Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
#WeStandWithDboss: ದರ್ಶನ್ ಮೇಲೆ ಚಪ್ಪಲಿ ಎಸೆದ ಘಟನೆ: ನೆಚ್ಚಿನ ನಟನ ಬೆಂಬಲಕ್ಕೆ ನಿಂತ ಫ್ಯಾನ್ಸ್
ಹೊಸಪೇಟೆಯಲ್ಲಿ ನಿನ್ನೆ(ಡಿಸೆಂಬರ್ 19) ನಟ ದರ್ಶನ್ ಮೇಲೆ ಕಿಡಿಗೇಡಿ ಚಪ್ಪಲಿ ಎಸೆದ ವಿಚಾರಕ್ಕೆ ಭಾರೀ ಖಂಡನೆ ವ್ಯಕ್ತವಾಗುತ್ತಿದೆ. ಇಂತಹ ಘಟನೆ ಮತ್ತೆ ಎಂದು ಆಗಬಾರದು. ಅಭಿಮಾನಿಗಳ ಹುಚ್ಚು ಅಭಿಮಾನ ಈ ಮಟ್ಟಕ್ಕೆ ಹೋಗಬಾರದು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.
'ಕ್ರಾಂತಿ' ಚಿತ್ರದ 'ಬೊಂಬೆ ಬೊಂಬೆ' ಸಾಂಗ್ ರಿಲೀಸ್‌ಗಾಗಿ ಚಿತ್ರತಂಡ ಹೊಸಪೇಟೆಗೆ ಹೋಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ನಟ ದರ್ಶನ್ ಹಾಗೂ ನಟ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ನಡುವಿನ ತಿಕ್ಕಾಟ ತಾರಕಕ್ಕೇರಿತ್ತು. ಕೆಲವು ಕಿಡಿಗೇಡಿಗಳು 'ಕ್ರಾಂತಿ' ಚಿತ್ರದ ಬ್ಯಾನರ್‌ಗಳನ್ನು ಹರಿದು ಹುಚ್ಚಾಟ ಮೆರೆದಿದ್ದರು. ಅಭಿಮಾನಿಗಳ ಸಮ್ಮುಖದಲ್ಲಿ ನಟ ದರ್ಶನ್ ವಾಲ್ಮೀಕಿ ವೃತ್ತದಲ್ಲಿದ್ದ ಅಪ್ಪು ಪುತ್ಥಳಿಗೆ ಮಾಲಾರ್ಪಣೆ ಮಾಡಿ ವೇದಿಕೆ ಏರಿದ್ದರು.
'ಕ್ರಾಂತಿ'
ಪ್ರಚಾರದ
ವೇಳೆ
ದರ್ಶನ್
ಮೇಲೆ
ಚಪ್ಪಲಿ
ಎಸೆದ
ಕಿಡಿಗೇಡಿ!
ನಟಿ ರಚಿತಾ ರಾಮ್ ಮಾತನಾಡುವ ವೇಳೆ ಪಕ್ಕದಲ್ಲಿ ನಿಂತಿದ್ದ ದರ್ಶನ್ ಮೇಲೆ ಅಭಿಮಾನಿಗಳ ಗುಂಪಿನಿಂದ ಚಪ್ಪಲಿ ತೂರಿ ಬಂದಿತ್ತು. ಅಚಾನಕ್ ಆಗಿ ನಡೆದ ಈ ಘಟನೆಯಿಂದ ಒಂದು ಕ್ಷಣ ಎಲ್ಲರಿಗೂ ಶಾಕ್ ಆಗಿತ್ತು. "ತಪ್ಪೇನು ಇಲ್ಲ ಚಿನ್ನ, ಪರವಾಗಿಲ್ಲ" ಎಂದು ದರ್ಶನ್ ಎಲ್ಲರನ್ನು ಸಮಾಧಾನಪಡಿಸಿದರು. ಆದರೆ ಈ ವಿಚಾರ ದರ್ಶನ್ ಅಭಿಮಾನಿಗಳಿಗೆ ಬಹಳ ಬೇಸರ ತಂದಿದ್ದು, ಘಟನೆ ನೆನೆದು ಭಾವುಕರಾಗಿದ್ದಾರೆ.

