»   » ಅರಸು ಅಂತಾರೆ ಮದುವೆಗೆ ಒಪ್ಕೊಂಡ್ ಬುಟ್ಲು ಕಣ್ಲಾ

ಅರಸು ಅಂತಾರೆ ಮದುವೆಗೆ ಒಪ್ಕೊಂಡ್ ಬುಟ್ಲು ಕಣ್ಲಾ

By: ಜೀವನರಸಿಕ
Subscribe to Filmibeat Kannada

ಮಂಡ್ಯದಲ್ಲಿ ಲವರ್ ಮಾಡಿಸಿ ಗೆದ್ದ ಮಂಡ್ಯ ಹೈದ ಅರಸು ಅಂತಾರೆಯ ಮದುವೆ. ಈ ವರ್ಷ ತೆರೆಕಂಡು ಯಶಸ್ವಿಯಾದ 'ಲವ್ ಇನ್ ಮಂಡ್ಯ' ಚಿತ್ರದ ನಿರ್ದೇಶಕ ಅರಸು ಅವರಿಗೆ ಮದುವೆಯ ಸಂಭ್ರಮ ಶುರುವಾಗಿದೆ.

ಹದವಾದ ಹಿತಮಿತವಾದ ಸಾಹಿತ್ಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ಅತ್ಯುತ್ತಮ ಚಿತ್ರ ಸಾಹಿತಿ ಅನ್ನಿಸಿಕೊಂಡ ಅರಸು ಅಂತಾರೆ ಇತ್ತೀಚೆಗೆ ಮೈಸೂರಿನಲ್ಲಿ ನಡೆದ 2013ನೇ ಸಾಲಿನ ರಾಜ್ಯಪ್ರಶಸ್ತಿಯನ್ನ ಸಹ ತಮ್ಮ ಅತ್ಯುತ್ತಮ ಗೀತೆ ರಚನೆಗಾಗಿ ಪಡೆದಿದ್ದಾರೆ.

wedding-bells-for-director-arasu-anthare

ಸಿನಿಮಾದವ್ರು ಅಂದ್ರೆ ಹೆಣ್ಣು ಕೊಡದ ಕಾಲದಲ್ಲಿ ಅರಸು ಅಂತಾರೆಯವರಿಗೆ ಬೊಂಬೆಗಳ ನಾಡು ಚನ್ನಪಟ್ಟಣದ ಚೆಂದದ ಬೊಂಬೆ ಮದ್ವೆ ಆಗೋಕೆ ಒಪ್ಕಂಬುಟ್ಟಿದ್ದಾಳೆ. ಇದೇ ಭಾನುವಾರ (8) ಅಂದ್ರೆ ಮಹಿಳಾ ದಿನಾಚರಣೆಯ ದಿನ ಅರಸು ಅವ್ರ ಮದ್ವೆ ಅದ್ದೂರಿಯಾಗಿ ನಡೆಯುತ್ತೆ.

ಎಲ್ಲಾ ಓಕೆ ಚನ್ನಪಟ್ಟಣದ ಬೊಂಬೆಯನ್ನ ಮೆಚ್ಚಿದ್ದೀರಾ ಮದ್ವೆಯಾಗ್ತಿದ್ದೀರಾ ಬೊಂಬೆಯ ಹೆಸ್ರು ಹೇಳಿ ಅಂದ್ರೆ ನಾಚಿ ನೀರಾಗ್ತಾರೆ ನಾಚಿಕೆ ಸ್ವಭಾವದ ಅರಸು ಅಂತಾರೆ. ನಿರ್ದೇಶಕ ಅರಸು ಅಂತಾರೆ ವೈವಾಹಿಕ ಜೀವನಕ್ಕೆ ನಮ್ಮ ಕಡೆಯಿಂದ ಶುಭಾಶಯಗಳು.

ಗೀತ ಸಾಹಿತಿಯಾಗಿ ಗುರುತಿಸಿಕೊಂಡಿದ್ದ ಅರಸು ಅಂತಾರೆ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ 'ಲವ್ ಇನ್ ಮಂಡ್ಯ'. ಲವ್, ಆಕ್ಷನ್ ಮಿಶ್ರಿತ ಈ ಚಿತ್ರದಲ್ಲಿ ಸತೀಶ್ ನೀನಾಸಂ ಜೊತೆಗೆ ಸಿಂಧು ಲೋಕನಾಥ್ ಅಭಿನಯಿಸಿದ್ದಾರೆ. ತಮ್ಮ ಚೊಚ್ಚಲ ಚಿತ್ರದ ಮೂಲಕ ಅರ್ಧ ಸೆಂಚುರಿ ಭಾರಿಸಿದ್ದಾರೆ ಅರಸು.

English summary
'Love in Mandya' fame director Arasu Anthare is all set to tie the knot on 8th March, 2015. The marriage will be held in Channapatna. But the director has not disclosed his fiancé name.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada