»   » 'ಸ್ವಪ್ನ'ಸುಂದರಿ ಕೈಹಿಡಿಯುತ್ತಿದ್ದಾರೆ 'ಸ್ಯಾಂಡಲ್ ವುಡ್ ಕೃಷ್ಣ'

'ಸ್ವಪ್ನ'ಸುಂದರಿ ಕೈಹಿಡಿಯುತ್ತಿದ್ದಾರೆ 'ಸ್ಯಾಂಡಲ್ ವುಡ್ ಕೃಷ್ಣ'

Posted By: ಉದಯರವಿ
Subscribe to Filmibeat Kannada

'ಸ್ಯಾಂಡಲ್ ವುಡ್ ಕೃಷ್ಣ' ಎಂದು ಅಭಿಮಾನಿಗಳ ಪ್ರೀತಿಗೆ ಪಾತ್ರವಾಗಿರುವ ಅಜೇಯ್ ರಾವ್ ದಾಂಪತ್ಯ ಜೀವನಕ್ಕೆ ಅಡಿಯಿಡುತ್ತಿದ್ದಾರೆ. ಡಿಸೆಂಬರ್ ತಿಂಗಳಲ್ಲೇ ಅವರ ಮದುವೆ ಗಟ್ಟಿಮೇಳ. ಸಾಮಾನ್ಯವಾಗಿ ತಾರೆಗಳ ಮದುವೆ ಎಂದರೆ ಧಾಂಧೂಂ ಎಂದು ಬಹಳ ಅದ್ದೂರಿಯಾಗಿ ನಡೆಯುತ್ತದೆ.

ಆದರೆ ಅಜೇಯ್ ರಾವ್ ಮಾತ್ರ ತಮ್ಮ ಮದುವೆಯನ್ನು ಆದಷ್ಟು ಸರಳವಾಗಿ ಆಗುತ್ತಿದ್ದಾರೆ. ಇಷ್ಟಕ್ಕೂ ಅವರು ಕೈಹಿಡಿಯುತ್ತಿರುವ ಹುಡುಗಿ ಹೆಸರು ಸ್ವಪ್ನ. ಅಜೇಯ್ ರಾವ್ ಅವರ ಹುಟ್ಟೂರು ಹೊಸಪೇಟೆ ಮೂಲದವರು. ಇವರಿಬ್ಬರದ್ದೂ ಲವ್ ಕಮ್ ಅರೇಂಜ್ಡ್ ಮ್ಯಾರೇಜ್. [ರೋಸ್ ಚಿತ್ರ ವಿಮರ್ಶೆ]

ಡಿಪ್ಲೊಮಾ ಪದವಿಧರರಾಗಿರುವ ಸ್ವಪ್ನ ಅವರು ಹೊಸಪೇಟೆಯ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದಾರೆ. ಹೊಸಪೇಟೆಗೆ ಅಜೇಯ್ ರಾವ್ ಭೇಟಿ ನೀಡುತ್ತಿದ್ದಾಗ ಈ ಹುಡುಗಿಯ ಪರಿಚಯವಾಗಿದೆ. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಗೆ ಬದಲಾಗಿ ಈಗ ಮದುವೆಗೆ ಸಿದ್ಧವಾಗಿದೆ ಈ ಜೋಡಿ.

wedding-bells-for-sandalwood-krishan-ajay-rao

ಹೊಸಪೇಟೇಯ ತನ್ನ ಸೋದರ ಸಂಬಂಧಿ ಪಕ್ಕದ ಮನೆ ಹುಡುಗಿ ಸ್ವಪ್ನ. ಆಗಾಗ ಹೊಸಪೇಟೆಗೆ ಬಂದುಹೋಗುತ್ತಿದ್ದಾಗ ಈ ಹುಡುಗಿ ಪರಿಚಯವಾಗಿದೆ. ಕಳೆದ ಒಂದು ವರ್ಷದಿಂದ ಇಬ್ಬರ ನಡುವೆ ಪ್ಯಾರ್ ಶುರುವಾಗಿದೆ. ತಾವು ಸರಳವಾಗಿ ಮದುವೆಯಾಗುತ್ತಿದ್ದೇವೆ ಎಂದಿರುವ ಅಜೇಯ್, ಶೀಘ್ರದಲ್ಲೇ ಮದುವೆ ಊಟ ಹಾಕಿಸಲಿದ್ದಾರೆ.

ಎಕ್ಸ್ ಕ್ಯೂಸ್ ಮಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಅಡಿಯಿಟ್ಟ ಅಜೇಯ್ ರಾವ್ ಅವರಿಗೆ ತಿರುವು ನೀಡಿದ ಚಿತ್ರ ತಾಜ್ ಮಹಲ್. ಬಳಿಕ ಬಂದಂತಹ ಕೃಷ್ಣನ್ ಲವ್ ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ ಚಿತ್ರಗಳೂ ಭಾರಿ ಸದ್ದು ಮಾಡಿದ್ದವು. [ಅಜೇಯ್ ರಾವ್ 'ಜೈ ಭಜರಂಗ ಬಲಿ' ಹಿಂದಿಗೆ ಡಬ್]

ಅಜೇಯ್ ರಾವ್ ಅಭಿನಯದ 'ಜೈ ಭಜರಂಗಬಲಿ' ಚಿತ್ರ ಇದೇ ಶುಕ್ರವಾರ (ಡಿ.12) ಬಿಡುಗಡೆಯಾಗುತ್ತಿದೆ. ಕೃಷ್ಣಲೀಲಾ, ಕೃಷ್ಣ ಸನ್ ಆಫ್ ಸಿಎಂ, ಸೆಕೆಂಡ್ ಹ್ಯಾಂಡ್ ಲವರ್ ಚಿತ್ರಗಳು ನಿರ್ಮಾಣ ಹಂತದಲ್ಲಿವೆ. 'ಸ್ಯಾಂಡಲ್ ವುಡ್ ಕೃಷ್ಣ'ನಿಗೆ ನಮ್ಮ ಕಡೆಯಿಂದ ಅಡ್ವಾನ್ಸ್ ಡ್ ವಿಶಸ್.

English summary
Sandalwood's most eligible bachulor Ajay Rao aka Krishna Ajay Rao is all set to tie the knot soon. Ajay marriage will be held with Hospet based bride Swapna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada