Just In
Don't Miss!
- Finance
ಆನ್ ಲೈನ್ ವಂಚನೆ ತಡೆಯಲು ಸೇಫ್ ಪೇ ಪರಿಚಯಿಸಿದ ಏರ್ ಟೆಲ್
- News
ಜೆರ್ಸಿ ಹಸು ಆಲಸಿ,ರೋಗಕಾರಕ ಎಂದಿರುವ 'ಹಸು ವಿಜ್ಞಾನ' ಪಠ್ಯವನ್ನು ಕೈಬಿಟ್ಟ ಕಾಮಧೇನು ಆಯೋಗ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ಬಿಡುಗಡೆಗೊಳಿಸಿದಕ್ಕೆ ಧನ್ಯವಾದ ಎಂದ ಪಾರ್ಥಿವ್ ಪಟೇಲ್
- Automobiles
ಮೂರು ತಿಂಗಳಲ್ಲಿ ಆರು ಕೋಟಿಗೂ ಹೆಚ್ಚು ದಂಡ ತೆತ್ತ ವಾಹನ ಸವಾರರು
- Lifestyle
ನಿಮ್ಮ ಕೋಮಲ ತುಟಿಗಳಿಗಾಗಿ ಮನೆಯಲ್ಲಿಯೇ ತಯಾರಿಸಿ ಈ ಲಿಪ್ ಬಾಮ್ ಗಳನ್ನು...
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಉಪೇಂದ್ರ ಮುಂದಿನ ಚಿತ್ರಕ್ಕೆ ಏನಂತ ಕರೆಯಬೇಕು..?
ರಿಯಲ್ ಸ್ಟಾರ್ ಉಪೇಂದ್ರ ಮತ್ತು ದಂಡುಪಾಳ್ಯ ಚಿತ್ರದ ನಿರ್ದೇಶಕ ಶ್ರೀನಿವಾಸ್ ರಾಜು ಕಾಂಬಿನೇಷನ್ ನಲ್ಲಿ ಮೂಡಿಬರ್ತಿರೋ ಚಿತ್ರದ ಬಗ್ಗೆ ನೀವೆಲ್ಲಾ ಕೇಳೇ ಇರ್ತಿರಾ. ಚಿತ್ರ ಸೆಟ್ಟೇರೋಕು ಮುನ್ನವೇ 'ಬಸವಣ್ಣ' ಅಂತ ಟೈಟಲ್ ಇಟ್ಟು ಗಾಂಧಿನಗರದ ಗಲ್ಲಿಗಲ್ಲಿಯಲ್ಲಿ ತಮಟೆ ಬಾರಿಸಿದ ಈ ಚಿತ್ರಕ್ಕೆ ಸದ್ಯ ಯಾವುದೇ ಟೈಟಲ್ ಇಲ್ಲ ಅನ್ನೋದು ಹಳೇ ಸುದ್ದಿನೇ.
ಥೇಟ್ ಉಪೇಂದ್ರ ಸ್ಟೈಲ್ ನಲ್ಲಿ ಸಿಂಬಲ್ ಫಾರ್ಮುಲಾ ಉಪಯೋಗಿಸಿರೋ ನಿರ್ದೇಶಕ ಮಹಾಶಯರು ಟೈಟಲ್ ಜೊತೆಗಿದ್ದ ವಿಭೂತಿಯನ್ನೇ ಚಿತ್ರಕ್ಕೆ ಫಿಕ್ಸ್ ಮಾಡಿದ್ದಾರೆ. ಈ ಚಿಹ್ನೆಗೆ ನೀವು ಏನಂತ ಕರೆಯುತ್ತೀರಾ...? [ಜನಿವಾರ ಹಾಕಿದವರೆಲ್ಲಾ ಬಸವಣ್ಣ ಆಗಲು ಸಾಧ್ಯವೆ?]
ನೋಡಿದ ತಕ್ಷಣ ವಿಭೂತಿಯಂತೆ ಕಾಣುವುದರಿಂದ ವಿಭೂತಿ ಅನ್ನಬಹುದು. ಇಲ್ಲ, ಮಧ್ಯೆ ತ್ರಿನೇತ್ರ ಇರುವುದರಿಂದ ಈ ಚಿತ್ರಕ್ಕೆ ತ್ರಿನೇತ್ರ ಅಂತಲೂ ಕರೆಯಬಹುದು. ಗಾಂಧಿನಗರದ ಕೆಲ ಬುದ್ಧಿವಂತರೂ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಚಿತ್ರಕ್ಕೆ `ನಾಮ', 'ಪಟ್ಟಿ', `ಬೂದಿ'ಯಂತೆಲ್ಲಾ `ಅಪಪ್ರಚಾರ' ಮಾಡ್ತಿರೋದ್ರಿಂದ ಚಿತ್ರತಂಡ ಹೊಸ ಪ್ಲಾನ್ ಮಾಡಿದೆ.
ಅದೇನೆಂದರೆ, ಚಿತ್ರಕ್ಕೆ ಸೂಚಿಸಲಾಗಿರುವ `ಚಿಹ್ನೆ' ಬಿಟ್ರೆ, ಬೇರೆ ಇನ್ಯಾವುದೇ ಪದದಿಂದ ಚಿತ್ರವನ್ನ ಕರೆಯುವ ಹಾಗಿಲ್ಲ. ಅಪ್ಪಿತಪ್ಪಿ ಕೂಡ ಪಟ್ಟಿ, ನಾಮ ಅಂತ ಹೇಳುವ ಹಾಗೂ ಇಲ್ಲ. ಯಾಕಂದ್ರೆ, ಅದ್ರಿಂದ ಮೂಲ ಶೀರ್ಷಿಕೆಗೆ ಧಕ್ಕೆಯಾಗುತ್ತೆ ಅಂತ ನಿರ್ದೇಶಕ ಶ್ರೀನಿವಾಸ್ ರಾಜು ಎಲ್ಲಾ ಮಾಧ್ಯಮಗಳಿಗೆ ಹಾಗೂ ಪತ್ರಿಕೆಗಳಿಗೆ ಪ್ರಕಟಣೆ ಹೊರಡಿಸಿದ್ದಾರೆ.
"ಸಿನಿಮಾ ಬಗ್ಗೆ ಲೇಖನ ಬರೆಯುವುದಾದರೆ ಚಿಹ್ನೆಯನ್ನು ಮಾತ್ರ ಬಳಸಿ, ಚಿಹ್ನೆಯಿಂದಷ್ಟೇ ಚಿತ್ರವನ್ನ ಗುರುತಿಸಿ" ಅಂತ ಮನವಿ ಮಾಡಿದ್ದಾರೆ. ಅದೇನೋ ಸರಿ..! ಉಪ್ಪಿಯ ಈ ಹಿಂದಿನ ಸಿನಿಮಾ 'ಸೂಪರ್'ಗೂ ಚಿಹ್ನೆಯಿಂದಲೇ ಗುರುತಿಸಲಾಗಿತ್ತು ಬಿಡಿ.
ಆದ್ರೆ ಈ ಚಿಹ್ನೆಯನ್ನ ಜನಸಾಮಾನ್ಯರು ಏನಂತ ಗುರುತಿಸುತ್ತಾರೆ...? ಚಿತ್ರದ ಬಗ್ಗೆ ಮಾತನಾಡುವಾಗ ಹಣೆಗೆ ವಿಭೂತಿ ಪಟ್ಟಿ ಎಳೆದು ತೋರಿಸಬೇಕಾ...? ಇದಕ್ಕೆ ಉತ್ತರ ಆ ಶ್ರೀನಿವಾಸನೇ ಬಲ್ಲ...! (ಫಿಲ್ಮಿಬೀಟ್ ಕನ್ನಡ)