We Stand With Dboss ಎಂದ ಫ್ಯಾನ್ಸ್
ಘಟನೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸುತ್ತಿರುವ ಅಭಿಮಾನಿಗಳು We Stand With D boss ಎನ್ನುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾರೆ. "ನೀವು ಬೇಸರ ಮಾಡಿಕೊಳ್ಳಬೇಡಿ ಬಾಸ್ ನಾವು ನಿಮ್ಮೊಟ್ಟಿಗೆ ಇದ್ದೇವೆ" ಎಂದು ಕಾಮೆಂಟ್ ಮಾಡುತ್ತಿದ್ದಾರೆ. We Stand With Dboss ಹ್ಯಾಷ್‌ಟ್ಯಾಗ್ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗುತ್ತಿದೆ. ಯಶ್, ಸುದೀಪ್ ಸೇರಿದಂತೆ ಬೇರೆ ನಟರ ಅಭಿಮಾನಿಗಳು ಕೂಡ ಈ ವಿಚಾರದಲ್ಲಿ ದರ್ಶನ್‌ಗೆ ಬೆಂಬಲ ಸೂಚಿಸಿದ್ದಾರೆ.

ದರ್ಶನ್ ಪರ ಧನ್ವೀರ್ ಪೋಸ್ಟ್
ಇನ್ನು ನಟ ದರ್ಶನ್ ಮೇಲೆ ಚಪ್ಪಲಿ ಎಸೆದದ್ದರ ಕುರಿತು ತುವ ನಟ ಧನ್ವೀರ್ ಪ್ರತಿಕ್ರಿಯಿಸಿದ್ದಾರೆ. "ನಿನೆ ಹೊಸಪೇಟೆಯಲ್ಲಿ ನಡೆದ ಘಟನೆ ತುಂಬಾ ನೋವುಂಟು ಮಾಡಿದೆ, ನಿಮ್ಮ ಮೇಲೆ ನಡೆದ ಪಿತೂರಿ ಖಂಡನೀಯ' ಎಂದು ಧನ್ವೀರ್ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ. ಈ ಪೋಸ್ಟ್ ಈಗ ಸಖತ್ ವೈರಲ್ ಆಗುತ್ತಿದೆ.

ನಟ ರಾಜವರ್ಧನ್ ಪ್ರತಿಕ್ರಿಯೆ
ಇದೇ ವಿಚಾರಕ್ಕೆ ಸಂಬಂಧಿಸಿ ಮತ್ತೊಬ್ಬ ಯುವ ನಟ ರಾಜವರ್ಧನ್ "ಹೊಸಪೇಟೇಲಿ ಒಂದು ಕೆಟ್ಟ ಬೆಳವಣಿಗೆ ಆಗಿದೆ. ಅಂತಹ ವ್ಯಕ್ತಿಗೆ ಈ ರೀತಿಯಲ್ಲಿ ಅವಮಾನ ಮಾಡಿದ್ರುಲ್ಲಾ ? ನಿಮ್ಮ ಈ ಅಸಭ್ಯ ವರ್ತನೆಗೆ ಧಿಕ್ಕಾರವಿರಲಿ. ಚಪ್ಪಾಳೆ ತಟ್ಟುವ ಕೈಗೆ ಚಪ್ಪಲಿ ಬಂದಾಗ , ಮಲೀನವಾಗಿದ್ದು ಆ ಕೈಗಳೇ ಹೊರತು ಕಲಾವಿದನಲ್ಲ" ಎಂದು ಬರೆದು We Stand With Dboss ಹ್ಯಾಷ್‌ಟ್ಯಾಗ್ ಬಳಸಿ ಪೋಸ್ಟ್ ಮಾಡಿದ್ದಾರೆ.

ದರ್ಶನ್ ಫ್ಯಾನ್ಸ್ ಅಸಮಾಧಾನ
ನೆಚ್ಚಿನ ನಟನ ಮೇಲೆ ಕಿಡಿಗೇಡಿ ಚಪ್ಪಲಿ ಎಸೆದ ವಿಚಾರ ಅಭಿಮಾನಿಗಳಿಗೆ ಬಹಳ ಬೇಸರ ತಂದಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ದರ್ಶನ್ ನಟನೆಯ 'ಕ್ರಾಂತಿ' ಜನವರಿ 26ಕ್ಕೆ ತೆರೆಗೆ ಬರುತ್ತಿದೆ. ವಿ. ಹರಿಕೃಷ್ಣ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಶೈಲಜಾ ನಾಗ್ ಹಾಗೂ ಬಿ. ಸುರೇಶ್ ದಂಪತಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.