖಲಿಸಿದ್ದಾರೆ. ವಿಶ್ವೇಶ್ವರ ತೀರ್ಥರು ಸಾಮಾಜಿಕ ಸಾಮರಸ್ಯಕ್ಕಾಗಿ ಕೈಗೊಂಡ ಕಾರ್ಯದ ಬಗ್ಗೆ ಲೇವಡಿ ಮಾಡಿ ನನ್ನ ನಂಬಿಕೆಗೆ ಘಾಸಿ ಮಾಡಿದ್ದಾರೆ. ಇದು ಮಾತ್ರವೇ ಅಲ್ಲದೆ ನನ್ನ ಆರಾಧ್ಯ ದೈವವಾದ ಬಿಳಿಗಿರಿ ರಂಗಯ್ಯ ದೇವರ ಬಗ್ಗೆ ಪ್ರಚಲಿತದಲ್ಲಿರುವ ಜನಪದ ಕತೆಯನ್ನು ಸಹ ತುಚ್ಛವಾಗಿ ಪರಿಗಣಿಸಿರುತ್ತಾರೆ. ಇದರಿಂದ ನನ್ನ ಭಾವನೆಗಳಿಗೆ ಘಾಸಿಯಾಗಿದೆ ಹಾಗೂ ಆಸ್ತಿಕ ಸಮಾಜದ ನಂಬಿಕೆಗಳಿಗೆ ಧಕ್ಕೆಯಾಗಿದೆ. ಹೀಗಾಗಿ ಹಂಸಲೇಖ ವಿರುದ್ಧ ಕ್ರಮ ಕೈಗೊಳ್ಳಬೇಕು'' ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದರ ಜೊತೆಗೆ ನವೆಂಬರ್ 17 ರಂದು ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ಅಧ್ಯಕ್ಷ ಡಾ ಮುರಳಿಧರ್ ಅವರು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  ಹಂಸಲೇಖಗೆ ಬೆಂಬಲವೂ ವ್ಯಕ್ತವಾಗಿದೆ

  ಹಂಸಲೇಖಗೆ ಬೆಂಬಲವೂ ವ್ಯಕ್ತವಾಗಿದೆ

  ಈ ನಡುವೆ ಹಂಸಲೇಖಗೆ ಸಾಕಷ್ಟು ಮಂದಿ ಬೆಂಬಲವನ್ನೂ ಸೂಚಿಸಿದ್ದಾರೆ. ರಾಮನಗರ, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಡಿಎಸ್‌ಎಸ್‌ ಸೇರಿದಂತೆ ಕೆಲವು ದಲಿತಪರ ಸಂಘಟನೆಗಳು ಹಂಸಲೇಖ ಪರವಾಗಿ ಪ್ರತಿಭಟನೆ ಮಾಡಿದ್ದು, ಹಂಸಲೇಖ ವಿರುದ್ಧ ದೂರನ್ನು ಕೈಬಿಡಬೇಕು ಎಂದು ಒತ್ತಾಯಿಸಿವೆ. ಸಾಮಾಜಿಕ ಜಾಲತಾಣದಲ್ಲಿಯೂ ಸಹ ಹಂಸಲೇಖ ಅವರಿಗೆ ಬೆಂಬಲ ವ್ಯಕ್ತಪಡಿಸಲಾಗಿದೆ. ಹಂಸಲೇಖ ಕ್ಷಮೆ ಕೇಳಿದ್ದಕ್ಕೆ ಕೆಲವರು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದು, ''ಹಂಸಲೇಖ ಸತ್ಯ ಹೇಳಿದ್ದಕ್ಕೆ ಅವರಿಂದ ಕ್ಷಮೆ ಕೇಳಿಸಿಕೊಳ್ಳಲಾಗಿದೆ'' ಎಂದಿದ್ದಾರೆ. ಚಿತ್ರ ಸಾಹಿತಿ ಕವಿರಾಜ್ ಸೇರಿದಂತೆ ಇನ್ನೂ ಕೆಲವು ಪ್ರಮುಖರು ಸಹ ಹಂಸಲೇಖಗೆ ಬೆಂಬಲ ಸೂಚಿಸಿದ್ದಾರೆ.

  English summary
  Home minister Araga Jnanendra said no one is greater than law, we will take action against Hamsalekha also.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X