»   » ಐಪಿಎಸ್ ಅಧಿಕಾರಿ ಕೈಹಿಡಿಯುತ್ತಿದ್ದಾರೆ ಮುನಿರತ್ನ ಪುತ್ರಿ

ಐಪಿಎಸ್ ಅಧಿಕಾರಿ ಕೈಹಿಡಿಯುತ್ತಿದ್ದಾರೆ ಮುನಿರತ್ನ ಪುತ್ರಿ

Posted By:
Subscribe to Filmibeat Kannada

ಕನ್ನಡ ಚಿತ್ರೊದ್ಯಮದ ಪ್ರತಿಷ್ಠಿತ ಕುಟುಂಬಗಳಲ್ಲಿ ಒಂದಾಗಿರುವ ನಿರ್ಮಾಪಕ ಕಮ್ ಶಾಸಕ ಮುನಿರತ್ನ ನಾಯ್ಡು ಮಗಳ ಮದುವೆಗೆ ಸ್ಯಾಂಡಲ್ ವುಡ್ ಸಿಂಗಾರವಾಗುತ್ತಿದೆ. ಅದ್ದೂರಿ ಚಿತ್ರಗಳ ನಿರ್ಮಾಪಕರೆಂದೇ ಹೆಸರಾದವರು ಮುನಿರತ್ನ. ಇನ್ನು ಮಗಳ ಮದುವೆ ಎಂದರೆ ಕೇಳಬೇಕೆ.

ರಾಜರಾಜೇಶ್ವರಿ ನಗರದ ಹಾಲಿ ಶಾಸಕ ಹಾಗೂ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರೂ ಅಗಿರುವ ಮುನಿರತ್ನ ಅವರ ಮಗಳ ಮದುವೆ ಇದೇ ನವೆಂಬರ್ 27 ರಂದು ಬೆಂಗಳೂರಿನಲ್ಲಿ ನಡೆಯಲಿದೆ.

Wedding bells for Producer Munirathna Naidu daughter

ಮುನಿರತ್ನ ನಾಯ್ಡು ಅವರ ಪುತ್ರಿ ಎಂ ಭಾರತಿ ಕೈಹಿಡಿಯುತ್ತಿರುವ ಬಾಳಸಂಗಾತಿ ಐಪಿಎಸ್ ಅಧಿಕಾರಿ. ಹೆಸರು ರಿಷ್ಯಂತ್. ಕನ್ನಡ ಚಿತ್ರೋದ್ಯಮದಲ್ಲಿ ಧೀರ ನಿರ್ಮಾಪಕ ಎಂದೇ ಕರೆಸಿಕೊಂಡಿರುವ ರಾಕ್ ಲೈನ್ ವೆಂಕಟೇಶ್ ಹಾಗೂ ಮುನಿರತ್ನ ನಾಯ್ಡು ಅವರು ಬೀಗರು ಎಂಬುದು ಗೊತ್ತೇ ಇದೆ. ರಾಕ್ ಲೈನ್ ಅವರ ಪುತ್ರ ಯತೀಶ್ ಅವರ ಕೈಹಿಡಿದಿದ್ದಾರೆ ಮುನಿರತ್ನ ಅವರ ಮತ್ತೊಬ್ಬ ಪುತ್ರಿ ಸಿಂಧೂರಿ. [ಅದ್ದೂರಿಯಾಗಿ ರಾಕ್ ಲೈನ್ ಮಗನ ಮದುವೆ]

ಒಂದು ರಾಜಕೀಯದ ನಂಟು ಇನ್ನೊಂದು ಕಡೆ ಚಿತ್ರರಂಗದ ಬಿಡಿಸಲಾಗದ ಗಂಟು ಮುನಿರತ್ನ ನಾಯ್ಡು ಅವರದು. ಹಾಗಾಗಿ ಅವರ ಮಗಳ ಮದುವೆ ರಾಜಕೀಯ ಹಾಗೂ ಬಣ್ಣಬಣ್ಣದ ತಾರೆಗಳ ಮೆಗಾ ಸಮಾರಂಭ ಆಗಲಿರುವುದರಲ್ಲಿ ಅನುಮಾನವೇ ಇಲ್ಲ.

ಇನ್ನು ನೂತನ ವಧು ಎಂ ಭಾರತಿ ಅವರು ಬಿಬಿಎಂ ಪದವೀಧರೆ, ಅವರು ಕೈಹಿಡಿಯುತ್ತಿರುವ ವರ ಸಿಬಿ ರಿಷ್ಯಂತ್ ಐಪಿಎಸ್ ಅಧಿಕಾರಿಯಾಗಿದ್ದು, ಭಾನುಮತಿ ಮತ್ತು ಭಾಸ್ಕರ್ ನಾಯ್ಡು ಅವರ ಪುತ್ರ. (ಏಜೆನ್ಸೀಸ್)

English summary
Kannada films producer, Bengaluru Vidhanasabha Constituency Rajarajeshwarinagar sitting MLA and KFPA President Munirathna Naidu daughter M Bharathi wedding will be held on 27th of November with IPS officer Rishyanth.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada